April 27, 2024

Bhavana Tv

Its Your Channel

ಹಾಲಿನ ಗುಣಮಟ್ಟ ಪರೀಕ್ಷಿಸುವ ಲ್ಯಾಕ್ಟೋಮೀಟರ್ ನಲ್ಲಿ ವ್ಯತ್ಯಾಸ, ಹಾಲಿನ ವಾಹನ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ.

ಮಂಡ್ಯ : ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಮಿಶ್ರಿತ ಹಗರಣ ಬಯಲಾಗಿ ತನಿಖೆ ಹಂತದಲ್ಲಿರುವಾಗಲೇ ಹಾಲಿನ ಗುಣಮಟ್ಟ ಪರೀಕ್ಷಿಸುವ ಲ್ಯಾಕ್ಟೋಮೀಟರ್ ನಲ್ಲಿ ವ್ಯತ್ಯಾಸ ಮಾಡುವ ದಂದೆ ಬೆಳಕಿಗೆ ಬಂದಿದ್ದು ನಾಗಮಂಗಲ ತಾಲೂಕಿನ ಕರಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಹಾಲನ್ನು ಕಳೆದೊಂದು ವಾರದಿಂದ ಕಳಪೆ ಗುಣಮಟ್ಟದ ಹಾಲು ಎಂದು ತಿರಸ್ಕರಿಸುತ್ತಿರುವುದನ್ನು ಖಂಡಿಸಿ ಹಾಲಿನ ವಾಹನ ತಡೆದು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಕರಡಹಳ್ಳಿ ಗ್ರಾಮದ ಬಿಎಂಸಿ ಕೇಂದ್ರದಿAದ ಪ್ರತಿನಿತ್ಯ ಕನಿಷ್ಠ ಮೂರು ಸಾವಿರಕ್ಕೂ ಅಧಿಕ ಲೀಟರ ಹಾಲು ಮಂಡ್ಯ ಒಕ್ಕೂಟಕ್ಕೆ ಪೂರೈಕೆಯಾಗುತ್ತಿದ್ದು ಟ್ಯಾಂಕರ್‌ಗೆ ಹಾಲು ತುಂಬಿಕೊಳ್ಳುವ ಸಮಯದಲ್ಲಿ ಗುಣಮಟ್ಟ ಪರಿಶೀಲಿಸುವ ಲಾರಿ ಸಿಬ್ಬಂದಿಗಳು ತಮ್ಮಲ್ಲಿರುವ ಲ್ಯಾಕ್ಟೊಮೀಟರ್‌ನಲ್ಲಿ ಪರೀಕ್ಷಿಸಿ ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಇದರಿಂದಾಗಿ ಹೈನುಗಾರಿಕೆಯನ್ನು ಅವಲಂಬಿಸಿಕೊAಡಿರುವ ರೈತರಿಗೆ ಹಾಲಿನ ದರ ಕಡಿಮೆ ಮಾಡುವ ಜೊತೆಗೆ ಸರ್ಕಾರದಿಂದ ಸಿಗುವ ಲೀಟರ್‌ಗೆ ೫ ರೂ ಪ್ರೋತ್ಸಾಹಧನ ಕೂಡಾ ಸಿಗುವುದಿಲ್ಲ. ಹಾಗಾಗಿ ಉತ್ಪಾದಕರಾದ ನಮಗೆ ನಷ್ಟವಾಗುತ್ತದೆ ಎಂದು ಆಗ್ರಹಿಸಿದ ರೈತರು ಹಾಲಿನ ಟ್ಯಾಂಕರ್ ತಡೆದು ಸಂಬAಧಿಸಿದ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕೆಂದು ಪಟ್ಟುಹಿಡಿದರು.

ಕರಡಹಳ್ಳಿ ಬಿಎಂಸಿ ಕೇಂದ್ರದವರು ಜಿಲ್ಲಾ ಹಾಲು ಒಕ್ಕೂಟದ ನಾಗಮಂಗಲ ಕೇಂದ್ರದಲ್ಲಿಯೇ ಖರೀದಿಸಿರುವ ಲ್ಯಾಕ್ಟೊಮೀಟರ್‌ನಲ್ಲಿ ಹಾಲಿನ ಗುಣಮಟ್ಟ ೨೮.೫ ಡಿಗ್ರಿ ತೋರಿಸಿದರೆ ಲಾರಿ ಚಾಲಕನ ಬಳಿ ಇರುವ ಲ್ಯಾಕ್ಟೊಮೀಟರ್ ನಲ್ಲಿ ೨೭ ಡಿಗ್ರಿ ಬರುತ್ತಿದೆ ಇದಕ್ಕೆ ಹೊಣೆ ಯಾರು ಈ ದಂಧೆಯ ಹಿಂದೆ ಯಾರ ಕೈವಾಡವಿದೆ ಇದೊಂದು ದೊಡ್ಡ ಜಾಲವೇ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ ರೈತರು ಅಧಿಕಾರಿಗಳು ಸ್ಥಳಕ್ಕೆ ಬಂದು ಎರಡು ಲ್ಯಾಕ್ಟೊಮೀಟರ್‌ನ ದೋಷ ಏನೆಂದು ತಿಳಿಸಬೇಕು ಅಲ್ಲದೆ ಇದಕ್ಕೂ ಮುನ್ನ ಟ್ಯಾಂಕರ್ ನಲ್ಲಿ ಈ ಹಿಂದಿನ ನಾಲ್ಕು ಬಿಎಂಸಿ ಗಳಲ್ಲಿ ತುಂಬಿಕೊAಡು ಬಂದಿರುವ ಹಾಲನ್ನು ಸಹ ಗುಣಮಟ್ಟ ಪರೀಕ್ಷಿಸಬೇಕು ಅಲ್ಲಿಯವರೆಗೂ ಬಿಡುವುದಿಲ್ಲ ಎಂದು ಟ್ಯಾಂಕರ್ ತಡೆದು ನಿಲ್ಲಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ಕೊಟ್ಟ ಮನ್ ಮುಲ್ ಅಧಿಕಾರಿಗಳು ೨ ಲ್ಯಾಕ್ಟೋಮೀಟರ್ ಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ನಡೆಸಿದರು ಈ ವೇಳೆ ಒಂದೊAದು ಲ್ಯಾಕ್ಟೊಮೀಟರ್ ನಲ್ಲಿ ವ್ಯತ್ಯಾಸ ಕಂಡುಬAತು ಇದರಿಂದ ರೈತರಲ್ಲಿ ಇದ್ದ ಅನುಮಾನ ಮತ್ತಷ್ಟು ಹೆಚ್ಚಾಯಿತು.

ಲಾಕ್ಟಮೀಟರ್ ನಲ್ಲಿರುವ ದೋಷವನ್ನು ಸರಿಪಡಿಸಲಾಗುವುದು ಈಗ ಟ್ಯಾಂಕರ್ ಗೆ ಹಾಲನ್ನು ತುಂಬಿಸಿ ಲಾರಿ ಕಳುಹಿಸಿಕೊಡಿ ಎಂದು ಮನವಿ ಮಾಡಿದರಾದರೂ ರೈತರು ಸಂಜೆ ವರೆಗೂ ಟ್ಯಾಂಕರ್ ಬಿಟ್ಟಿರಲಿಲ್ಲ. ರೈತರ ಮನವೊಲಿಸಿದ ಅಧಿಕಾರಿಗಳು ಹಾಲನ್ನು ತುಂಬಿಸಿ ಟ್ಯಾಂಕರ್ ತೆಗೆದುಕೊಂಡು ಹೋದರು.

ವರದಿ ; ಚಂದ್ರಮೌಳಿ ನಾಗಮಂಗಲ

error: