May 15, 2024

Bhavana Tv

Its Your Channel

125ನೇ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆ ಕಾರ್ಯಕ್ರಮ

ಮಂಡ್ಯ:– ಇಂದು ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಹಾಗೂ ಗುತ್ತಲು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ 125ನೇ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಲಯನ್ ಹನುಮಂತು ರವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟಿಸಿದರು.

ನಂತರ ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಸ್ವತಂತ್ರ ಪೂರ್ವದಲ್ಲಿ ಸ್ವತಂತ್ರ ಹೋರಾಟ ಮಾಡಿದ ಮಹಾಪುರುಷ ಅವರಾಗಿದ್ದರು ಎಂದರು.

ಮಂಡ್ಯ ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಹಿರಿಯ ವಕೀಲ ಎಂ. ಗುರುಪ್ರಸಾದ್ ಮಾತನಾಡಿ ಸಮಾಜಸೇವೆಯಿಂದ ಜೀವನವೇ ಆನಂದ ಎಂಬAತೆ ಪ್ರತಿಯೊಬ್ಬ ಮನುಷ್ಯನು ನಮಗೆ ಸ್ವಾತಂತ್ರ‍್ಯ ತಂದುಕೊಟ್ಟ ಮಹಾನ್ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ . ಸುಭಾಷ್ ಚಂದ್ರ ಬೋಸ್ ರವರ ಭಾವಚಿತ್ರವನ್ನು ಕಡ್ಡಾಯವಾಗಿ ಎಲ್ಲರ ಮನೆಯಲ್ಲಿ ಇಡುವ ಮುಖಾಂತರ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾದರಿಯಾಗುತ್ತದೆ .ಪ್ರತಿಯೊಬ್ಬರು ನಿರ್ಭಯವಾಗಿ ನಾಡಿನಲ್ಲಿ ಬದುಕಬೇಕು ಸ್ವತಂತ್ರ ಜೀವನ ನಡೆಸುವ ಬಗ್ಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಶಯವಾಗಿತ್ತು. ಯುವಕ-ಯುವತಿಯರು ದುಶ್ಚಟಗಳಿಂದ ದೂರ ಉಳಿದು ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ಪ್ರೇಮಿಗಳಾಗಿ ಹೊರಹೊಮ್ಮುವಂತೆ ಮನವಿ ಮಾಡಿದರು.

ನಗರಸಭಾ ಸದಸ್ಯೆ ಸೌಭಾಗ್ಯ ಶಿವಲಿಂಗಯ್ಯ ಮಾತನಾಡಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುವಂತೆ ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಮೃತ ಲಯನ್ಸ್ ಅಧ್ಯಕ್ಷ ಎಂ.ಲೋಕೇಶ್ ಮಾತನಾಡಿ ನೊಂದವರ ಬಾಳಲ್ಲಿ ಬೆಳಕಾಗುವುದು ಮತ್ತು ಗಣ್ಯರ ನೆನಪಿನ ಅರ್ಥ ಕಾರ್ಯಕ್ರಮವನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಸತೀಶ್ ಬಾಬು ಡಾ. ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು. ಇದೇ ಸಂದರ್ಭದಲ್ಲಿ ಎಲ್ಲರಿಗೂ ಸಿಹಿಯನ್ನು ಮತ್ತು ನೂತನ ವರ್ಷ ವರ್ಷದ ಮಂಡ್ಯ ಅಮೃತ ಲಯನ್ಸ್ ಕ್ಯಾಲೆಂಡರನ್ನು ವಿತರಿಸಲಾಯಿತು

ವರದಿ: ಲೋಕೇಶ ಮಳವಳ್ಳಿ

error: