May 12, 2024

Bhavana Tv

Its Your Channel

ನಾಗಮಂಗಲ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದ ಹರಾಜು ಮತ್ತೊಂದು ವಿಡಿಯೋ ವೈರಲ್

ಮಂಡ್ಯ: ನಾಗಮಂಗಲ ತಾಲೂಕಿನಲ್ಲಿ ಪದೇ ಪದೇ ಗ್ರಾಮ ಪಂಚಾಯತಿ ಸದಸ್ಯರು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಕಾನೂನು ಕಣ್ಣಿಗೆ ಮಣ್ಣೆರಚಿ ರಾತ್ರೋರಾತ್ರಿ ಗ್ರಾಮಸ್ಥರು ಗುಂಪುಕಟ್ಟಿ ಸದಸ್ಯತ್ವ ಸ್ಥಾನವನ್ನು ನಡುಬೀದಿಯಲ್ಲಿ ಹರಾಜು ಕೂಗುತ್ತಿದ್ದಾರೆ

ಕೆಲವು ದಿನಗಳ ಹಿಂದೆ ತಾಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಿಕೆರೆ ಗ್ರಾಮದಲ್ಲಿ ಹರಾಜು ಪ್ರಕ್ರಿಯೆ ನಡೆದು ರಾಜ್ಯ ಮಟ್ಟದಲ್ಲಿ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು
ಈ ಸಂಬAಧ ತಾಲೂಕು ದಂಡಾಧಿಕಾರಿಗಳು ಲಾಳನಕೆರೆ ಗ್ರಾಮಕ್ಕೆ ಭೇಟಿ ನೀಡಿ ಸಂವಿಧಾನ ವಿರುದ್ಧವಾಗಿ ಹರಾಜು ಪ್ರಕ್ರಿಯೆ ನಡೆಸಬಾರದೆಂದು ಎಚ್ಚರಿಕೆ ನೀಡಿ ೫೦ ಜನ ಗ್ರಾಮಸ್ಥರ ವಿರುದ್ಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು

ಈ ಪ್ರಕರಣ ನಡೆದು ಮೂರು ದಿನದಲ್ಲೇ ಮತ್ತೊಂದು ಹರಾಜು ಪ್ರಕರಣ ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನಹಳ್ಳಿ ಗ್ರಾಮ ಮಾರಮ್ಮ ದೇವಲಾಯ ಅವರಣದಲ್ಲಿ ಗುರುವಾರ ರಾತ್ರಿ ಪ್ರವರ್ಗ-೨ಎ ಸದಸ್ಯ ಸ್ಥಾನ ೫ ಲಕ್ಷಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಗೊಂಡಿರುವುದು ಅಚ್ಚರಿ ಮೂಡಿಸಿದೆ

ಚುನಾವಣೆ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆ ಕಣ್ತಪ್ಪಿಸಿ ರಾತ್ರೋರಾತ್ರಿ ಗ್ರಾಮಸ್ಥರೆಲ್ಲ ಒಟ್ಟುಕೂಡಿ ಬಹಿರಂಗ ಹರಾಜನ್ನು ಕೂಗುತ್ತಿರುವುದು ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿದೆ

ಈಗಾಗಲೇ ಇದೇ ರೀತಿ ಒಳಒಪ್ಪಂದ ಬಹಿರಂಗ ಹರಾಜು ಸ್ಥಳೀಯ ಹಣವಂತ ಬಲಾಢ್ಯರು ಹಾಗೂ ಬೆಂಗಳೂರು ನಿವಾಸಿಗಳು ನಾಗಮಂಗಲದ ಗ್ರಾಮ ಪಂಚಾಯತಿ ಸ್ಥಾನವ ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.ಈಗಾಗಲೇ ಕಂಚನಹಳ್ಳಿ .ಪಾಲಅಗ್ರಾರ .ಚಿಕ್ಕೋನಹಳ್ಳಿ ಪುರ.ಚಟ್ಟೇನಹಳ್ಳಿ .ಬ್ಯಾಡರಹಳ್ಳಿ ಹಲವು ಗ್ರಾಮಗಳಲ್ಲಿ ಹರಾಜು ಪ್ರಕ್ರಿಯೆ ಮುಗಿದಿದೆ

ನಿನ್ನೆ ರಾತ್ರಿಯೂ ಕೂಡ ಮಂಚೇನಹಳ್ಳಿ ಗ್ರಾಮದ ಸದಸ್ಯತ್ವ ಸ್ಥಾನ ೭ಲಕ್ಷ ಕ್ಕೆ ಹಾಗೂ ಗಂಗನಹಳ್ಳಿ ಗ್ರಾಮ ಸದಸ್ಯತ್ವ ಸ್ಥಾನ ೨೨ ಲಕ್ಷಕ್ಕೆ ಬೆಂಗಳೂರು ನಿವಾಸಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಹರಾಜು ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ

ಇಂಥ ಪ್ರಕರಣಗಳನ್ನು ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ವಹಿಸಿದರು ಕೂಡ ಗ್ರಾಮಸ್ಥರು ಅಭಿವೃದ್ಧಿ ಎಂಬ ನೆಪ ಮಂತ್ರ ಮುಂದಿಟ್ಟುಕೊoಡು ಕಾನೂನಿನ ಕಣ್ಣು ತಪ್ಪಿಸಿ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ತಾಲೂಕಿನ ವ್ಯಾಪ್ತಿಯಲ್ಲಿ ಕಂಡುಬoದಿದೆ

error: