May 16, 2024

Bhavana Tv

Its Your Channel

ಕರೋನಾ ಗೆದ್ದು ಬಂದ ಮುಖ್ಯಪೇದೆ: ಸರ್ಕಲ್ ಇನಸ್ಪೆಕ್ಟರ್ ಸುದಾಕರಿಂದ ಪುಷ್ಪ ನೀಡಿ ಸ್ವಾಗತ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಮುಂಬೈ ಕನ್ನಡಿಗರನ್ನು ಸಾಂಸ್ಥಿಕ ಹೋಂ ಕ್ವಾರಂಟೈನ್ ಮಾಡುವಲ್ಲಿ ಅಪಾರ ಶ್ರಮವಹಿಸಿ ಕೆಲಸ ಮಾಡಿ ಕೊರೋನಾ ಪಾಸಿಟಿವ್ ಸೋಂಕಿಗೆ ಒಳಗಾಗಿ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಕೊರೋನಾ ಯುದ್ಧವನ್ನು ಗೆದ್ದು ಕರ್ತವ್ಯಕ್ಕೆ ಮರಳಿದ ಕ್ರೈಂ ವಿಭಾಗದ ಮುಖ್ಯ ಪೇದೆ ನಾಗರಾಜು ಅವರನ್ನು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಿಬ್ಬಂಧಿಗಳು ಹೂಮಾಲೆ ಹಾಕಿ ಪುಷ್ಪವೃಷ್ಠಿ ಮಾಡಿ ಹೃದಯಸ್ಪರ್ಶಿ ಸ್ವಾಗತಿಸಿದರು
ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಬ್‌ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಕೊರೋನಾ ಯುದ್ಧದಲ್ಲಿ ಗೆದ್ದು ಗುಣಮುಖರಾಗಿ ಬಂದಿರುವ ನಾಗರಾಜು ಅವರನ್ನು ಸ್ವಾಗತಿಸಿ ಪೋಲಿಸ್ ಸಿಬ್ಬಂಧಿಗಳು ನಾಗರಾಜು ಅವರಂತೆ ಜನಸ್ನೇಹಿಯಾಗಬೇಕು. ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಬೇಕು. ಕೊರೋನಾ ಸಂಕಷ್ಠದ ಸಮಯದಲ್ಲಿ ಜನಸಾಮಾನ್ಯರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದುಡಿಯಬೇಕು ಎಂದು ಬ್ಯಾಟರಾಯಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪೋಲಿಸ್ ಠಾಣೆ ಸಬ್‌ಇನ್ಸ್ಪೆಕ್ಟರ್ ಡಿ.ಲಕ್ಷ್ಮಣ್, ಪ್ರೊಬೆಷನರಿ ಎಸ್.ಐ ನಿಖಿತ, ಎ.ಎಸ್.ಐ ಗಳಾದ ರಾಜು, ಶಿವಣ್ಣ ಮತ್ತು ಪೋಲಿಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ

error: