May 14, 2024

Bhavana Tv

Its Your Channel

ಸಚಿವರಾದ ನಾರಾಯಣಗೌಡ ಅವರನ್ನು ಭೇಟಿ ಮಾಡಿ ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಮತ್ತೆ ಅಕ್ರಮವಾಗಿ ಆರಂಭವಾಗಿರುವ ೫೦ಕ್ಕೂ ಹೆಚ್ಚಿನ ಕ್ರಷರ್ ಗಳನ್ನು ನಿಲ್ಲಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಮನವಿ

ಮಂಡ್ಯ ; ಬೇಬಿಬೆಟ್ಟ ಉಳಿಸಿ ಕನ್ನಂಬಾಡಿ ಕಟ್ಟೆ ರಕ್ಷಿಸಿ ರೈತ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ರಾಜ್ಯದ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರನ್ನು ಕೆ.ಆರ್.ಪೇಟೆ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಮತ್ತೆ ಅಕ್ರಮವಾಗಿ ಆರಂಭವಾಗಿರುವ 50ಕ್ಕೂ ಹೆಚ್ಚಿನ ಕ್ರಷರ್ ಗಳನ್ನು ನಿಲ್ಲಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು..ಕೆ.ಆರ್.ಎಸ್ ಅಣೆಕಟ್ಟನ್ನು ಉಳಿಸಬೇಕು ಎಂದು ಮನವಿ ಮಾಡಿದರು ….

ಮೇಲುಕೋಟೆ ಕ್ಷೇತ್ರದ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರ ಕುಮ್ಮಕ್ಕಿನಿಂದಲೇ ಬೇಬಿಬೆಟ್ಟದಲ್ಲಿ ಅಕ್ರಮವಾಗಿ ಕ್ರಷರ್ ಗಳ ಮಾಲೀಕರು ಮೆಗ್ಗರ್ ಬ್ಲಾಸ್ಟ್, ಬೋರ್ ಬ್ಲಾಸ್ಟ್ ಸೇರಿದಂತೆ ಭಾರೀ ಸಿಡಿಮದ್ದನ್ನು ಬಳಸಿ ಬಂಡೆಗಳನ್ನು ಸಿಡಿಸಿ ಪರಿಸರವನ್ನು ನಾಶಮಾಡುವ ಜೊತೆಗೆ ರೈತರ ಜೀವನಾಡಿಯಾಗಿರುವ ಕನ್ನಂಬಾಡಿ ಕಟ್ಟೆಗೂ ಸಂಚಕಾರ ತಂದಿದ್ದಾರೆ. ಬಂಡೆಗಳನ್ನು ಸಿಡಿಸುವಾಗ ಕ್ರಷರ್ ಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯಗಳ ಕಾರ್ಮಿಕರಿಗೆ ಸಾವು ನೋವು ಸಂಭವಿಸಿದೆ, ಇಷ್ಟಾದರೂ ಪಾಂಡವಪುರ ತಾಲ್ಲೂಕು ತಹಶೀಲ್ದಾರ್, ಗಣಿಭೂವಿಜ್ಞಾನ ಅಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಯಾರೊಬ್ಬರೂ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಕ್ರಷರ್ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾನೂನುಬಾಹಿರ ಅಕ್ರಮ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸಚಿವರಲ್ಲಿ ಅವಲತ್ತುಕೊಂಡರು…

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರನ್ನು ಹೊರತುಪಡಿಸಿದರೆ ಯಾರೂ ನಮ್ಮ ಗೋಳನ್ನು ಕೇಳುವವರಿಲ್ಲ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ನೀವೇ ಬೇಬಿಬೆಟ್ಟವನ್ನು ಉಳಿಸಿ ಕೆ.ಆರ್.ಎಸ್ ರಕ್ಷಿಸಬೇಕು..ಅಧಿಕಾರಿಗಳ ತಂಡದೊಂದಿಗೆ ಬೇಬಿಬೆಟ್ಟದ ಪ್ರದೇಶಕ್ಕೆ ಬಂದು ಅಕ್ರಮವಾಗಿ ನಡೆಯುತ್ತಿರುವ 50ಕ್ಕೂ ಹೆಚ್ಚಿನ ಕ್ರಷರ್ ಗಳನ್ನು ಶಾಶ್ವತವಾಗಿ ನಿಲ್ಲಿಸಲು ಮುಂದಾಗಬೇಕು ಎಂದು ಕೈಮುಗಿದು ಮನವಿ ಮಾಡಿದರು…

ಬೇಬಿಬೆಟ್ಟ ಉಳಿಸಿ, ಕೆ.ಆರ್.ಎಸ್ ಅಣೆಕಟ್ಟು ರಕ್ಷಿಸಿ
ರೈತ ಹೋರಾಟ ನಿಯೋಗದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಸಿದ್ಧರಾಜು, ಮಂಡ್ಯ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಹೆಚ್.ಎನ್.ಮಂಜುನಾಥ್, ರೈತ ಮುಖಂಡರಾದ ಲೋಕೇಶಮೂರ್ತಿ, ಶಿವಾನಂದ, ಯೋಗೇಶ್, ಕುಮಾರ, ನಾಗೇಂದ್ರ, ಪದ್ಮರಾಜು, ಅಪ್ಪಾಜಿ, ನಟರಾಜು, ಬಿ.ಎಸ್.ಮಂಜುನಾಥ್, ಹರೀಶ್, ಪಾಲಾಕ್ಷ, ಬಿ.ಎಂ.ಕುಮಾರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು…

ಬೇಬಿಬೆಟ್ಟ ರಕ್ಷಿಸಿ ಕೆ.ಆರ್.ಎಸ್ ಉಳಿಸಿ ರೈತ ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಸಚಿವ ನಾರಾಯಣಗೌಡ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಕ್ರಮವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವ ಕ್ರಷರ್ ಗಳನ್ನು ಶಾಶ್ವತವಾಗಿ ಬಂದ್ ಮಾಡಿಸಿ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು… ಸಧ್ಯದಲ್ಲಿಯೇ ಅಧಿಕಾರಿಗಳ ತಂಡದೊಂದಿಗೆ ಬೇಬಿಬೆಟ್ಟ ಪ್ರದೇಶಕ್ಕೆ ಬಂದು ಸಮಸ್ಯೆಯನ್ನು ಖುದ್ದಾಗಿ ಅವಲೋಕನ ನಡೆಸುವುದಾಗಿ ರೈತರಿಗೆ ಭರವಸೆ ನೀಡಿದರು…

ವರದಿ. ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ ….

error: