April 26, 2024

Bhavana Tv

Its Your Channel

ಭಯ ಬಿಟ್ಟು ಅರಿವು, ಸ್ವಚ್ಚತೆ, ಮುಂಜಾಗ್ರತೆ ಕಾಯ್ದುಕೊಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷೆ ಉಮಾ

ಮಳವಳ್ಳಿ ; ಕರೋನ ಸೊಂಕು ಜಗತ್ತನ್ನೆ ಅವರಿಸಿದೆ ಅದರ ಒಟ್ಟಿಗೆ ಬದುಕ ಬೇಕಿದೆ ಹಾಗಾಗಿ ನಾವು ಭಯ ಬಿಟ್ಟು ಅರಿವು, ಸ್ವಚ್ಚತೆ, ಮುಂಜಾಗ್ರತೆ ಕಾಯ್ದುಕೊಳ್ಳ ಬೇಕೆಂದು ನೆಲಮಾಕನಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಉಮಾ ತಿಳಿಸಿದರು.

ಅವರು ತಾಲೂಕಿನ ಕಾಳಕೆಂಪನದೊಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಾರ್ಯಪಡೆ ಅಯೋಜಿಸಿದ್ದ ಕರೋನ ಜಾಗೃತಿ. ಕೋವಿಡ್ ಪರೀಕ್ಷೆ ಬಿಪಿ. ಶುಗರ್. ಆಕ್ಷೀಜನ್ ಸ್ಯಾಚುರೇಶನ್ ಪರೀಕ್ಷೆ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಗಳಾದ ಶಶಿಧರ್ ಅವರು ಮನೆ ಬಾಗಲಿಗೆ ಬಂದು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ರೀತಿಯ. ಪರೀಕ್ಷೆಗಳನ್ನ ನಡೆಸಲಾಗುತ್ತಿದೆ ಜನರು ಆರೋಗ್ಯ ದೃಷ್ಟಿಯಲ್ಲಿ ಇದನ್ನು ಸದುಪಯೋಗ ಪಡೆಸಿಕೊಳ್ಳಿ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಪಂಚಾಯತಿ ಕಾರ್ಯದರ್ಶಿ ಚೆಲುವರಾಜ್ ಮಹಾದೇವು ಸದಸ್ಯರಾದ ನಾಗರಾಜ್ ನಾಗಪ್ಪ ಡಾ. ಅಶ್ವೀನ್ ಲ್ಯಾಬ್ ಟೆಕ್ನಿಶೀಯನ್ ಶಿವರತ್ನಮ್ಮ .ಆಶಾ ಕಾರ್ಯಕರ್ತೆ ಸುಜಾತ ಮಹಾದೇಮ್ಮ ಗೀತಾ ಸುಮಾ ಲತಾಮಣಿ ಶಿಕ್ಷಕರಾದ ಮಾರುತಿ ಹಾಜರಿದ್ದರು.

ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ. ಮಳವಳ್ಳಿ.

error: