April 26, 2024

Bhavana Tv

Its Your Channel

ವಿಶ್ವ ಹೆಚ್.ಐ.ವಿ ಏಡ್ಸ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ

ಕೆ .ಆರ್.ಪೇಟೆ: ಅಸುರಕ್ಷಿತ ಲೈಂಗಿಕ ಸಂಪರ್ಕವು ಏಡ್ಸ್ ಹರಡಲು ಮುಖ್ಯ ಕಾರಣವಾಗಿದೆ. ಹೆಚ್.ಐ.ವಿ ಏಡ್ಸ್ ವೈರಾಣುಗಳಿಂದ ಹರಡುವ ಸಾಂಕ್ರಾಮಿಕ ರೋಗವಲ್ಲ. ಆದ್ದರಿಂದ ಹೆಚ್.ಐ.ವಿ ಪೀಡಿತರ ಬಗ್ಗೆ ಜನಸಾಮಾನ್ಯರು ಭಯಪಡದೇ ಎಲ್ಲರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟಣದ ಜೆಎಂಎಫ್ ಸಿ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜಪ್ಪ ತುಳಸಪ್ಪನಾಯಕ ಮನವಿ ಮಾಡಿದರು ..

ಅವರು ಇಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಹೆಚ್.ಐ.ವಿ ಏಡ್ಸ್ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು..

ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರ ಮಹಾಪ್ರಭುವಿನಂತೆ ಏಕಪತ್ನಿ ವ್ರತಸ್ಥರಾಗಿ ಸಾರ್ಥಕ ಜೀವನ ನಡೆಸಿದರೆ ಹೆಚ್.ಐ.ವಿ ಸೇರಿದಂತೆ ಯಾವುದೇ ರೋಗಗಳು ನಮ್ಮ ಹತ್ತಿರ ಸುಳಿಯುವುದಿಲ್ಲ.ಅಸುರಕ್ಷಿತ ಲೈಂಗಿಕ ಚಟುವಟಿಕೆಗಳನ್ನು ನಡೆಸುವುದೇ ಏಡ್ಸ್ ರೋಗವು ಬರಲು ಮುಖ್ಯ ಕಾರಣವಾಗಿದೆ ಎಂದು ತಿಳಿಸಿದ ನ್ಯಾಯಾಧೀಶರು ಹೆಚ್.ಐ.ವಿ ಏಡ್ಸ್ ಖಾಯಿಲೆಯ ಬಗ್ಗೆ ಜನಸಾಮಾನ್ಯರು ಜಾಗೃತರಾಗಿರಬೇಕು ಎಂದು ನ್ಯಾಯಾಧೀಶರಾದ ಬಸವರಾಜಪ್ಪ ಮನವಿ ಮಾಡಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರವಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಇಂದ್ರಕುಮಾರ್, ಕಾರ್ಯದರ್ಶಿ ಡಿ.ಆರ್.ಮೋಹನ್, ಜಂಟಿ ಕಾರ್ಯದರ್ಶಿ ಎಂ.ಎನ್.ಅನ್ವೇಶ್, ಖಜಾಂಚಿ ಬಿ.ಕೆ.ಯೋಗೇಶ್, ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೌನ್ಸಿಲರ್ ಸತೀಶ್, ಹಿರಿಯ ಆರೋಗ್ಯ ಪರೀಕ್ಷಕರಾದ ಶೀಳನೆರೆ ಸತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: