May 18, 2024

Bhavana Tv

Its Your Channel

ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಬಿ ಎಂ ಕಿರಣ್, ಪರೀಕ್ಷಾ ಕಿಟ್ ಗಳನ್ನು ವಿತರಣೆ

ಕಿಕ್ಕೇರಿ ; ಎಸ್ ಎಸ್ ಎಲ್ ಸಿ ಪರೀಕ್ಷೆಯು ವಿದ್ಯಾರ್ಥಿಗಳ ಪಾಲಿಗೆ ನಿರ್ಣಾಯಕ ಘಟ್ಟವಾಗಿದೆ ಈ ಹಂತದಲ್ಲಿ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಬಿ ಎಂ ಕಿರಣ್ ತಿಳಿಸಿದ್ರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ವ್ಯಾಪ್ತಿಗೆ ಬರುವ ಎಲ್ಲಾ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಿಟ್ ಗಳನ್ನು ವಿತರಣೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿ ಶುಭ ಕೋರಿದರು.

ಕಿಕ್ಕೇರಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ,ಮಾಕವಳ್ಳಿ, ಆನೆಗೊಳ, ಕೃಷ್ಣಾಪುರ, ಚುಜ್ಜಲ ಕ್ಯಾತನಹಳ್ಳಿ, ಮಂದಗೆರೆ, ಕಿಕ್ಕೇರಿ ಕೆಂಬ್ರಿಡ್ಜ್ ಸ್ಕೂಲ್ ಗೆ ಬರುವ ಸುಮಾರು ೬೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದರೆ ತಾವು ಓದಿದ ಶಾಲೆ, ತಮ್ಮ ಪೋಷಕರಿಗೆ ಮತ್ತು ಗ್ರಾಮಕ್ಕೆ ಹೆಚ್ಚಿನ ಕೀರ್ತಿ ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಶೇ.೧೦೦ ರಷ್ಟು ಅಂಕಗಳನ್ನು ಪಡೆಯಲು ಶ್ರಮ ವಹಿಸಬೇಕು.ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆ ವಿಷಯಗಳತ್ತ ಗಮನ ನೀಡದೆ ಓದಿನತ್ತ ಮಾತ್ರ ಗಮನ ಹರಿಸಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂದರು.

ಗ್ರಾ ಪಂ ಸದಸ್ಯರಾದ ಜಯಲಕ್ಷ್ಮಮ್ಮ ಅವರು ಮಾತನಾಡಿ ಸಮಾಜ ಸೇವಕರಾದ ಬಿ ಎಂ ಕಿರಣ್ ಅವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ.ನಮ್ಮ ಹೋಬಳಿಯ ಎಲ್ಲಾ ಪ್ರೌಢಶಾಲಾ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಡವ ಶ್ರೀಮಂತ ಅನ್ನದೆ ಆ ಪಕ್ಷ ಈ ಪಕ್ಷ ಅಂತ ಬೇಧ ಭಾವ ಮಾಡದೆ ಎಲ್ಲಾ ಮಕ್ಕಳಿಗೂ ಪರೀಕ್ಷೆ ಕಿಟ್ ಗಳನ್ನು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.ಅವರು ಇನ್ನಷ್ಟು ಸಮಾಜ ಸೇವೆ, ರಾಜಕೀಯ ಸೇವೆ ಮಾಡಲು ಭಗವಂತ ಕಿರಣ್ ಅವರಿಗೆ ಶಕ್ತಿ ನೀಡಲಿ ಎಂದರು. ಆದ್ದರಿಂದ ಮಕ್ಕಳು ಇದನ್ನು ಸದುಪಯೋಗ ಪಡೆದುಕೊಂಡು ನಮ್ಮ ಹೋಬಳಿಗೆ, ನಿಮ್ಮ ತಂದೆ ತಾಯಿಗಳಿಗೆ,ನಿಮ್ಮ ಗ್ರಾಮಕ್ಕೆ, ನೀವು ಓದಿದ ಶಾಲೆಗೆ, ನಿಮಗೆ ವಿದ್ಯೆ ಕಲಿಸಿಕೊಟ್ಟ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಮಕ್ಕಳಿಗೆ ಪರೀಕ್ಷೆಯನ್ನು ಚೆನ್ನಾಗಿ ಬರೆಯಿರಿ ಎಂದು ಶುಭ ಕೋರಿದರು.


ಈ ಸಂದರ್ಭದಲ್ಲಿ ಬಿ.ಎಂ ಕಿರಣ್ ರವರ ಅಭಿಮಾನಿಗಳು ಭಾಗವಹಿಸಿದ್ದರು..

error: