May 16, 2024

Bhavana Tv

Its Your Channel

ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಕೆ.ಆರ್.ಪೇಟೆ: ಇಂದಿನ ದಿನಮಾನದಲ್ಲಿ ನಾವು ವಾಸಮಾಡುತ್ತಿರುವ ನಾಗರಿಕ ಸಮಾಜ ಹಾಗೂ ಪರಿಸರ ಎರಡೂ ಹಾಳಾಗುತ್ತಿವೆ. ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರುವ ಸಮಾಜ ಮತ್ತು ಪರಿಸರವು ಹಾಳಾಗದಂತೆ ಮಾನವರು ಎಚ್ಚರ ವಹಿಸಿದರೆ ಮಾತ್ರ ಸಮಾಜ ಕಟ್ಟುವ ಕೆಲಸ ಮಾಡಬಹುದು ಇಲ್ಲದಿದ್ದರೆ ವಿನಾಶಕ್ಕೆ ನಾಂದಿಯಾಗುತ್ತದೆ ಎಂದು ತಾಲ್ಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಗುರೂಜಿ ಅವರು ಅಭಿಪ್ರಾಯ ಪಟ್ಟರು .

ತಾಲ್ಲೂಕಿನ ಮಾರ್ಗೋನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರದ ವತಿಯಿಂದ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಮಾನವರಾದ ನಾವು ಪ್ರಕೃತಿಯ ನಾಶಕ್ಕೆ ಮುಂದಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ನಮ್ಮ ಆರಾಧ್ಯದೈವ, ಕಲಿಯುಗ ದೈವಸ್ವರೂಪಿ, ಪವಾಡಪುರುಷ ದೇವರೂರಿನ ಹರಿಹರ ಅಪ್ಪಾಜಿ ಏಕಾಂತದ ಸ್ಮರಣಾರ್ಥ ಪ್ರತಿ ತಿಂಗಳು ೧೩ ನೇ ತಾರೀಖಿನಂದು ಕ್ಷೇತ್ರದ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ ನಾಗರೀಕ ಬಂಧುಗಳ ಸಹಕಾರ ಬಹಳ ಮುಖ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಗಂಗಾಧರ, ಸಹಾಯಕ ಅರಣ್ಯಾಧಿಕಾರಿ ಹೆಚ್.ರಾಘವೇಂದ್ರ, ಸಹಾಯಕರಾದ ಕೆ.ಸಿ.ವಿನಯ್, ವಸತಿ ಶಾಲೆ ಪ್ರಾಂಶುಪಾಲರಾದ ಡಾ.ಕೆ.ರಾಮನಾಯಕ್, ಶ್ರೀ ಕ್ಷೇತ್ರದ ಕಾರ್ಯದರ್ಶಿ ಬಿ.ಸಿ.ಕಾಂತರಾಜು, ಗೌರವಾಧ್ಯಕ್ಷರಾದ ಶಿವಲಿಂಗೇಗೌಡ, ಉಪಾಧ್ಯಕ್ಷರಾದ ಚನ್ನೇಗೌಡ ಮತ್ತಿತರರು ಹಾಜರಿದ್ದರು.

ವರದಿ:ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: