May 11, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಕೋವಿಡ್ ಸೇವೆಗಾಗಿ ಆಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಕೊರೋನಾ ಮಹಾಮಾರಿಯ ಅಟ್ಟಹಾಸದ ನಿಯಂತ್ರಣಕ್ಕೆ ಜನಜಾಗೃತಿ ಮೂಡಿಸಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ದಂಡ ಹಾಕಲು ಮಂದಾಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕೊರೋನಾ ಹಾವಳಿಯಿಂದ ಸುರಕ್ಷತೆ ಪಡೆಯಲು ಸ್ವಯಂ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಆರಂಭಿಸಿದ್ದಾರೆ..

ಕೋರಮಂಡಲ್ ಸಕ್ಕರೆ ಕಾರ್ಖಾನೆಯು ತಾಲೂಕು ಆಡಳಿತದ ಮನವಿಯ ಮೇರೆಗೆ ತಾಲೂಕು ಆಸ್ಪತ್ರೆಗೆ ೭ಲಕ್ಷರೂ ಬೆಲೆಬಾಳುವ ಸುಸಜ್ಜಿತ ಆಂಬ್ಯುಲೆನ್ಸ್, ಆಕ್ಸಿಜನ್ ಸಿಲಿಂಡರ್ ಗಳು, ಹಾಸಿಗೆಗಳು ಹಾಗೂ ಮಂಚಗಳನ್ನು ಕಾರ್ಖಾನೆಯ ಪರ್ಸೊನಲ್ ಮ್ಯಾನೇಜರ್ ಪದ್ಮನಾಭ ಮತ್ತು ಕಬ್ಬು ವಿಭಾಗದ ಹಿರಿಯ ಅಧಿಕಾರಿ ಕೆ.ಬಾಬೂರಾಜ್ ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮೂಲಕ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಅವರಿಗೆ ಹಸ್ತಾಂತರಿಸಿದರು.ಸಾರ್ವಜನಿಕರು ಮತ್ತು ತಾಲೂಕು ಆಡಳಿತದಿಂದ ಶ್ಲಾಘನೆ

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ ಮಂಡ್ಯ..

error: