May 15, 2024

Bhavana Tv

Its Your Channel

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿಶಿಕ್ಷಣ ತರಬೇತಿ ಕಾರ್ಯಕ್ರಮ

ಕೆ.ಆರ್.ಪೇಟೆ: ಯುವಜನರು ತಾಂತ್ರಿಕ ಶಿಕ್ಷಣವನ್ನು ಅಭ್ಯಾಸ ಮಾಡಿ ಎಂಜಿನಿಯರಿoಗ್ ಕೌಶಲ್ಯದ ಮೂಲಕ ಸಧೃಡ ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಆಶಾಕಾಮತ್ ಮನವಿ ಮಾಡಿದರು ..

ಅವರು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ಲ್ಯಾಟರಲ್ ಪ್ರವೇಶದ ಮೂಲಕ ೩ನೇ ಸೆಮಿಸ್ಟರ್ ಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿಶಿಕ್ಷಣ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು…

ಯುವಜನರು ಶ್ರದ್ಧಾಭಕ್ತಿ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚವನ್ನು ವಿಜ್ಞಾನ ತಂತ್ರಜ್ಞಾನದ ಪ್ರತಿರೂಪವಾಗಿರುವ ಎಂಜಿನಿಯರಿAಗ್ ಕೌಶಲ್ಯದ ಮೂಲಕ ಸರ್ವಶ್ರೇಷ್ಠ ಸಾಧನೆಯನ್ನು ಸುಲಭವಾಗಿ ಮಾಡಬಹುದಾಗಿದೆ. ತಮ್ಮ ಶಿಸ್ತು, ಬದ್ಧತೆ ಹಾಗೂ ಎಂಜಿನಿಯರುಗಳಲ್ಲಿಯೇ ಮಾದರಿಯಾಗಿ ಕೆಲಸ ಮಾಡಿ ವಿಶ್ವಮಟ್ಟದ ಖ್ಯಾತಿಯನ್ನು ಗಳಿಸಿರುವ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರಂತೆಯೇ ಆದರ್ಶ ಎಂಜಿನಿಯರ್ ಆಗಿ ಹೊರಹೊಮ್ಮಲು ಸಾಧ್ಯವಿದೆ. ಪಾಲಿಟೆಕ್ನಿಕ್ ತಾಂತ್ರಿಕ ವ್ಯಾಸಂಗವು ಯುವಜನರು ಸ್ವಾವಲಂಭಿ ಜೀವನ ನಡೆಸಲು ವರದಾನವಾಗಿದೆ ಎಂದು ಆಶಾಕಾಮತ್ ಹೇಳಿದರು..

ಅಭಿಶಿಕ್ಷಣ ತರಭೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಪುರಸಭೆಯ ಮಾಜಿಸದಸ್ಯ ಕೆ.ಆರ್.ನೀಲಕಂಠ ಮಾತನಾಡಿ ಕೆ.ಆರ್.ಪೇಟೆ ತಾಲೂಕಿನ ಕೀರ್ತಿಯನ್ನು ನಾಡಿನಾದ್ಯಂತ ಬೆಳಗಿರುವ ಪಾಲಿಟೆಕ್ನಿಕ್ ಕಾಲೇಜು ಆರಂಭವಾಗಿ ೬೧ ವರ್ಷಗಳನ್ನು ಸಂಪೂರ್ಣಗೊಳಿಸಿ ಮುನ್ನಡೆಯುತ್ತಿದ್ದು ಸಾವಿರಾರು ಎಂಜಿನಿಯರುಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಗ್ರಾಮೀಣ ಪ್ರದೇಶದ ಬಡ ರೈತಾಪಿವರ್ಗದ ಜನರ ಮಕ್ಕಳು ಕೂಡ ನಮ್ಮ ತಾಲೂಕಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಇರುವುದರಿಂದಾಗಿ ತಾಂತ್ರಿಕ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಿದೆ. ಯುವಜನರು ತಾಂತ್ರಿಕ ಜ್ಞಾನವನ್ನು ಪಡೆದುಕೊಂಡು ಸುಭದ್ರವಾದ ಸಮಾಜವನ್ನು ಕಟ್ಟಲು ತಮ್ಮ ಎಂಜಿನಿಯರಿAಗ್ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು…

ಕಾಲೇಜಿನ ವಿವಿಧ ವಿಭಾಗಗಳ ವಿಭಾಗಾಧಿಕಾರಿಗಳಾದ ವಿಜಯ, ನಾಗೇಶ್, ದೊರೆಸ್ವಾಮಿ, ಮಹಾಲಿಂಗೇಗೌಡ, ಮಹಿಳಾ ಸಂರಕ್ಷಣಾ ಘಟಕದ ರಾಧಮ್ಮ, ಶಿವಕುಮಾರ್, ಹೇಮಾವತಿ, ವನಿತಾ ಮತ್ತು ಸುನೀತ ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: