October 20, 2021

Bhavana Tv

Its Your Channel

ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆ

ಕೃಷ್ಣರಾಜಪೇಟೆ. ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಪಟ್ಟಣದ ಜನತೆಯ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದು ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುAಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯಸಭೆಯಲ್ಲಿ ಸದಸ್ಯರು ನಿರ್ಧರಿಸಿದರು.

ಪಟ್ಟಣದ ಸ್ವರ್ಣಜಯಂತಿ ಶಹರೀ ರೋಜ್ಗಾರ್ ಯೋಜನಾ ಭವನದಲ್ಲಿ ಕಳೆದ ತಿಂಗಳು ೨೨ರಂದು ನಿಗಧಿಯಾಗಿದ್ದ ಪುರಸಭೆಯ ಸಾಮಾನ್ಯ ಸಭೆ ಯು ಕೋರಂ ಅಭಾವದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಆದರೆ ಇಂದು ನಡೆದ ಮುಂದವರೆದ ಸಭೆಯಲ್ಲಿ ಸದಸ್ಯರಾದ ಶಾಮಿಯಾನತಿಮ್ಮೇಗೌಡರನ್ನು ಹೊರತುಪಡಿಸಿ ಉಳಿದೆಲ್ಲಾ ೨೨ ಸದಸ್ಯರು ಸಭೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ತಮ್ಮ ವಾರ್ಡುಗಳಿಗೆ ಅಗತ್ಯವಾಗಿ ಆಗಬೇಕಾದ ಕೆಲಸಗಳ ಬಗ್ಗೆ ಸಮಗ್ರವಾದ ಚರ್ಚೆಯನ್ನು ನಡೆಸಿದ್ದು ವಿಶೇಷವಾಗಿತ್ತು.

ಹೊಸಹೊಳಲು ಸೇರಿದಂತೆ ಪಟ್ಟಣದ ಎಲ್ಲಾ ೨೩ ವಾರ್ಡುಗಳಲ್ಲಿಯೂ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡೋಣ, ಪಟ್ಟಣದ ಜನತೆಗೆ ಅತೀ ಅಗತ್ಯವಾಗಿ ಬೇಕಾದ ಒಳಚರಂಡಿ ಯೋಜನೆಯ ಕಾಮಗಾರಿಯು ಕುಂಟುತ್ತಾ ಸಾಗುತ್ತಿದೆ. ಒಳಚರಂಡಿ ಯೋಜನೆಯ ಕಾಮಗಾರಿಯು ಸಂಪೂರ್ಣಗೊಳ್ಳದಿದ್ದರೂ ಅಕ್ರಮವಾಗಿ ಮನೆಗಳು, ವಾಣಿಜ್ಯ ಸಂಕೀರ್ಣಗಳು, ಸಮುದಾಯಭವನಗಳು ಹಾಗೂ ವಿದ್ಯಾರ್ಥಿ ನಿಲಯಗಳ ಒಳಚರಂಡಿ ಸಂಪರ್ಕವನ್ನು ಅಕ್ರಮವಾಗಿ ನೀಡಿರುವುದರಿಂದ ಪಟ್ಟಣದ ವಿವಿಧ
ಬಡಾವಣೆಗಳಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳ ಮೂಲಕ ತ್ಯಾಜ್ಯವು ಹೊರಬಂದು ಗಬ್ಬು ವಾಸನೆಯು ಮೂಗಿಗೆ ರಾಚುತ್ತಿದೆಯಲ್ಲದೇ ಅಶುಚಿತ್ವವು ತಾಂಡವವಾಡುತ್ತಿದೆ. ಆದ್ದರಿಂದ ಅಪೂರ್ಣವಾಗಿರುವ ಒಳಚರಂಡಿ ಯೋಜನೆಯನ್ನು ಪುರಸಭೆಗೆ ಹಸ್ತಾಂತರ ಮಾಡಿಕೊಳ್ಳುವುದು ಬೇಡ ಯೋಜನೆಯು ಸಂಪೂರ್ಣಗೊAಡ ನಂತರವಷ್ಟೇ ನಮ್ಮ ವಶಕ್ಕೆ ಪಡೆದುಕೊಂಡು ಪುರಸಭೆಯ ವತಿಯಿಂದಲೇ ನಿರ್ವಹಣೆ ಮಾಡೋಣ ಎಂಬ ಅಧ್ಯಕ್ಷೆ ಮಹಾದೇವಿನಂಜುAಡ ಅವರ ಮಾಹಿತಿಗೆ ಸಭೆಯಲ್ಲಿ ಪರ-ವಿರೋಧವಾಗಿ ಭಾರೀ ಚರ್ಚೆಯೇ ನಡೆಯಿತು. ಪುರಸಭೆಯ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್, ಸದಸ್ಯರಾದ ಕೆ.ಎಸ್.ಪ್ರಮೋದ್, ಕೆ.ಎಸ್.ಸಂತೋಷ್, ಕೆ.ಆರ್.ರವೀಂದ್ರಬಾಬೂ ಮತ್ತು ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಅವರ ನಡುವೆ ಭಾರೀ ವಾಗ್ಯದ್ಧವು ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು. ಆಗ ಮಧ್ಯೆ ಪ್ರವೇಶಿಸಿದ ಪುರಸಭೆಯ ನೂತನ ಮುಖ್ಯಾಧಿಕಾರಿ ಕುಮಾರ್ ಮನವಿ
ಮಾಡಿ ಸಭೆಯಲ್ಲಿನ ಗದ್ದಲವನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಟ್ಟಡಗಳ ಪರವಾನಗಿಯನ್ನು ಪಡೆಯಲು ನಗರಾಭಿವೃದ್ಧಿ ಇಲಾಖೆಯು ಹಲವಾರು ಕಠಿಣವಾದ ನಿಯಮಗಳನ್ನು ರೂಪಿಸಿರುವುದರಿಂದ ಮನೆಗಳನ್ನು ನಿರ್ಮಿಸುವವರು ಪರವಾನಗಿಯನ್ನು ಪಡೆಯಲು ತೊಂದರೆಯಾಗುತ್ತಿದೆಯಲ್ಲದೇ, ಪುರಸಭೆಯ ಅಧಿಕಾರಿಗಳು ಕಟ್ಟಡ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರವನ್ನು ನೀಡುತ್ತಿರುವುದರಿಂದ ಪುರಸಭೆಗೆ ಆರ್ಥಿಕವಾಗಿ ಆದಾಯ ಬರುವುದು ಕೂಡ ತಪ್ಪುತ್ತಿದೆ. ಜನಸಾಮಾನ್ಯರು ಕಟ್ಟಡ ಪರವಾನಗಿ ಪಡೆಯಲು ಭಾರೀ ಸಾಹಸ ಮಾಡಬೇಕಾಗಿದೆ. ಈ ಬಗ್ಗೆ
ಬಿಲ್ಡಿಂಗ್ ಲೈಸೆನ್ಸ್ ನೀಡುವ ಕ್ರಮವನ್ನು ಸರಳೀಕರಣಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಸದಸ್ಯ ಕೆ.ಎಸ್.ಸಂತೋಷ್‌ಕುಮಾರ್ ಅವರ ಮನವಿಗೆ ಪರವಿರೋಧವಾಗಿ ಭಾರೀ ಚರ್ಚೆಯೇ ನಡೆಯಿತು. ಅಂತಿಮವಾಗಿ ಕಟ್ಟಡವನ್ನು ನಿರ್ಮಾಣ ಮಾಡುವವರಿಗೆ ನಿಯಮಗಳನ್ನು ಸರಳೀಕರಣ ಮಾಡಿ ಲೈಸೆನ್ಸ್ ನೀಡಲು ತೀರ್ಮಾನಿಸಲಾಯಿತು. ಪುರಸಭೆಯ ಎಲ್ಲಾ ೨೩ ವಾರ್ಡುಗಳಲ್ಲಿಯೂ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸದೇ ಎರಡು ವರ್ಷಕ್ಕೂ ಹೆಚ್ಚು
ಸಮಯವಾಗಿರುವುದರಿಂದ ಶ್ರೀಸಾಮಾನ್ಯರಿಗೆ ಭಾರೀ ತೊಂದರೆಯಾಗಿದೆ. ಕೆಲವು ಬಡಾವಣೆಗಳು ಬೀದಿ ದೀಪವಿಲ್ಲದೇ ಕತ್ತಲಿನಲ್ಲಿ ಮುಳುಗಿವೆ ಎಂಬ ಸದಸ್ಯರ ಆಗ್ರಹಕ್ಕೆ ಮಣಿದ ಅಧ್ಯಕ್ಷೆ ಮಹಾದೇವಿ ಮತ್ತು ಮುಖ್ಯಾಧಿಕಾರಿ ಕುಮಾರ್ ಅತ್ಯುತ್ತಮವಾದ ಗುಣಮಟ್ಟದ ೨೩೦ ಎಲ್‌ಇಡಿ ದೀಪಗಳನ್ನು ಖರೀದಿಸಿ ಪ್ರತೀ ವಾರ್ಡಿಗೂ ೧೦ ದೀಪಗಳಂತೆ ವಿತರಿಸಲು ನಿರ್ಧರಿಸಲಾಯಿತು.

ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಗಟು ಕುಡಿಯುವ ನೀರು ಯೋಜನೆಯು ೨೭ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಡೆಯುತ್ತಿದೆ. ಪ್ರಸ್ತುತ ೧೪ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೇಮಗಿರಿಯ ಹೇಮಾವತಿ ನದಿಯ ಬಳಿ ಜಾಕ್‌ವೆಲ್, ಪಂಪ್‌ಹೌಸ್, ಪೈಪ್‌ಲೈನ್ ನಿರ್ಮಿಸಿ ಸಾಧುಗೋನಹಳ್ಳಿಯ ಬಾಣಂತಿಗುಡ್ಡದ ಬಳಿ ಫಿಲ್ಟರ್ ಹೌಸ್ ಮತ್ತು ನೀರು ಶೇಖರಣಾ ತೊಟ್ಟಿಯನ್ನು ನಿರ್ಮಿಸಲಾಗಿದೆ. ಹೊಸಹೊಳಲು ಸೇರಿದಂತೆ ಪಟ್ಟಣದ ಎಲ್ಲಾ ೨೩ ವಾರ್ಡುಗಳಲ್ಲಿಯೂ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡೋಣ, ಪಟ್ಟಣದ ಜನತೆಗೆ ಅತೀ ಅಗತ್ಯವಾಗಿ ಬೇಕಾದ
ಒಳಚರಂಡಿ ಯೋಜನೆಯ ಕಾಮಗಾರಿಯು ಕುಂಟುತ್ತಾ ಸಾಗುತ್ತಿದೆ. ಒಳಚರಂಡಿ ಯೋಜನೆಯ ಕಾಮಗಾರಿಯು ಸಂಪೂರ್ಣಗೊಳ್ಳದಿದ್ದರೂ ಅಕ್ರಮವಾಗಿ ಮನೆಗಳು, ವಾಣಿಜ್ಯ ಸಂಕೀರ್ಣಗಳು, ಸಮುದಾಯಭವನಗಳು ಹಾಗೂ ವಿದ್ಯಾರ್ಥಿ ನಿಲಯಗಳ ಒಳಚರಂಡಿ ಸಂಪರ್ಕವನ್ನು ಅಕ್ರಮವಾಗಿ ನೀಡಿರುವುದರಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳ ಮೂಲಕ ತ್ಯಾಜ್ಯವು ಹೊರಬಂದು ಗಬ್ಬು ವಾಸನೆಯು ಮೂಗಿಗೆ ರಾಚುತ್ತಿದೆಯಲ್ಲದೇ ಅಶುಚಿತ್ವವು ತಾಂಡವವಾಡುತ್ತಿದೆ. ಆದ್ದರಿಂದ ಅಪೂರ್ಣವಾಗಿರುವ ಒಳಚರಂಡಿ ಯೋಜನೆಯನ್ನು ಪುರಸಭೆಗೆ ಹಸ್ತಾಂತರ ಮಾಡಿಕೊಳ್ಳುವುದು ಬೇಡ ಯೋಜನೆಯು ಸಂಪೂರ್ಣಗೊAಡ ನಂತರವಷ್ಟೇ ನಮ್ಮ ವಶಕ್ಕೆ ಪಡೆದುಕೊಂಡು ಪುರಸಭೆಯ ವತಿಯಿಂದಲೇ ನಿರ್ವಹಣೆ ಮಾಡೋಣ ಎಂಬ ಅಧ್ಯಕ್ಷೆ ಮಹಾದೇವಿ ನಂಜುAಡ ಅವರ ಮಾಹಿತಿಗೆ ಸಭೆಯಲ್ಲಿ ಪರ-ವಿರೋಧವಾಗಿ ಭಾರೀ ಚರ್ಚೆಯೇ ನಡೆಯಿತು.
ಪುರಸಭೆಯ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್, ಸದಸ್ಯರಾದ ಕೆ.ಎಸ್.ಪ್ರಮೋದ್, ಕೆ.ಎಸ್.ಸಂತೋಷ್, ಕೆ.ಆರ್.ರವೀಂದ್ರಬಾಬೂ ಮತ್ತು ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಅವರ ನಡುವೆ ಭಾರೀ ವಾಗ್ಯದ್ಧವು ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು. ಆಗ ಮಧ್ಯೆ ಪ್ರವೇಶಿಸಿದ ಪುರಸಭೆಯ ನೂತನ ಮುಖ್ಯಾಧಿಕಾರಿ ಕುಮಾರ್ ಮನವಿ ಮಾಡಿ ಸಭೆಯಲ್ಲಿ ಗದ್ದಲವನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಟ್ಟಡಗಳ ಪರವಾನಗಿಯನ್ನು ಪಡೆಯಲು ನಗರಾಭಿವೃದ್ಧಿ ಇಲಾಖೆಯು
ಹಲವಾರು ಕಠಿಣವಾದ ನಿಯಮಗಳನ್ನು ರೂಪಿಸಿರುವುದರಿಂದ ಮನೆಗಳನ್ನು ನಿರ್ಮಿಸುವವರು ಪರವಾನಗಿಯನ್ನು ಪಡೆಯಲು ಭಾರೀ ತೊಂದರೆಯಾಗುತ್ತಿದೆಯಲ್ಲದೇ, ಪುರಸಭೆಯ ಅಧಿಕಾರಿಗಳು ಕಟ್ಟಡ
ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರವನ್ನು ನೀಡುತ್ತಿರುವುದರಿಂದ ಪುರಸಭೆಗೆ ಆರ್ಥಿಕವಾಗಿ ಆದಾಯ ಬರುವುದು ತಪ್ಪುತ್ತಿದೆಯಲ್ಲದೇ ಜನಸಾಮಾನ್ಯರು ಕಟ್ಟಡ ಪರವಾನಗಿ ಪಡೆಯಲು ಭಾರೀ ಸಾಹಸ ಮಾಡಬೇಕಾಗಿದೆ. ಈ ಬಗ್ಗೆ ಬಿಲ್ಡಿಂಗ್ ಲೈಸೆನ್ಸ್ ನೀಡುವ ಕ್ರಮವನ್ನು ಸರಳೀಕರಣಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಸದಸ್ಯ ಕೆ.ಎಸ್.ಸಂತೋಷ್‌ಕುಮಾರ್ ಅವರ ಮನವಿಗೆ ಪರವಿರೋಧವಾಗಿ ಭಾರೀ ಚರ್ಚೆಯೇ ನಡೆಯಿತು. ಅಂತಿಮವಾಗಿ ಕಟ್ಟಡವನ್ನು ನಿರ್ಮಾಣ ಮಾಡುವವರಿಗೆ ನಿಯಮಗಳನ್ನು ಸರಳೀಕರಣ ಮಾಡಿ ಲೈಸೆನ್ಸ್ ನೀಡಲು ತೀರ್ಮಾನಿಸಲಾಯಿತು.

ಮೂರನೇ ಹಂತದ ಕುಡಿಯುವ ನೀರು ಯೋಜನೆಯು ಸಂಪೂರ್ಣಗೊಳ್ಳಲು ಇನ್ನೂ ೧೩ಕೋಟಿ ರೂಪಾಯಿ ಹಣದ ಅವಶ್ಯಕತೆ ಇರುವುದರಿಂದ ಕೆಯುಐಡಿಎಫ್‌ಸಿ ವತಿಯಿಂದ ೧೦ ಕೋಟಿ ಸಾಲವನ್ನು ಪಡೆದು ಕಾಮಗಾರಿಯನ್ನು ಸಂಫೂರ್ಣಗೊಳಿಸುವ ನಿಟ್ಟಿನಲ್ಲಿ ಒಪ್ಪಿಗೆ ನೀಡುವಂತೆ ಸಭೆಯಲ್ಲಿ ಮನವಿ ಮಾಡಿದಾಗ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದರು. ಸಚಿವ ನಾರಾಯಣಗೌಡರ ಬಳಿ ನಿಯೋಗ
ಹೋಗಿ ೩ನೇ ಹಂತದ ಕುಡಿಯುವ ನೀರು ಯೋಜನೆಯನ್ನು ಸಂಫೂರ್ಣಗೊಳಿಸಿ ಜನತೆಯ ಸೇವೆಗೆ ಸಮರ್ಪಿಸಲು ಅಗತ್ಯವಾಗಿ ಬೇಕಾದ ೧೩ಕೋಟಿ ಹಣವನ್ನು ರಾಜ್ಯ ಸರ್ಕಾರದಿಂದ ಸಹಾಯ ಧನದ ರೂಪದಲ್ಲಿ ಪಡೆದುಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಕೆ.ಆರ್.ಪೇಟೆ ಪಟ್ಟಣದ ಪುರಸಭೆಯ ಒಡೆತನದಲ್ಲಿರುವ ೧೪೦ಕ್ಕೂ ಹೆಚ್ಚಿನ ವಾಣಿಜ್ಯ ಮಳಿಗೆಗಳನ್ನು ೪ವರ್ಷ ೧೧ ತಿಂಗಳ ಅವಧಿಗೆ ಮರು ಹರಾಜು ಮಾಡಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಕೆ.ಆರ್.ಪೇಟೆ ಪಟ್ಟಣವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾದ್ದರಿಂದ ಪಟ್ಟಣದ ಜನತೆಗೆ ಅತೀ ಅಗತ್ಯವಾಗಿ ನೀಡಬೇಕಾದ ಸ್ವಚ್ಛತೆ, ಕುಡಿಯುವ ನೀರು ಹಾಗೂ ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು
ಒದಗಿಸಿಕೊಡಲು ನಿರ್ಧರಿಸಲಾಯಿತು. ಪುರಸಭೆಯ ಉಪಾಧ್ಯಕ್ಷೆ ಗಾಯತ್ರಿಸುಬ್ಬಣ್ಣ, ಸದಸ್ಯರಾದ ಕೆ.ಬಿ.ಮಹೇಶ್, ನಟರಾಜ, ಗಿರೀಶ್, ಕೆ.ಸಿ.ಮಂಜುನಾಥ್, ಕೆ.ಆರ್.ರವೀಂದ್ರಬಾಬೂ, ಡಿ.ಪ್ರೇಮಕುಮಾರ್, ಹೆಚ್.ಎನ್.ಪ್ರವೀಣ್, ಸೌಭಾಗ್ಯ ಉಮೇಶ್, ಖಮ್ಮರ್‌ಬೇಗಂಸಲ್ಲೂ, ಸುಗುಣರಮೇಶ್, ಪಂಕಜಾ, ಶೋಭಾದಿನೇಶ್, ಶುಭಾಗಿರೀಶ್, ಕಮಲಮ್ಮ, ಪದ್ಮರಾಜು, ಇಂದ್ರಾಣಿವಿಶ್ವನಾಥ್, ಹೆಚ್.ಡಿ.ಅಶೋಕ್,
ಕೆ.ಎಸ್.ಸಂತೋಷ್, ಕೆ.ಎಸ್.ಪ್ರಮೋದ್, ಹೆಚ್.ಆರ್.ಲೋಕೇಶ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಸಹಾಯಕ ಎಂಜಿನಿಯರ್ ಮಧುಸೂಧನ್, ನಗರನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುರಾಜ್, ಕಂದಾಯಅಧಿಕಾರಿ ರವಿಕುಮಾರ್, ಪುರಸಭೆಯ ಕಛೇರಿಯ ವ್ಯವಸ್ಥಾಪಕ ಸೋಮಶೇಖರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಸೇರಿದ ಸದಸ್ಯರ ನಡುವೆ ಭಿನ್ನಮತ ಹಾಗೂ ಪರವಿರೋಧದ ನಡುವೆಯೂ ಪಟ್ಟಣದ ಸಮಗ್ರವಾದ ಅಭಿವೃದ್ಧಿ ಕುರಿತು ಅರ್ಥಪೂರ್ಣವಾದ ಚರ್ಚೆಗಳು ನಡೆದವು ಸಭೆಯ ನಡುವೆ ಪುರಸಭೆಯ ಸದಸ್ಯರಾಗಿ ಗೆದ್ದವರು ವಾರ್ಡಿನಲ್ಲಿ ವಾಸಮಾಡದೇ ಮೈಸೂರು-ಮಂಗಳೂರು ನಗರದಲ್ಲಿದ್ದುಕೊಂಡು ಸಭೆಗೆ ಮಾತ್ರ ಬಂದು ಹೋಗುತ್ತಿರುವುದರಿಂದ ಜನರ
ಸಮಸ್ಯೆಗಳು ಅರ್ಥವಾಗುತ್ತಿಲ್ಲ ಎಂದು ಸದಸ್ಯರ ಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಸದಸ್ಯರಲ್ಲಿಯೇ ಭಾರೀ ಮೆಚ್ಚುಗೆಯು ವ್ಯಕ್ತವಾಯಿತಲ್ಲದೇ ಚಪ್ಪಾಳೆ ತಟ್ಟಿ ಸದಸ್ಯರು ಪರಸ್ಪರ ಕಾಲೆಳೆದುಕೊಂಡಿದ್ದು ವಿಶೇಷವಾಗಿತ್ತು. ಮಹಾದೇವಿ ನಂಜುAಡ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಇಂದಿನ ಸಭೆಯ ವಿಶೇಷವಾಗಿತ್ತಲ್ಲದೇ ಅಧ್ಯಕ್ಷೆ ಮಹಾದೇವಿ ನಂಜುoಡ ಅವರ ಕಾರ್ಯದಕ್ಷತೆಯನ್ನು ವಿಪಕ್ಷದ ಹಿರಿಯ ಸದಸ್ಯರಾದ ಕೆ.ಸಿ.ಮಂಜುನಾಥ್ ಮತ್ತು ಕೆ.ಬಿ.ಮಹೇಶ್ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂದಿನ ಸಭೆಯ ವಿಶೇಷವಾಗಿತ್ತು.
ಸದಸ್ಯರು ತಮ್ಮ ತಮ್ಮ ವಾರ್ಡುಗಳಿಗೆ ಅಗತ್ಯವಾಗಿ ಆಗಬೇಕಾದ ಕೆಲಸಗಳ ಬಗ್ಗೆ ಸಮಗ್ರವಾದ ಚರ್ಚೆಯನ್ನು ನಡೆಸಿದ್ದು ವಿಶೇಷವಾಗಿತ್ತು. ಮುಖ್ಯಾಧಿಕಾರಿ ಕುಮಾರ್, ಉಪಾಧ್ಯಕ್ಷೆ ಗಾಯತ್ರಿಸುಬ್ಬಣ್ಣ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: