May 13, 2024

Bhavana Tv

Its Your Channel

ಕಬ್ಬು ಸಾಗಿಸುತ್ತಿದ್ದ ಲಾರಿ ಮಗುಚಿಬಿದ್ದು ಕಬ್ಬಿನ ರಾಶಿಯ ಕೆಳಗೆ ಸಿಲುಕಿ ಬಡಪಾಯಿ ಮೆಕಾನಿಕ್ ಮೊಹಸಿನ್ ಧಾರುಣ ಸಾವು.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಉದ್ದಿನ ಬೋರೆಕಾವಲು ಗ್ರಾಮದಿಂದ ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಾನೂನು ಬಾಹಿರವಾಗಿ ರೈತರ ಕಬ್ಬನ್ನು ಸಾಗಾಣಿಕೆ ಮಾಡುತ್ತಿದ್ದ ವೇಳೆ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಮುರುಕನಹಳ್ಳಿ ಫಾರಂ ಬಳಿ ಕಬ್ಬು ತುಂಬಿದ ಲಾರಿ ಕೆಟ್ಟು ಹೋಗಿದ್ದು ಲಾರಿ ರಿಪೇರಿ ಮಾಡಲೆಂದು ಮೆಕಾನಿಕ್ ಮೊಸಿನ್ ರವರನ್ನು ಕರೆಸಿ ರಿಪೇರಿ ಮಾಡುತ್ತಿದ್ದ ಸಮಯದಲ್ಲಿ ಲಾರಿಗೆ ಕೊಟ್ಟಿದ್ದ ಜಾಕ್ ಕುಸಿದ ಪರಿಣಾಮ ಕಬ್ಬು ತುಂಬಿದ್ದ ಲಾರಿ ಮಗುಚಿಕೊಂಡಿದೆ…

ಪರಿಣಾಮ ಲಾರಿ ಕೆಳಭಾಗದಲ್ಲಿ ರಿಪೇರಿ ಮಾಡುತ್ತಿದ್ದ ಮೆಕಾನಿಕ್ ಮೊಸಿನ್ ಕಬ್ಬಿನ ರಾಶಿಯ ಒಳಗೆ ಸಿಲುಕಿದ್ದು ಕಬ್ಬಿನ ರಾಶಿಯ ಮಡಿಲಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ಸಿಬ್ಬಂಧಿಗಳು, ಸಾರ್ವಜನಿಕರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಮೆಕಾನಿಕ್ ಮೃತದೇಹವನ್ನು ಕಬ್ಬಿನರಾಶಿಯಿಂದ ಹೊರಗೆ ತೆಗೆಯಲಾಯಿತು..

ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ತಮಗೂ ಮೆಕಾನಿಕ್ ಸಾವಿಗೂ ಯಾವುದೇ ಸಂಬAಧವಿಲ್ಲದAತೆ ಪರಾರಿಯಾಗಿದ್ದಾರೆ..

ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಅಗ್ನಿಶಾಮಕ ಠಾಣಾಧಿಕಾರಿ ಶ್ರೀನಿವಾಸರಾವ್ ಮತ್ತು ಸಿಬ್ಬಂಧಿಗಳು ಮೆಕಾನಿಕ್ ಮೊಹಸಿನ್ ಮೃತ ದೇಹವನ್ನು ಹೊರತೆಗೆದು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಪೋಷಕರಿಗೆ ಶವವನ್ನು ಹಸ್ತಾಂತರಿಸಲಾಯಿತು. ಕೆ.ಆರ್.ಪೇಟೆ ಪಟ್ಟಣದ ಮುಸ್ಲಿಂ ಖಬರಸ್ತಾನದಲ್ಲಿ ಮೃತನ ಅಂತ್ಯಸAಸ್ಕಾರ ನಡೆಸಲಾಯಿತು..

ವರದಿ ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: