June 15, 2024

Bhavana Tv

Its Your Channel

ವಿಶ್ವಕರ್ಮ ಸಮಾಜದ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟ

ಕೃಷ್ಣರಾಜಪೇಟೆ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪತ್ರಕರ್ತರು, ಪೋಲಿಸರು, ಕಂದಾಯ ಇಲಾಖೆಯ ನೌಕರರು, ಪುರಸಭೆಯ ನೌಕರರು, ಗೃಹರಕ್ಷಕ ದಳದ ಸಿಬ್ಬಂಧಿಗಳಿಗೆ ಹಾಗೂ ಆಶಾ, ಆರೋಗ್ಯ ಕಾರ್ಯಕರ್ತರಿಗೆ ವೈದ್ಯರಿಗೆ ಮಧ್ಯಾಹ್ನದ ಊಟ ವಿತರಣೆಗೆ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಪ್ರೆಸ್ ಕುಮಾರಸ್ವಾಮಿ ಚಾಲನೆ ನೀಡಿದರು.

ಕೊರೋನಾ ಲಾಕ್ ಡೌನ್ ನ ಸಂದಿಗ್ಧ ಸಮಯದಲ್ಲಿ ತಮ್ಮ ಜೀವದ ಹಂಗುತೊರೆದು ಸ್ವಾಸ್ಥ್ಯ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದುಡಿಯುತ್ತಿರುವ ಅಧಿಕಾರಿಗಳು ಹಾಗೂ ಕೊರೋನಾ ವಾರಿಯರ್ಸ್ ಗೆ ಬಿಸಿಬಿಸಿಯಾದ ಶುಚಿಯಾದ ಮಧ್ಯಾಹ್ನದ ಊಟವನ್ನು ವಿತರಿಸುವ ಕಾಯಕ ಮಾಡುತ್ತಿದ್ದೇವೆ. ಹಸಿದ ಹೊಟ್ಟೆಗೆ ಅನ್ನ ನೀಡುವುದು ಪುಣ್ಯದ ಕೆಲಸವಾದ್ದರಿಂದ ನಮ್ಮ ಈ ಕಾಯಕಕ್ಕೆ ಉತ್ತಮವಾದ ಸ್ಪಂದನೆ ದೊರೆಯುತ್ತಿದೆ ಎಂದು ಕುಮಾರಸ್ವಾಮಿ ಅಭಿಮಾನದಿಂದ ಹೇಳಿದರು…

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೊಬೈಲ್ ಪರಮೇಶ್, ಶಿಕ್ಷಕರಾದ ಆರ್.ಎನ್.ಶ್ರೀಧರ್, ಪತ್ರಕರ್ತ ಸೈಯ್ಯದ್ ಖಲೀಲ್, ಕೆ.ಸಿ.ವೆಂಟರಾಮು, ಹೆಚ್.ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ….

error: