May 16, 2024

Bhavana Tv

Its Your Channel

ನಾಡಪ್ರಭು ಕೆಂಪೇಗೌಡರ ೫೧೨ ಜಯಂತಿಯನ್ನು ಸರಳವಾಗಿ ತೊಳಸಿ ಗ್ರಾಮದ ವೃತ್ತದಲ್ಲಿ ಆಚರಣೆ ಮಾಡಲಾಯಿತು

ಕೃಷ್ಣರಾಜಪೇಟೆ ; ತಾಲ್ಲೂಕಿನ ಕಿಕ್ಕೇರಿ ಸಮೀಪದ ತೊಳಸಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ೫೧೨ ವರ್ಷದ ಜಯಂತೋತ್ಸವನ್ನು ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ತೊಳಸಿ ರಮೇಶ್ ರವರ ನೇತೃತ್ವದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು..

ನಂತರ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ.ಎಸ್ ಪ್ರಭಾಕರ್, ಹಾಗೂ ಮನ್ಮುಲ್ ನಿರ್ದೇಶಕ ಕೆ.ಜಿ ತಮ್ಮಣ್ಣ ನವರು ಕೆಂಪೇಗೌಡ ರವರ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು..

ನಂತರ ಮಾತನಾಡಿ ಕೆಂಪೇಗೌಡರವರು ಒಂದು ಜನಾಂಗಕ್ಕೆ ಸೀಮಿತರಲ್ಲ ಅವರ ಆಡಳಿತದಲ್ಲಿ ಸರ್ವ ಧರ್ಮಕ್ಕೂ ಸಮಪಾಲು ಎಂಬ ತತ್ವವನ್ನು ಅಳವಡಿಸಿಕೊಂಡು ನಾಡು ಕಟ್ಟಿದ ಮಹಾನ್ ನಾಯಕರು ಅಲ್ಲದೆ ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ರವರು . ಎಂದರೆ ಕೆಲವು ಜನಾಂಗಕ್ಕೆ ಸೀಮಿತ ಪಡಿಸುವುದು ತಪ್ಪು. ಇವರೆಲ್ಲರೂ. ಮಹಾನ್ ನಾಯಕರು. ಇಂತಹ ವ್ಯಕ್ತಿಗಳ ಸಿದ್ದಂತಗಳನ್ನ ನಾವೆಲ್ಲರೂ ಒಗ್ಗೂಡಿಸಿ ಅಳವಡಿಸಿ ಕೊಂಡು ಬೇಕು ಎಂದು ಸಂದೇಶ ಸಾರಿದರು..
ಕೊವಿಡ್ ಇರುವ ಕಾರಣ ಕೆಂಪೇಗೌಡರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ ಮುಂದಿನ ಬಾರಿ ಎಲ್ಲಾ ಜಯಂತಿಗಳನ್ನು ಆಚರಣೆ ಮಾಡಬೇಕು ಎಂದರು…

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಕೆ.ಎಸ್ ಪ್ರಭಾಕರ್, ಮನ್ಮುಲ್ ನಿರ್ದೇಶಕರಾದ ಕೆ.ಜಿ.ತಮ್ಮಣ್ಣ, ಲಕ್ಷ್ಮೀಪುರ ಗ್ರಾಮ ಪಂಚಾಯಿತು ಅದ್ಯಕ್ಷ ತೊಳಸಿ ರಮೇಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮಂಜೇಗೌಡ್ರು, ಚಂದ್ರೇಗೌಡ್ರು, ಸ್ವಾಮಣ್ಣ, ಮುಖಂಡರಾದ ಡೈರಿ ಲೋಕೇಶ್, ಆಶೋಕ್, ಪ್ರತಾಪ್, ಅಂಬರೀಶ್, ರಾಮೇಗೌಡ್ರು, ಅಭಿಷೇಕ್, ಸೋಮಶೇಖರ್, ಜಗಣ್ಣ, ಆನಂದ್, ಮತ್ತಿತರು ಇದ್ದು ಕಾರ್ಯಕ್ರಮಕ್ಕೆ ಬೆಂಬಲಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು…
ಶಂಬು ಕಿಕ್ಕೇರಿ, ಮಂಡ್ಯ

error: