May 17, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಚನ್ನರಾಯಪಟ್ಟಣ ಮೈಸೂರು ರಸ್ತೆಯ ಅಂಬಾರಿ ಹೋಟೆಲ್ ಕಟ್ಟಡಕ್ಕೆ ಸ್ಥಳಾಂತರ

ನೂತನ ಕಟ್ಟಡದಲ್ಲಿ ಗ್ರಾಹಕ ಸ್ನೇಹಿಬ್ಯಾಂಕಿನ ಕಾರ್ಯ ಆರಂಭ, ಗ್ರಾಹಕರ ಸಂತಸ.

ಮoಡ್ಯ: ಕೃಷ್ಣರಾಜಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ಮುಖ್ಯ ರಸ್ತೆಯಲ್ಲಿದ್ದ ಎಸ್.ಬಿ.ಐ ಬ್ಯಾಂಕ್ (ಭಾರತೀಯ ಸ್ಟೇಟ್ ಬ್ಯಾಂಕ್) ಶಾಖೆಯನ್ನು ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಅಂಬಾರಿ ಹೋಟೆಲ್ ಹಾಗೂ ಕ್ರೈಸ್ಟ್ ದ ಕಿಂಗ್ ಪಿಯು ಕಾಲೇಜು ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಎಸ್.ಬಿ.ಐ ಬ್ಯಾಂಕ್‌ನ ವ್ಯವಸ್ಥಾಪಕರಾದ ಅಶೋಕ್ ಚಂದ್ರ ತಿಳಿಸಿದರು.

ಇದೇ ಸಂದರ್ಭದಲ್ಲಿ ದೀರ್ಘಕಾಲದಿಂದಲೂ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿರುವ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಡಾ.ಕೆ ಎಸ್ ರಾಜೇಶ್ ಮಾತನಾಡಿದರು. ಅವರು ಬ್ಯಾಂಕಿನ ನೂತನ ಕಚೇರಿಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ೪೦ ವರ್ಷಗಳಿಂದಲೂ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಹಳೆಯ ಪುರಸಭಾ ಕಚೇರಿಯ ಮುಖ್ಯ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಬ್ಯಾಂಕ್ ಶಾಖೆಯನ್ನು ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಅಂಬಾರಿ ಹೋಟೆಲ್ ಕಟ್ಟಡದಲ್ಲಿರುವ ವಿಶಾಲವಾದ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಹೊಸ ಕಟ್ಟಡಕ್ಕೆ ಬ್ಯಾಂಕ್ ಅನ್ನು ಸ್ಥಳಾಂತರ ಮಾಡಲಾಗಿದೆ ಹಾಗಾಗಿ ಎಲ್ಲಾ ಗ್ರಾಹಕರು ಎಂದಿನAತೆ ಹೊಸ ಕಟ್ಟಡದಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ತಮ್ಮ ವ್ಯವಹಾರವನ್ನು ನಡೆಸುವ ಮೂಲಕ ಸಹಕಾರ ನೀಡಬೇಕು. ನೂತನ ಕಟ್ಟಡದ ಆವರಣದಲ್ಲಿ ಗ್ರಾಹಕರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿದೆ. ಒಳಭಾಗದಲ್ಲಿ ಗ್ರಾಹಕರು ಕುಳಿತು ವ್ಯವಹರಿಸಲು ಆಸನ ವ್ಯವಸ್ಥೆ ಮಾಡಲಾಗಿದೆ

ಪ್ರತಿಯೊಂದು ಸೇವೆಗೂ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬ್ಯಾಂಕಿನ ಎಲ್ಲಾ ಸೇವೆಗಳನ್ನು ತ್ವರಿತವಾಗಿ ಗ್ರಾಹಕರಿಗೆ ನೀಡಲು ಬ್ಯಾಂಕ್ ಸನ್ನದ್ದವಾಗಿದೆ. ಪ್ರಮುಖವಾಗಿ ಬ್ಯಾಂಕಿನಲ್ಲಿ ಗ್ರಾಹಕರು ಉತ್ತಮ ರೀತಿಯಲ್ಲಿ ವ್ಯವಹಾರ ಮಾಡಲು ಸ್ಥಳಾವಕಾಶವನ್ನು ಒದಗಿಸಿಕೊಡಲಾಗಿದೆ ಹಾಗಾಗಿ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಅಶೋಕ್ ಚಂದ್ರು ಅವರು ಗ್ರಾಹಕರಲ್ಲಿ ಮನವಿ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಾಯಕ ವ್ಯವಸ್ಥಾಪಕಿ ವನಿತಾಭಟ್, ಪದ್ಮನಾಭ್, ಆಶುತೋಶ್ ರಂಜನ್, ಅಂಬಾರಿ ಹೋಟೆಲ್ ಮಾಲೀಕರಾದ ಮೈಲಾರಿ ರವಿ, ಎಸ್.ಬಿ.ಐ ಬ್ಯಾಂಕ್ ನೌಕರರಾದ ಸನ್ನಿ ಶರಣ್, ರಕ್ಚಿತಾಅರಸ್, ಎನ್.ಜಗದೀಶ್, ನಾಗಶ್ರೀ.ಜಿ.ಹೆಚ್, ನಾಗಣ್ಣ, ಮೀನಾ, ಪುಟ್ಟೇಗೌಡ, ಮಲ್ಲಿಕಾರ್ಜುನ್, ಜೋಗಿನಿಂಗೇಗೌಡ, ಪುಟ್ಟರಾಜು ಇತರರು ಇದ್ದರು.

ವರದಿ:-ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ.ಮಂಡ್ಯ

error: