April 26, 2024

Bhavana Tv

Its Your Channel

ಕೆ.ಎಸ್.ಆರ್.ಟಿ.ಸಿ ಸಿಬ್ಙಂದಿಗಳ ಪ್ರತಿಭಟನೆ ಮಾಡುತ್ತಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಆಸರೆ ಸಮಾಜ ಸೇವಾ ಟ್ರಸ್ಟ ವತಿಯಿಂದ ಸನ್ಮಾನ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ. ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಲಕ್ಷಾಂತರ ಕೆ.ಎಸ್.ಆರ್.ಟಿ.ಸಿ ಸಿಬ್ಙಂದಿಗಳ ಪ್ರತಿಭಟನೆ ಮಾಡುತ್ತಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಕೆ.ಆರ್.ಪೇಟೆ ತಾಲೂಕು ಆಸರೆ ಸಮಾಜ ಸೇವಾ ಟ್ರಸ್ಟ ವತಿಯಿಂದ ಸನ್ಮಾನಿಸಿ ಗೌರವಿಸಿ ತಮ್ಮ ಸೇವೆಯನ್ನು ಹೀಗೆಯೇ ಮುಂದುವರಿಸಿ ಎಂದು ಟ್ರಸ್ಟ್ ನ ಪದಾಧಿಕಾರಿಗಳು ಮನವಿ ಮಾಡಿದರು.
ಕೆ.ಎಸ್.ಆರ್.ಟಿ.ಸಿ ಡಿಪೋ ವ್ಯವಸ್ಥಾಪಕ ಶಿವಕುಮಾರ್, ಮ್ಯಾಕಾನಿಕ್ ವೀರಭದ್ರಸ್ವಾಮಿ, ಭದ್ರತಾಸಿಬ್ಬಂದಿ ನಾಗರಾಜು, ನಿರೀಕ್ಷಕರಾದ ಮಹೇಂದ್ರ ಮತ್ತು ವಾಸು, ತಾಂತ್ರಿಕ ಅಧಿಕಾರಿ ಮಂಜುನಾಥ್ ಸೇರಿದಂತೆ ಪ್ರತಿಭಟನೆಯ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಜನ ಸೇವೆಗೆ ನಿಂತಿದ್ದ ಸಿಬ್ಙಂದಿಗಳನ್ನು ಟ್ರಸ್ಟ್ ನ ಪದಾಧಿಕಾರಿಗಳಾದ ಮನೋಹರ, ಮುರುಗೇಶ್, ಶಶಿ, ಸುನೀಲ್, ಅಜೀತ್, ಅಭಿ ಇತರರು ಪುಷ್ಪಹಾರ ಹಾಕಿ ಅಂಭಿನoದಿಸಿದರು.

ಈ ವೇಳೆ ಮಾತನಾಡಿದ ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಅವರು ದೇಶಾದ್ಯಂತ ಕೋರೋನಾ ಲಾಕ್ ಡೌನ್ ಆಗಿದ್ದ ವೇಳೆ ಕರ್ನಾಟಕದಲ್ಲಿಯೂ ಸುಮಾರು ೪ತಿಂಗಳು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಓಡಾಡಲಿಲ್ಲಿ ನೌಕರರು ಮನೆಯಲ್ಲಿಯೇ ಇದ್ದರು ಈ ವೇಳೆ ಅವರಿಗೆ ಪೂರ್ತಿ ಸಂಬಳವನ್ನು ರಾಜ್ಯ ಸರ್ಕಾರವು ನೀಡುವ ಮೂಲಕ ಅನುಕೂಲ ಮಾಡಿಕೊಟ್ಟಿತ್ತು. ಈಗ ಮತ್ತೊಮ್ಮೆ ಕರೋನಾ ಹಾವಳಿ ಇದ್ದು ಜನ ಸಂಕಷ್ಟದಲ್ಲಿ ಇದ್ದಾರೆ ಈ ಸಂದರ್ಭದಲ್ಲಿ ಚಳುವಳಿ ಮಾಡುವ ಮೂಲಕ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರವು ಸೇವೆ ವಜಾ ಮಾಡುವ ನಿರ್ಧಾರ ಕೈಗೊಂಡಿದೆ ಇದರಿಂದ ಸಾವಿರಾರು ನೌಕರರು ಸೇವೆಗೆ ಮರಳಿದ್ದಾರೆ. ಬೇಡಿಕೆ ಈಡೇರಿಸಲು ಸುಧೀರ್ಘ ಹೋರಾಟ ಒಳ್ಳೆಯದಲ್ಲ. ಒಂದೆರಡು ದಿನ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಬೇಕು. ಮನವಿಗೆ ಸರ್ಕಾರ ಸ್ಪಂಧಿಸದೇ ಇದ್ದಾಗ ಮತ್ತೆ ಒಂದೆರೆಡು ದಿನ ಪ್ರತಿಭಟನೆ ಮಾಡಬೇಕು ಅದನ್ನು ಬಿಟ್ಟು ಸುಧೀರ್ಘ ಪ್ರತಿಭಟನೆ ಮಾಡುವುದು ಸರಿಯಲ್ಲ. ಇದರಿಂದ ಖಾಸಗಿ ವಾಹನಗಳಿಗೆ ಅನುಕೂಲ ಮಾಡಿಕೊಟ್ಟಂತೆವಾಗುತ್ತದೆ. ನೌಕರರಿಗೆ ಸಂಬಳವಿಲ್ಲದೇ ಮನೆಯಲ್ಲಿ ಕೂರುವಂತಾಗುತ್ತದೆ ಇದರಿಂದ ಜನರಿಗೆ ತೊಂದರೆ ಬದಲಿಗೆ ಪರ್ಯಾಯ ಮಾರ್ಗದ ಮೂಲಕ ಪ್ರಯಾಣ ಸುಗಮ ಮಾಡಿಕೊಂಡಿದ್ದಾರೆ. ಆದರೆ ನೌಕರರು ವೇತನವಿಲ್ಲದೆ ಮನೆ ಬಾಡಿಗೆ ಊಟೋಪಚಾರಕ್ಕೆ ಕಷ್ಟಪಡುವಂತಾಗಿದೆ. ಸುಧೀರ್ಘ ಪ್ರತಿಭಟನೆ ಮಾಡಿದ ಪರಿಣಾಮ ೮೦ ಮತ್ತು ೯೦ರ ದಶಕದಲ್ಲಿ ಮುಂಬೈ ಮತ್ತು ಇತರೆ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಮಂದಿ ಕಾರ್ಮಿಕರಿಗೆ ಕೈತುಂಬಾ ಸಂಬಳ ನೀಡುತ್ತಿದ್ದ ಕಾರ್ಖಾನೆಗಳು ಮಾನವ ಸಂಪನ್ಮೂಲವಿಲ್ಲದೇ ಬಾಗಿಲು ಮುಚ್ಚಿದವು. ಆಗ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದರು. ಆಗ ಯಾರು ಕಾರ್ಮಿಕರಿಗೆ ಹೋರಾಟದ ಹಾದಿ ಹೇಳಿಕೊಟ್ಟರೋ ಅವರು ಕಾರ್ಮಿಕರಿಗೆ ಯಾವುದೇ ಸಹಾಯ ಮಾಡಲು ಅಶಕ್ತರಾದರು. ಇಂತಹ ಪರಿಸ್ಥಿತಿ ಸಾರಿಗೆ ನೌಕರರಿಗೆ ಬಾರದೇ ಇರಲಿ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಂಬಿ ಹೋರಾಟ ಮಾಡಿದರೆ ಕೆಲಸ ಕಳೆದುಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಎಂದು ಅರಿತ ಶೇ.೫೦ಕ್ಕಿಂತಲೂ ಹೆಚ್ಚು ಸಾರಿಗೆ ನೌಕರರು ಸೇವೆಗೆ ಮರಳಿರುವುದು ಸಂತಸದ ವಿಚಾರವಾಗಿದೆ ಇದನ್ನು ಮನಗಂಡು ನಮ್ಮ ಆಸರೆ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದರು. ಸೇವೆಗೆ ಬಂದಿರುವ ನೌಕರರಿಗೆ ಸೂಕ್ತ ಪೋಲೀಸ್ ಭದ್ರತೆ ನೀಡಯತ್ತಿರುವ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಹೇಳಿದರು.

ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: