April 26, 2024

Bhavana Tv

Its Your Channel

ಕೆ.ಆರ್.ಪೇಟೆ; ೨೦೨೧-೨೨ನೇ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್ ಪ್ರವೇಶ ಪ್ರಕ್ರಿಯೆ ಸೆಪ್ಟೆಂಬರ್ ೩೦ ರವರೆಗೆ ವಿಸ್ತರಣೆ

ಕೃಷ್ಣರಾಜಪೇಟೆ ಪಟ್ಟಣದ ಪ್ರತಿಷ್ಠಿತ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಗೆ ೨೦೨೧-೨೨ನೇ ಸಾಲಿನ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಇದೇ ಸೆಪ್ಟೆಂಬರ್ ೩೦ ರವರೆಗೆ ವಿಸ್ತರಿಸಲಾಗಿದೆ , ಆಸಕ್ತ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಆಗಮಿಸಿ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಆಶಾಕಾಮತ್ ತಿಳಿಸಿದ್ದಾರೆ .

ಈ ಸಾಲಿನ ದ್ವಿತೀಯ ವರ್ಷಕ್ಕೆ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪ್ರಕ್ರಿಯೆಯು ಕೂಡ
ಪ್ರಾರಂಭಗೊAಡಿದ್ದು ಐಟಿಐ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ತಾಂತ್ರಿಕ ವಿಷಯ ಪಾಸಾದ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ತಿಳಿಸಿದ ಪ್ರಾಂಶುಪಾಲೆ ಆಶಾಕಾಮತ್ ಮೊದಲು ಬಂದವರಿಗೆ ಮೊದಲು ಪ್ರವೇಶ ನೀಡಲಾಗುವುದು. ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಟ್ಯಾಬ್ಲೆಟ್ ಪಿಸಿ’ಗಳನ್ನು ವಿತರಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಾಕಾಮತ್ ಮನವಿ ಮಾಡಿದರು..

ಆನ್‌ಲೈನ್ ಪ್ರವೇಶ ಪ್ರಕ್ರಿಯೆಯು ಈಗಾಗಲೇ ಮುಕ್ತಾಯಗೊಂಡಿದ್ದು ಆಫ್‌ಲೈನ್ ಪ್ರವೇಶ ಪ್ರಕ್ರಿಯೆಯಲ್ಲಿ ಭರ್ತಿಯಾಗದೇ ಖಾಲಿ ಉಳಿದಿರುವ ೮೦ಕ್ಕೂ ಹೆಚ್ಚಿನ ಸೀಟುಗಳನ್ನು ನೇರವಾಗಿ ಭರ್ತಿ ಮಾಡಲಾಗುವುದು. ಪರ್ಸೆಂಟೇಜ್ ಸಮಸ್ಯೆಯಿಲ್ಲ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅಗತ್ಯ ದಾಖಲಾತಿ ಗಳೊಂದಿಗೆ ನೇರವಾಗಿ ಕಾಲೇಜಿಗೆ ಬಂದು ಅರ್ಜಿಯನ್ನು ಸಲ್ಲಿಸಿ ಸಿವಿಲ್ ಎಂಜಿನಿಯರಿAಗ್, ಮೆಕ್ಯಾನಿಕಲ್ ಎಂಜಿನಿಯರಿAಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿAಗ್ ಹಾಗೂ ಎಂಜಿನಿಯರಿAಗ್ ಕೋರ್ಸುಗಳಿಗೆ ನೇರವಾಗಿ ಪ್ರವೇಶವನ್ನು ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರವೇಶಾತಿ ವಿಭಾಗದ ಮುಖ್ಯಸ್ಥರಾದ ಮಂಜಪ್ಪಗೌಡ ಅವರ ಮೊಬೈಲ್ ಸಂಖ್ಯೆ-೯೫೩೮೭-೧೮೯೬೮ ಶ್ರೀದರ್ಶನ್ ಅವರ ಮೊಬೈಲ್-೯೮೪೪೦-೮೨೮೭೦ ಅನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಾಂಶುಪಾಲೆ ಆಶಾಕಾಮತ್ ತಿಳಿಸಿದ್ದಾರೆ.

ವರದಿ: ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ

error: