May 15, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದಲ್ಲಿ ಭಾರಿ ಮಳೆ; ಅಂಗಡಿಗಳಿಗೆ ನುಗ್ಗಿದ ನೀರು

ಕೆ.ಆರ್.ಪೇಟೆ: ಭಾರೀ ಮಳೆಯ ಆರ್ಭಟಕ್ಕೆ ನಲುಗಿದ್ದ ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರಾಜಕಾಲುವೆಯ ಪಕ್ಕದ ಅಂಗಡಿ ಮಳಿಗೆಗಳು ಸೇರಿದಂತೆ ಮಳೆಯ ನೀರು ನುಗ್ಗಿ ಭಾರೀ ಹಾನಿ ಸಂಭವಿಸಿರುವ ಬಸ್ ಸ್ಟಾಂಡ್ ಸುತ್ತ ಮುತ್ತಲಿನ ಅಂಗಡಿ ಮುಂಗಟ್ಟುಗಳಿಗೆ ಹಾಗೂ ಸಾಕಷ್ಟು ತೊಂದರೆಗೆ ಒಳಗಾಗಿರುವ ಶ್ರೀರಂಗ ಸ್ಯಾರಿ ಸೆಂಟರ್, ಗೌರಿ ಗಾರ್ಮೆಂಟ್ಸ್, ಶ್ರೀ ಚಾಮುಂಡೇಶ್ವರಿ ಪ್ರಾವಿಜನ್ ಸ್ಟೋರ್ಸ್ ಸೇರಿದಂತೆ ೨೨ಕ್ಕೂ ಹೆಚ್ಚಿನ ವ್ಯಾಪಾರಸ್ಥರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು .

ಬಸ್ ನಿಲ್ದಾಣಕ್ಕೆ ಹೊಸದಾಗಿ ಕಾಯಕಲ್ಪ ನೀಡಿ ಮಳೆಯ ನೀರು ಸರಾಗವಾಗಿ ಹೊರಗೆ ಹರಿದು ಹೋಗುವಂತೆ ಸೂಕ್ತ ಕ್ರಮ ವಹಿಸಲಾಗುವುದು. ಅಲ್ಲದೇ ಒತ್ತುವರಿಯಾಗಿರುವ
ಪಟ್ಟಣದ ರಾಜಾಕಾಲುವೆಯ ಒತ್ತುವರಿ ತೆರವುಗೊಳಿಸಿ ನೀರು ಬಸ್ ನಿಲ್ದಾಣದೊಳಕ್ಕೆ ಹೋಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ನಾರಾಯಣಗೌಡರು ತಿಳಿಸಿದರು.

ನಿನ್ನೆ ರಾತ್ರಿ ಭಾರೀ ಮಳೆಯಿಂದಾಗಿ ಬಸ್ ನಿಲ್ದಾಣವು ದ್ವೀಪದಂತಾಗಿದ್ದು ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದ ೨೨ ಮಂದಿ ಪ್ರಯಾಣಿಕರನ್ನು ಪಾರು ಮಾಡಿರುವ ತಹಶೀಲ್ದಾರ್ ಎಂ.ಶಿವಮೂರ್ತಿ, ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ನಿರಂಜನ್ ಪಿಎಸ್ ಐ ಸುರೇಶ್ ಮತ್ತು ಸಿಬ್ಬಂದಿಗಳು, ಪುರಸಭೆಯ ಸಿಬ್ಬಂದಿ ವರ್ಗದವರು, ಅಗ್ನಿಶಾಮಕ ಠಾಣೆಯ ಸಿಬ್ಬಂಧಿ ವರ್ಗದವರಿಗೆ, ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಹಕಾರ ನೀಡಿದ ಸಾರ್ವಜನಿಕರಿಗೂ ಸರ್ಕಾರದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಸಚಿವ ನಾರಾಯಣಗೌಡ ತಿಳಿಸಿದರು.
ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯ ನೀರು
ಕೋಡಿ ಬಿದ್ದು ನಯನ ಮನೋಹರವಾದ ದೃಶ್ಯದ ನಿರ್ಮಾಣವಾಗಿದೆ. ಸುಂದರವಾದ ಫಾಲ್ಸ್ ನೋಡಲು ಹರಿದು ಬರುತ್ತಿರುವ ಸಾರ್ವಜನಿಕರು. ನೀರಾವರಿ ಇಲಾಖೆಯ ಎಇಇ ರಂಗಸ್ವಾಮಿ ಮತ್ತು ಸಹಾಯಕ ಎಂಜಿನಿಯರ್ ಎಲೆಕೆರೆ ರವಿ ಸ್ಥಳಕ್ಕೆ ಭೇಟಿ ನೀಡಿ ಫಾಲ್ಸ್ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದoತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಭಾರಿ ಮಳೆಗೆ ನಿನ್ನೆ ರಾತ್ರಿ ಕೆರೆಯಂತಾಗಿದ್ದ ಬಸ್ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ..ಬಸ್ ನಿಲ್ದಾಣದೊಳಗೆ ಕೆಸರು, ಮಣ್ಣು ತುಂಬಿರುವುದರಿAದ ಸಾರಿಗೆ ಅಧಿಕಾರಿಗಳು ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ. ಬಸ್ ಡಿಪೋ ಅಧಿಕಾರಿ ವಿಪಿನ್ ಕೃಷ್ಣ ಅವರ ನೇತೃತ್ವದಲ್ಲಿ ಬಸ್ ನಿಲ್ದಾಣದ ದುರಸ್ಥಿ ಕಾರ್ಯವು ಭರದಿಂದ ಸಾಗಿದೆ..

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುAಡ, ಪುರಸಭಾ ಸದಸ್ಯರಾದ ಪದ್ಮರಾಜು, ಕೆ.ಎಸ್.ಪ್ರಮೋದ್, ಶುಭಾಗಿರೀಶ್, ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಪಿಎಸ್ ಐ ಸುರೇಶ್, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ವ್ಯವಸ್ಥಾಪಕ ವಿಫಿನ್ ಕೃಷ್ಣ, ಸಾರಿಗೆ ನಿಯಂತ್ರಣಾಧಿಕಾರಿ ಪುಟ್ಟಸ್ವಾಮಿಗೌಡ, ನೀರಾವರಿ ಇಲಾಖೆಯ ಎಇಇ ರಂಗಸ್ವಾಮಿ, ಎಇ ಎಲೆಕೆರೆ ರವಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: