April 27, 2024

Bhavana Tv

Its Your Channel

೧೫ ಲಕ್ಷ ರೂ ಸ್ವಂತ ಖರ್ಚಿನಲ್ಲಿ ವಿತರಿಸುವ ಮೂಲಕ ಡಾ. ವೈ ಎಂ ಚಂದ್ರಶೇಖರಮೂರ್ತಿ ದೊಡ್ಡ ಕೊಡುಗೆ

ಮಳವಳ್ಳಿ ತಾಲೂಕಿನ ಪ್ರತೀ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಸ್ಯಾಚುರೇಟೆ ಮಿಷನ್, ಟೆಂಪರೇಚರ್ ಪರೀಕ್ಷೆಯ ಉಪಕರಣ, ಬಿ ಪಿ ಮಾನೀಟರ್ ಮುಂತಾದ ಉಪಕರಣಗಳ ಕಿಟ್ ನ್ನು ಸುಮಾರು ೧೫ ಲಕ್ಷ ರೂ ಸ್ವಂತ ಖರ್ಚಿನಲ್ಲಿ ವಿತರಿಸುವ ಮೂಲಕ ಡಾ. ವೈ ಎಂ ಚಂದ್ರಶೇಖರಮೂರ್ತಿ ದೊಡ್ಡ ಕೊಡುಗೆ ನೀಡಿದ್ದಾರೆ.

ಮಳವಳ್ಳಿ : ತಮ್ಮದೇ ಆದ ಕೊಡುಗೆ ನೀಡಿ ಜನಪರ ಕಾಳಜಿ ಮೆರೆದಿರುವ ಬೆಂಗಳೂರಿನ ಇ ಎಸ್ ಐ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರು ಇದೇ ತಾಲೂಕಿನ ಯಮದೂರು ಗ್ರಾಮದವರಾದ ಡಾ. ವೈ ಎಂ ಚಂದ್ರಶೇಖರಮೂರ್ತಿ ಅವರು ಇಂದು ಕೊನೆಯ ಹಂತವಾಗಿ ಮಳವಳ್ಳಿ ಪಟ್ಟಣ, ಅಗಸನಪುರ, ಹುಸ್ಕೂರು, ನಿಟ್ಟೂರು, ಯತ್ತಂಬಾಡಿ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಉಪಕರಣಗಳ ಕಿಟ್ ವಿತರಿಸುವ ಮೂಲಕ ತಾಲೂಕಿನ ಎಲ್ಲಾ ೧೭೮ ಗ್ರಾಮಗಳ ಆಶಾ ಕಾರ್ಯಕರ್ತೆ ಯರಿಗೂ ಕಿಟ್ ವಿತರಿಸಿ ತಾಲೂಕಿನ ಎಲ್ಲಾ ಗ್ರಾಮಗಳ ಜನರ ಆರೋಗ್ಯ ರಕ್ಷಣೆಗೆ ತಮ್ಮದೇ ಆದ ಬಹು ದೊಡ್ಡ ಕೊಡುಗೆ ನೀಡಿದರು.

ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಪಟ್ಟಣ ವ್ಯಾಪ್ತಿಯ ಆಶಾ ಕಾರ್ಯಕರ್ತೆರಿಗೆ ಕಿಟ್ ವಿತರಿಸಿ ಮಾತನಾಡಿದ ಡಾ. ವೈ ಎಂ ಚಂದ್ರಶೇಖರಮೂರ್ತಿ ಅವರು ನಮ್ಮ ತಾಲೂಕಿನಲ್ಲಿ ಕರೋನ ದಿಂದಾಗಿ ಭಾರಿ ಪ್ರಮಾಣದಲ್ಲಿ ಸಾವುನೋವುಗಳ ಸಂಖ್ಯೆಯನ್ನು ಗಮನಿಸಿದ ನಾನು ಪ್ರತೀ ಗ್ರಾಮದಲ್ಲಿ ಜನರ ಆರೋಗ್ಯ ಪರೀಕ್ಷೆಗೆ ಬೇಕಾದ ಉಪಕರಣಗಳು ಇಲ್ಲದಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣ ಎಂಬುದನ್ನು ಮನಗಂಡು ಪ್ರತೀ ಗ್ರಾಮಕ್ಕೂ ಈ ಉಪಕರಣಗಳ ಕಿಟ್ ತಲುಪಿಸಿ ಆ ಮೂಲಕ ಜನರ ಸಾವಿನ ಪ್ರಮಾಣವನ್ನು ನಿಯಂತ್ರಿಸಬೇಕೆAಬ ಸಂಕಲ್ಪ ದೊಂದಿಗೆ ಈ ಅಭಿಯಾನ ಆರಂಭಿಸಿದೆ ಎಂದು ತಿಳಿಸಿದರು.

ನನ್ನ ಈ ಪ್ರಯತ್ನ ಇಂದು ಸಫಲವಾಗಿದ್ದು ಈ ಉಪಕರಣಗಳನ್ನು ಬಳಸಿಕೊಂಡು ಪ್ರತೀ ಗ್ರಾಮದಲ್ಲೂ ಆಶಾ ಕಾರ್ಯಕರ್ತೆಯರು ಸ್ಥಳದಲ್ಲೇ ಪ್ರತಿಯೊಬ್ಬರ ಆರೋಗ್ಯ ಪರೀಕ್ಷೆ ಮಾಡಿ ತುರ್ತು ಚಿಕಿತ್ಸೆ ಅಗತ್ಯ ವಿರುವವರನ್ನು ಗುರುತಿಸಿ ಅವರನ್ನು ಆಸ್ಪತ್ರೆ ಗಳಿಗೆ ಸಾಗಿಸಿದ ಫಲವಾಗಿ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಯಮದೂರು ಸಿದ್ದರಾಜು. ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಅಪ್ಪಾಜಿಗೌಡ ಅವರು ಡಾ. ಚಂದ್ರಶೇಖರಮೂರ್ತಿ ಅವರ ಜನಮುಖಿ ಕಾಳಜಿಯನ್ನು ಪ್ರಶಂಸಿಸಿದರು.
ಎಲ್ ಚೇತನ್ ಕುಮಾರ್ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: