May 3, 2024

Bhavana Tv

Its Your Channel

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪೋಷಣ್ ಅಭಿಯಾನ ಹಾಗೂ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಕೆ.ಆರ್.ಪೇಟೆ : ಕೆ.ಆರ್.ಪೇಟೆ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪೋಷಣ್ ಅಭಿಯಾನ ಹಾಗೂ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

ಕೃಷ್ಣರಾಜಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬಿ, ಅರಿಶಿನ ಕುಂಕುಮ ಹಚ್ಚಿ, ಬಳೆಗಳು, ತೆಂಗಿನಕಾಯಿ ಮತ್ತು ರವಿಕೆ ಕಣವನ್ನು ನೀಡಿ ಸೀಮಂತ ಕಾರ್ಯವನ್ನು ನಡೆಸಿ ಮಹಿಳೆಯರಿಗೆ ಶುಭ ಹಾರೈಸಿದರು ..

ಗರ್ಭಿಣಿ ಮಹಿಳೆಯರು ಪೌಷ್ಟಿಕಾಂಶಗಳಿAದ ಕೂಡಿರುವ ಆಹಾರ ಪದಾರ್ಥಗಳು ಸೇವಿಸಿ ಮುಂದೆ ಹುಟ್ಟುವ ಮಗುವಿಗೆ ಅಪೌಷ್ಟಿಕತೆ ಉಂಟಾಗದAತೆ ಎಚ್ಚರ ವಹಿಸಬೇಕು. ಮುಂದೆ ಜನಿಸುವ ಮಗುವು ಸದೃಡವಾಗಿದ್ದು ಆರೋಗ್ಯವಂತವಾಗಿರುವ ದಿಕ್ಕಿನಲ್ಲಿ ತಾಯಂದಿರು ಕಡ್ಡಾಯವಾಗಿ ಸೊಪ್ಪು, ತರಕಾರಿಗಳು, ಹಣ್ಣು ಹಂಪಲುಗಳು, ಮೊಟ್ಟೆ, ಹಾಲು ಸೇರಿದಂತೆ ಪೌಷ್ಟಿಕಾಂಶಗಳಿAದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪೋಷಣ್ ಅಭಿಯಾನವು ಕೇವಲ ಒಂದು ಸಾಂಕೇತಿಕ ಕಾರ್ಯಕ್ರಮದಂತಾಗದೇ ಜನಾಂದೋಲನದ ಮಾದರಿಯಲ್ಲಿ ಕೆಲಸ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಾದೇವಿ ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮಾತನಾಡಿ ಮಗುವಿನ ಸಮೃದ್ಧ ಆರೋಗ್ಯ ಹಾಗೂ ಬೆಳವಣಿಗೆಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದೆ. ತಾಯಿಯ ಆರೋಗ್ಯದಲ್ಲಿ ಮಗುವಿನ ಆರೋಗ್ಯ ಹಾಗೂ ಜೀವನವು ಅಡಗಿರುವುದರಿಂದ ತಾಯಂದಿರು ತಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಅಪೌಷ್ಠಿಕತೆ ಹಾಗೂ ರಕ್ತಹೀನತೆಯಾಗದಂತೆ ಎಚ್ಚರ ವಹಿಸಿ ಪೌಷ್ಟಿಕಾಂಶಗಳಿAದ ಕೂಡಿರುವ ಉತ್ತಮವಾದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ಮನವಿ ಮಾಡಿದರು..

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಮಾತನಾಡಿ ಕೋವಿಡ್ ಹಿನ್ನೆಲೆಯಲ್ಲಿ ತಾಯಂದಿರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡು ಗರ್ಭದಲ್ಲಿರುವ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಿಗೆ ಕಡ್ಡಾಯವಾಗಿ ಎಲ್ಲಾ ಬಗೆಯ ಲಸಿಕೆಯನ್ನು ಹಾಕಿಸಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ತಾಯಂದಿರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಸಿಡಿಪಿಓ ದೇವಕುಮಾರ್, ಎಸಿಡಿಪಿಓ ಪದ್ಮಾ, ಸೂಪರ್ ವೈಸರ್ ಗಳಾದ ಶಾಂತವ್ವ, ದಿಲಶಾಧ್ ಬಿ.ನದಾಫ್, ಕಛೇರಿಯ ವ್ಯವಸ್ಥಾಪಕಿ ಯಶೋಧಾ ಮತ್ತಿತರರು ಉಪಸ್ಥಿತರಿದ್ದರು..

ಗರ್ಭಿಣಿ ಮಹಿಳೆಯರಿಗೆ ವಿಶೇಷವಾಗಿ ಉಡಿತುಂಬುವ ಕಾರ್ಯಕ್ರಮವು ಪೋಷಣ್ ಅಭಿಯಾನದ ಜೊತೆಯಲ್ಲಿ ಏರ್ಪಾಡಾಗಿದ್ದರಿಂದ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು, ಹಬ್ಬದ ಸಂಭ್ರಮವು ಕಾರ್ಯಕ್ರಮದಲ್ಲಿ ಕಂಡುಬAತು, ವಿಶೇಷವಾಗಿ ಹಣ್ಣು ತರಕಾರಿಗಳು, ಪೌಷ್ಠಿಕಾಂಶದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: