May 16, 2024

Bhavana Tv

Its Your Channel

ರಸ್ತೆಯಲ್ಲಿ ಬಿದ್ದು ನರಳುತ್ತಿದ್ದ ಹಸುವಿನ ಕರುವನ್ನು ರಕ್ಷಿಸಿದ ಕಿಕ್ಕೇರಿ ಪೋಲೀಸ್ ಠಾಣೆಯ ಪಿ.ಎಸ್.ಐ ನವೀನ್..

ಕೃಷ್ಣರಾಜಪೇಟೆ ; ತಾಲ್ಲೂಕಿನ ಬೀರನಹಳ್ಳಿ ರಸ್ತೆಯಲ್ಲಿ ಗೋ ಸಾಗಾಣಿಕೆ ಗಾರರು ಅಕ್ರಮವಾಗಿ ಹಸುವಿನ ಕರುಗಳನ್ನು ಸಾಗಾಣಿಕೆ ಮಾಡಿಕೊಂಡು ಹೋಗುವಾಗ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದು ಗಾಯಗಳಾಗಿದ್ದು ಕರುವನ್ನು ಸಾರ್ವಜನಿಕರು ತಂದು ಕಿಕ್ಕೇರಿ ಪೋಲೀಸರಿಗೆ ಒಪ್ಪಿಸಿದ್ದಾರೆ..

ಆಹಾರ ಇಲ್ಲದೆ ಗಾಯಗೊಂಡ ಕರುವನ್ನು ಕಿಕ್ಕೇರಿ ಪೋಲೀಸ್ ಠಾಣೆಯ ಪಿ.ಎಸ್.ಐ ನವೀನ್ ಮತ್ತು ಸಿಬ್ಬಂದಿಗಳು ಹಾಲು ಮತ್ತು ನೀರು ಕುಡಿಸಿ ಮಾನವೀತೆ ಮೆರೆದಿದ್ದು ಗೋ ಸಾಗಾಣಿಕೆ ಜಾಲವನ್ನು ಪತ್ತೆ ಹಚ್ಚಲು ಪಣ ತೊಟ್ಡಿದ್ದಾರೆ…

ಕರುವನ್ನು ಆರೋಗ್ಯ ತಪಾಸಣೆ ನೆಡೆಸಿ ಸಮೀಪದ ಗೋ ಶಾಲೆಗೆ ಕಳಿಸಿಕೊಡಲಾಗಿದೆ…

ಒಟ್ಟಾರೆ ಕಿಕ್ಕೇರಿ ಪೋಲೀಸರ ಈ ಕಾರ್ಯಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ…

error: