April 24, 2024

Bhavana Tv

Its Your Channel

ಕೊರೋನಾ ವಾರ್ರಿಯಸ್‌ಗಳಿಗೆ ಅಭಿನಂದನೆ

ಮoಡ್ಯ ನಗರದ ಸಿಲ್ವರ್‌ಜ್ಯೂಬಿಲಿ ಪಾಕ್ ನಲ್ಲಿ ಶುಗರ್ ಹೋಂಡಾ ಸಂಸ್ಥೆ ಆಯೋಜಿಸಿದ್ದ ಶುಗರ್ ಹೋಂಡಾ ಮೇಳ ಮತ್ತು ಕೊರೋನಾ ವಾರ್ರಿಯಸ್ ಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಎಂ. ಅಶ್ವಿನಿ ಮತ್ತು ಡಿಎಚ್.ಓ ಧನಂಜಯ ಅವರು ಕೋರೋನಾ ವಾರ್ರಿಯಸ್‌ಗಳನ್ನು ಅಭಿನಂದಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧನಂಜಯ ಅವರು, ಕೋವಿಡ್-೧೯ ೩ನೇ ಅಲೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸನ್ನದ್ದವಾಗಿದೆ, ನಾಗರೀಕರು ಕೋರೋನಾ ಲಸಿಕೆ ಪಡೆದುಕೊಂಡರೆ ಮಾತ್ರ ಕೋವಿಡ್ ಸಾವಿನಿಂದ ಪಾರಾಗಬಹುದು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಕೋವಿಡ್ ಲಸಿಕೆಯನ್ನು ೧೩.೫ ಲಕ್ಷ ಡೋಸ್ ನೀಡಲು ನಿರ್ದರಿಸಿದ್ದು, ಪ್ರಥಮವಾಗಿ ೧೧.೫ಲಕ್ಷ ಡೋಸ್ ನೀಡಿದ್ದು, ಇಂದು ೬೦ ಸಾವಿರ ಡೋಸ್ ನೀಡಲು ಮುಂದಾಗಿದ್ದೇವೆ ಎಂದರು.
ಈಗಾಗಲೇ ಕೋವಿಡ್-೧೯ ೩ನೇ ಅಲೆ ಪ್ರಪಂಚದ ವಿವಿಧ ದೇಶಗಳಲ್ಲಿ ಕಾಣಿಸಿಕೊಂಡಿದೆ, ಕೋವಿಡ್ ಲಸಿಕೆ ಪಡೆಯದೆ ಇರುವುವವರು ಮಾತ್ರ ಸಾವನ್ನಪ್ಪುತ್ತಿದ್ದಾರೆ, ಭಾರತದೇಶದಲ್ಲಿ ಸುಮಾರು ೮೫ ಕೋಟಿ ಮಂದಿಗೆ ಲಸಿಕೆಯಾಗಿದೆ, ಲಸಿಕೆ ಪಡೆಯಲು ಉದಾಶೀನ ಬೇಡ, ಕಡ್ಡಾಯವಾಗಿ ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯಿರಿ, ಕೋವಿಡ್ ನಿಯಂತ್ರಣಕ್ಕೆ ಲಸಿಕೆಯೊಂದೇ ರಾಮಬಾಣವಾಗಿದೆ ಎಂದು ತಿಳಿಸಿದರು.
ಕೊರೋನಾ ವಾರ್ರಿಯಸ್ ಗಳಿಗೆ ಅಭಿನಂದನೆ ಸಲ್ಲುತ್ತಿರುವುದು ಅವರಿಗೆ ಹೊಸಚೈತನ್ಯ ತುಂಬಿದAತಾಗುತ್ತದೆ, ಅವರು ಮತ್ತಷ್ಟು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ, ಸಂಘ ಸಂಸ್ಥೆಗಳು, ಕಂಪನಿಗಳು ನೆರವಾಗುತ್ತಿರುವುದು ಉತ್ತಮ ಸೇವಾಕಾರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊರೋನಾ ವಾರ್ರಿಯಸ್ ಗಳಾದ ದಾದಿಯರು ಮತ್ತು ಸಿಬ್ಬಂದಿಗಳಿಗೆ ಗಣ್ಯರು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆರ್.ಟಿಓ ಅಧಿಕಾರಿ ವಿವೇಕಾನಂದ, ಶುಗರ್ ಮೋರ‍್ಸ್ ಸಿಇಓ ಮೂರ್ತಿ, ವ್ಯವಸ್ಥಾಪಕರುಗಳಾದ ಮಥ್ಯೂ, ವೆಂಕಟರಾಜು, ದೀನೇಶ್, ಕಾಂತರಾಜು, ಕೊರೋನಾ ಪ್ರಶಂಸಾರ್ಹ ಪುರಸ್ಕೃತ ಎಂ.ಲೋಕೇಶ್ ಮತ್ತಿತರರರಿದ್ದರು.
ವರದಿ ; ಲೋಕೇಶ್ ಮಂಡ್ಯ

error: