April 26, 2024

Bhavana Tv

Its Your Channel

ಬಳ್ಳೇಕೆರೆ ಗ್ರಾಮ ಪಂಚಾಯತಿ ಬಿಜೆಪಿ ವಶಕ್ಕೆ, ಬಿಜೆಪಿ ಮುಖಂಡ ಶಂಕರ್ ಅಧ್ಯಕ್ಷರಾಗಿ ಆಯ್ಕೆ

ಕೆ.ಆರ್.ಪೇಟೆ :- ಬಳ್ಳೇಕೆರೆ ಗ್ರಾಮ ಪಂಚಾಯತಿ ಬಿಜೆಪಿ ವಶಕ್ಕೆ, ಬಿಜೆಪಿ ಮುಖಂಡ ಶಂಕರ್ ಅಧ್ಯಕ್ಷರಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆ ಯಾಗಿದ್ದಾರೆ.ಮೊಳಗಿದ ಜಯಘೋಷಗಳು, ಸಿಹಿವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ, ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ.

ಕೃಷ್ಣರಾಜಪೇಟೆ ತಾಲ್ಲೂಕಿನ ಬಳ್ಳೇಕೆರೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಶಂಕರ್ ಇಂದು ನಡೆದ ಚುನಾವಣೆಯಲ್ಲಿ ೧೦ ಮತಗಳನ್ನು ಪಡೆದುಕೊಂಡು ೮ಮತಗಳನ್ನು ಪಡೆದ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಮುಖಂಡ ಜಯಣ್ಣ ಅವರನ್ನು ೨ ಮತಗಳ ಅಂತರದಿAದ ಪರಾಭವಗೊಳಿಸಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ…

ಕೃಷ್ಣರಾಜಪೇಟೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ರಹಸ್ಯ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು..೧೮ ಸದಸ್ಯರ ಬಲದ ಪಂಚಾಯತಿಯಲ್ಲಿ ೧೦ ಮತಗಳನ್ನು ಪಡೆದ ಶಂಕರ್ ೨ ಮತಗಳ ಅಂತರದಿAದ ಆಯ್ಕೆಯಾದರು..ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ಸೋಮವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರಾದ ಶಂಕರ, ಸಾಕಮ್ಮ ಸಿದ್ಧರಾಜು, ಅನುರಾಧ ಮಂಜುನಾಥ್, ಗಿರಿಜಾರವಿ, ಚಂದ್ರೇಗೌಡ, ಮಾದಶೆಟ್ಟಿ, ತಿಮ್ಮೇಗೌಡ, ಅರ್ಪಿತಾ ಲೋಕೇಶ್, ರಾಣಿಪರಮೇಶ್ ಮತ್ತು ಮಂಜುನಾಥ್ ಮತ ಚಲಾಯಿಸಿದರು..

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿನೋದ್ ಮತ್ತು ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕ ಸುದರ್ಶನ್ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಂಕರ್ ಅವರನ್ನು ಬಿಜೆಪಿ ಮುಖಂಡರಾದ ರವಿಶಿವಕುಮಾರ್, ಬಳ್ಳೇಕೆರೆ ವರದರಾಜೇಗೌಡ, ಕಾರಿಗನಹಳ್ಳಿ ಕುಮಾರ್, ಸಂತೋಷ್, ಕಟ್ಟೇಕ್ಯಾತನಹಳ್ಳಿ ಪಾಪಣ್ಣ, ಬಸವರಾಜು, ಬಳ್ಳೇಕೆರೆ ರಮೇಶ್, ದೊದ್ದನಕಟ್ಟೆ ನಾರಾಯಣ, ನಟರಾಜು, ಬಾಣೇಗೌಡ ಸೇರಿದಂತೆ ನೂರಾರು ಜನರು ಅಭಿನಂದಿಸಿದರು..

ಕೋವಿಡ್ ಸೋಂಕಿನಿoದ ಬಳ್ಳೇಕೆರೆ ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷರಾಗಿದ್ದ ವೆಂಕಟರಾಮು ಅವರು ಅಕಾಲಿಕವಾಗಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಎರಡು ತಿಂಗಳುಗಳಿAದ ಖಾಲಿಯಾಗಿಯೇ ಉಳಿದಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯು ನಿಗಧಿಯಾಗಿತ್ತು. ೧೮ ಸದಸ್ಯರ ಬಲದ ಗ್ರಾಮ ಪಂಚಾಯತಿಯಲ್ಲಿ ೧೦ ಸದಸ್ಯರ ಮತ ಪಡೆದ ಬಿಜೆಪಿ ಮುಖಂಡ ಶಂಕರ್ ಅಧ್ಯಕ್ಷರಾಗಿ ಆಯ್ಕೆಯಾದರು.

ವರದಿ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ , ಮಂಡ್ಯ

error: