April 26, 2024

Bhavana Tv

Its Your Channel

ಎರಡು ಮಲ್ಟಿ ಪ್ಯಾರ ಮೀಟರ್ ಯಂತ್ರ ಕೊಡುಗೆಯಾಗಿ ನೀಡಿದ ಹೇಮಗಿರಿ ಬಿಜಿಎಸ್ ಶಾಲಾ ಸಂಸ್ಥೆ

ಕೆ.ಆರ.ಪೇಟೆ: ತಾಲೂಕು ಆಸ್ಪತ್ರೆಗೆ ಸಾರ್ವಜನಿಕರ ಚಿಕಿತ್ಸೆಗೆ ಪ್ರಮುಖವಾಗಿ ಬೇಕಾಗಿದ್ದ ಎರಡು ಮಲ್ಟಿ ಪ್ಯಾರ ಮಾನಿಟರ್ ಯಂತ್ರ ಕೊಡುಗೆಯಾಗಿ ನೀಡಿದ ಹೇಮಗಿರಿ ಬಿಜಿಎಸ್ ಶಾಲಾ ಸಂಸ್ಥೆ. ೨ ನೆ ಅಲೆ ಕೋರೋನಾ ಸಂಕಷ್ಟ ಸಮಯದಲ್ಲಿ ಉಪಯುಕ್ತ ಯಂತ್ರವನ್ನು ಕೊಡುಗೆಯಾಗಿ ನೀಡಿದ ಹೇಮಗಿರಿ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾಕ್ಟರ್ ಜೆ ಎನ್ ರಾಮಕೃಷ್ಣೇಗೌಡ ರವರಿಗೆ ತಾಲೂಕು ಆಡಳಿತ ಪರವಾಗಿ ಶ್ಲಾಘನೀಯ ಎಂದು ತಿಳಿಸಿದ ತಾಲೂಕು ದಂಡಾಧಿಕಾರಿಗಳಾದ ಎಂ ಶಿವಮೂರ್ತಿರವರು.

ಕೆ ಆರ್ ಪೇಟೆ ತಾಲೂಕಿನ ಜನತೆ ಆರೋಗ್ಯಕರ ಜೀವನ ಸಾಗಿಸಬೇಕು ತಾಲೂಕಿನ ಜನತೆಗೆ ಯಾವುದೇ ಕೋರೋನಾ ಎಂಬ ಮಾರಕ ರೋಗಕ್ಕೆ ತುತ್ತಾಗಬಾರದೆಂದು ಇಂತಹ ಮಾರಕ ರೋಗಗಳನ್ನು ತಡೆಗಟ್ಟುಬೇಕು ಎಂದು ತಿಳಿದು ಹೇಮಗಿರಿ ಶಾಖಾಮಠದ ಮುಖ್ಯ ಕಾರ್ಯದರ್ಶಿಗಳಾದ ಡಾ: ಜೆ ಎನ್ ರಾಮಕೃಷ್ಣೇಗೌಡ ರವರು ಪ್ರಮುಖವಾಗಿ ತಾಲೂಕಿನ ಆಸ್ಪತ್ರೆ ಬೇಕಾಗುವ ಪ್ರಮುಖ ಯಂತ್ರ ಯಾವುದು ಎಂದು ತಾಲೂಕು ಆಡಳಿತ ವತಿಯಿಂದ ಸ್ವಯಂಪ್ರೇರಣೆಯಿAದ ಮುಂದೆ ಬಂದು ಮಾಹಿತಿ ಪಡೆದ ಅವರು. ಎರಡು ಮಲ್ಟಿ ಪ್ಯಾರ ಮೀಟರ್ ಅವಶ್ಯಕತೆ ಇದೆ ಎಂಬ ಮಾಹಿತಿ ಕೊಟ್ಟ ಹಿನ್ನೆಲೆಯಲ್ಲಿ ಎರಡು ದಿನದೊಳಗೆ ೨ ಪ್ಯಾರಾ ಮೀಟರ್ ಯಂತ್ರಗಳನ್ನು ತಾಲೂಕು ದಂಡಾಧಿಕಾರಿಗಳಾದ ಎಂ ಶಿವಮೂರ್ತಿ ರವರ ನೇತೃತ್ವದಲ್ಲಿ ಹೇಮಗಿರಿ ಬಿಜಿಎಸ್ ಮುಖ್ಯಶಿಕ್ಷಕಿ ಪವಿತ್ರ ಮತ್ತು ಹೇಮಗಿರಿ ಬಿಜಿಎಸ್ ಶಾಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ತಾಲೂಕು ಬಿಜಿಎಸ್ ಶಾಲಾ ಆವರಣದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಜಯಂತ್ ರವರ ಮೂಲಕ ತಾಲೂಕು ಆಸ್ಪತ್ರೆಗೆ ಯಂತ್ರಗಳನ್ನು ಹಸ್ತಾಂತರಿಸಲಾಯಿತು…..

ನoತರ ಶ್ರೀ ಶ್ರೀ ಬಾಲಗಂಗಾಧರ ಸ್ವಾಮೀಜಿ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅಧಿಕಾರಿಗಳಾದ ಎಂ ಶಿವಮೂರ್ತಿ ರವರು ಮೊದಲನೇ ಅಲೆಯಲ್ಲೂ ಹಲವು ವಸ್ತುಗಳನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದ ಬಿಜಿಎಸ್ ಶಾಲಾ ಸಂಸ್ಥೆ .ಮತ್ತೆ ಹೆಮ್ಮಾರಿ ಕೋರೋನಾ ಎರಡನೇ ಅಲೆ ಸಂಕಷ್ಟದಲ್ಲಿ ತಾಲೂಕಿನ ಸಾರ್ವಜನಿಕರ ಆರೋಗ್ಯಕರ ಪ್ಯಾರಾ ಮೀಟರ್. ಇಸಿಜಿ. ಪಲ್ಸ್ ಮೀಟರ್ ಸೇರಿದಂತೆ ಇನ್ನಿತರ ಚಿಕಿತ್ಸೆಗಾಗಿ ಪ್ರಮುಖ ಬೇಕಾಗಿದ್ದ ೨ ಮಲ್ಟಿ ಪ್ಯಾರಾ ಮೀಟರ್ ಯಂತ್ರವನ್ನು ಇಂತಹ ಕೊರೋನಾ ಸಂಕಷ್ಟದಲ್ಲಿ ತಾಲೂಕು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಹೇಮಗಿರಿ ಬಿಜಿಎಸ್ ಶಾಲಾ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು ಎಂದು ಸಂತಸ ವ್ಯಕ್ತಪಡಿಸಿದರು…..

ಈ ಸಂದರ್ಭದಲ್ಲಿ ಹೇಮಗಿರಿ ಬಿಜಿಎಸ್ ಶಾಲೆಯ ಬೋಧಕ ಬೋಧಕಿಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಉಪಸ್ಥಿತರಿದ್ದರು.

ವರದಿ: ಮಹಮ್ಮದ್ ಅಜುರುದ್ದೀನ ಮಂಡ್ಯ

error: