May 1, 2024

Bhavana Tv

Its Your Channel

ಎಂ.ಡಿ.ಕೃಷ್ಣಮೂರ್ತಿ ಯವರಿಂದ ಪತ್ರಿಕಾಗೋಷ್ಠಿ

ಕಿಕ್ಕೇರಿ: ಕಾಂಗ್ರೇಸ್ ಪಕ್ಷಕ್ಕೆ ಕಳೆದ ೪೦ ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ ನನ್ನಗೆ ಅಧಿಕಾರ ಇದ್ದಾಗ ಪಟ್ಟಣದ ಅಭಿವೃದ್ಧಿ ಶ್ರಮಿಸಿದ್ದೇನೆ ಇದನ್ನು ಪರಿಗಣಿಸಿ ನನಗೆ ಮುಂದೆ ಬರುವ ವಿಧಾನಸಭಾ ಚುನಾಣೆಯಗೆ ಅಭ್ಯರ್ಥಿ ಆಕಾಂಕ್ಷಿ ಆಗಿದ್ದೇನೆ ನನಗೆ ಪಕ್ಷ ಟಿಕೆಟ್ ನೀಡಬೇಕು ಎಂದು ಎಂ.ಡಿ.ಕೃಷ್ಣಮೂರ್ತಿ ತಿಳಿಸಿದರು.

ಕೃಷ್ಣರಾಜಪೇಟೆ ಪಟ್ಟಣದ ರಾಮದಾಸ್ ಹೋಟೇಲ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾನು ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿರುವ ನಾನು ೧೯೯೮ರಲ್ಲಿ ಎಸ್.ಎಂ.ಕೃಷ್ಣ ಅವರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾಗ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೇಸ್ ಅಧ್ಯಕ್ಷನಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿ ಒಂದು ವರ್ಷ ಕಾರ್ಯನಿರ್ವಹಿಸಿದ್ದೇನೆ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಭಾರತ ಆಹಾರ ನಿಗಮದ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿ, ಕೆ.ಆರ್.ಐ.ಡಿ.ಎಲ್, ನಿರ್ದೇಶಕನಾಗಿ ೨೦೧೭ರಲ್ಲಿ ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ಕೆ.ಆರ್.ಪೇಟೆ ಪಟ್ಟಣಕ್ಕೆ ಹೇಮಾವತಿ ನದಿಯಿಂದ ೨೭ ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ, ೧೨ ಕೋಟಿ ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಯೋಜನೆ ಹಾಗೂ ಕೆ.ಆರ್.ಪೇಟೆ ಪುರಸಭೆ ವತಿಯಿಂದ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ೬ ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಕೊಟ್ಟಿರುವುದು ಪಟ್ಟಣದ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ

ನಾನು ಕೆ.ಆರ್ .ಪೇಟೆ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಿರಿಯ ನಾಯಕ ಕೆ.ಬಿ.ಚಂದ್ರಶೇಖರ್, ಎರಡು ಬಾರಿ ಗೆಲುವು ಸಾಧಿಸಿದ್ದಾರೆ, ಏಳು ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡಿ ಎರಡು ಬಾರಿ ಗೆದ್ದು, ಈ ಬಾರಿ ಸೋಲು ಕಂಡಿರುವ ಕೆ.ಬಿ.ಚಂದ್ರಶೇಖರ್ ಅವರ ಎಲ್ಲಾ ಚುನಾವಣೆಗಳಲ್ಲಿ ಸಕ್ರಿಯ ಕಾರ್ಯಕರ್ತನಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.

ರಸ್ತೆ ೪೦ ವರ್ಷದ ಅಧೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಗೆ ದುಡಿದಿದ್ದೇನೆ, ನನಗೀಗ ೬೬ ವರ್ಷ ವಯಸ್ಸಾಗುತ್ತಿದೆ. ಇದು ನನ್ನ ರಾಜಕೀಯ ಜೀವನದ ಅಂತಿಮ ಘಟ್ಟದ ಕೊನೆಯ ಚುನಾವಣೆಯಾಗಿದೆ, ೨೦೧೩ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲರೂ ಕೈ ಜೋಡಿಸಿ ನನ್ನಗೆ ಒಂದು ಅವಕಾಶ ನೀಡಿ ನಾನು ನನ್ನ ತಾಲ್ಲೂಕನ್ನು ಅಭಿವೃದ್ಧಿ ಪಡಿಸಬೇಕೆಂದು ಬಯಕೆ ನನ್ನಲಿದೆ ಎಂದರು..

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೋಡಿಮರನಹಳ್ಳಿ ದೇವರಾಜು, ಕರ್ನಾಟಕ ಕುರುಬರ ಸಂಘದ ನಿರ್ದೇಶಕ ಶಶಿಧರ್ ಸಂಘಾಪುರ, ಕಾಂಗ್ರೆಸ್ ಜಿಲ್ಲಾ ಪಕ್ತಾರರಾದ ಮಾದಾಪುರ ರಾಮಕೃಷ್ಣೇಗೌಡ, ನಿವೃತ್ತ ಪ್ರಶುಂಪಾಲ ಜಾನೇಗೌಡ್ರು, ಜಿಲ್ಲಾ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದೀವಾಕರ್ ಸೇರಿದಂತೆ ಮತ್ತಿತ್ತರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: