April 27, 2024

Bhavana Tv

Its Your Channel

ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್

ಕಿಕ್ಕೇರಿ: ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾ.ಪಂ.ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಅಭಿಪ್ರಾಯಪಟ್ಟರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ವೈಯುಕ್ತಿಕವಾಗಿ 25,000 ರೂಗಳನ್ನು ದೇಣಿಗೆಯಾಗಿ ನೀಡಿ ಗ್ರಾಮಸ್ಥರನ್ನು ಕುರಿತು ಮಾತನಾಡಿದರು.

ದೇವಾಲಯಗಳ ಭೇಟಿಯಿಂದ ಸಂತೋಷ,ನೆಮ್ಮದಿ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ.ಇತ್ತೀಚಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನೂತನವಾಗಿ ದೇವಾಲಯಗಳು ಲೋಕಾರ್ಪಣೆ ಮಾಡಲಾಗುತ್ತಿದೆ.ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವನ್ನು ಪ್ರಗತಿಯಲ್ಲಿ ಸಾಗುತ್ತಿವೆ.ಜನರಲ್ಲಿ ದೇವರಲ್ಲಿ ನಂಬಿಕೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಗ್ರಾಮಗಳಲ್ಲಿ ವಾಸಿಸುವ ಎಲ್ಲಾ ವರ್ಗದವರು ದ್ವೇಷ,ಅಸಮತೆಯನ್ನು ಮಾಡದೇ ಎಲ್ಲರೂ ಒಗ್ಗಟ್ಟಾಗಿ ನೆಮ್ಮದಿಯಿಂದ ಜೀವನ ನಡೆಸಬೇಕು.ಉಳ್ಳವರು ದೇವಾಲಯಗಳ ಜೀರ್ಣೋದ್ಧಾರಕ್ಕೆ ವೈಯುಕ್ತಿಕವಾಗಿ ಸಹಾಯವನ್ನು ಮಾಡಿದರೆ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮೀಪುರ ಚಂದ್ರೇಗೌಡ, ಶ್ರೀ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗ್ರಾ. ಪಂ.ಮಾಜಿ ಉಪಾಧ್ಯಕ್ಷರಾದ ರಮೇಶ್, ಕಾರ್ಯದರ್ಶಿ ಬಸವೇಗೌಡ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದಿನೇಶ್,ಹರೀಶ್,ಹಿರಿಯ ಮುಖಂಡರುಗಳಾದ ಪುಟ್ಟಸ್ವಾಮಿಗೌಡ,ಬಿ ಸುರೇಶ್, ರವಿಗೌಡ,ಮಹದೇವಪ್ಪ, ಜಗದೀಶ್,ಸುರೇಶ್,ಕುಮಾರ್, ಸತೀಶ್,ಅಶೋಕ್,ಮಹೇಶ್ ಸೇರಿದಂತೆ ಇತರೆ ಮುಖಂಡರ ಭಾಗವಹಿಸಿದ್ದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: