May 12, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಎಂಜಿನಿಯರಿOಗ್ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

ಕೆ.ಆರ್.ಪೇಟೆ: ಯುವಜನರು ತಾಂತ್ರಿಕ ಕೌಶಲ್ಯವನ್ನು ಮೈಗೂಡಿಸಿಕೊಂಡು ಭವಿಷ್ಯದ ಭಾರತದ ಶ್ರೇಷ್ಠ ಎಂಜಿನಿಯರುಗಳಾಗಿ ಹೊರಹೊಮ್ಮಬೇಕು. ವಿಜ್ಞಾನದ ಆವಿಷ್ಕಾರಗಳ ಫಲವನ್ನು ಸದ್ಭಳಕೆ ಮಾಡಿಕೊಂಡು ಸದೃಢವಾದ ಸಶಕ್ತ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪಟ್ಟಣದ ಸರ್ಕಾರಿ ಎಂಜಿನಿಯರಿOಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಆರ್.ದಿನೇಶ್ ಕರೆ ನೀಡಿದರು.

ಅವರು ಇಂದು ಪಟ್ಟಣದ ಸರ್ಕಾರಿ ಎಂಜಿನಿಯರಿOಗ್ ಕಾಲೇಜಿನ ಪ್ರಥಮ ವರ್ಷದ ಎಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಭಾರತ ದೇಶದ ಯುವ ಎಂಜಿನಿಯರುಗಳಿಗೆ ವಿಶ್ವದಾಧ್ಯಂತ ಬಹಳ ಬೇಡಿಕೆಯಿದೆ. ಭವಿಷ್ಯದ ಎಂಜಿನಿಯರುಗಳಾಗಲು ನಿರ್ಧರಿಸಿ ತಾಂತ್ರಿಕ ಶಿಕ್ಷಣದಲ್ಲಿ ಪದವಿ ವ್ಯಾಸಂಗ ಮಾಡಲು ಧೃಡವಾದ ಸಂಕಲ್ಪ ಮಾಡಿರುವ ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೇನೆ ಎಂಬ ಛಲವನ್ನು ಮೈಗೂಡಿಸಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡಿ ಎಂಜಿನಿಯರುಗಳಿಗೆ ಮಾದರಿಯಾಗಿರುವ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ
ಅವರAತೆ ಶ್ರೇಷ್ಠ ಎಂಜಿನಿಯರುಗಳಾಗಿ ಹೊರಹೊಮ್ಮಲು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದ ಪ್ರಾಂಶುಪಾಲ ದಿನೇಶ್ ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿoಗ್ ಕಾಲೇಜು ತಾಲೂಕು ಕೇಂದ್ರದಲ್ಲಿದ್ದರೂ ಅತ್ಯುತ್ತಮವಾದ ಬೋಧಕ ವರ್ಗ ಹಾಗೂ ಸಿಬ್ಬಂಧಿಗಳನ್ನು ಹೊಂದಿದ್ದು ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣವನ್ನು ಹೊಂದಿದೆಯಲ್ಲದೇ ನಗರ
ಪ್ರದೇಶದ ಎಂಜಿನಿಯರಿAಗ್ ಕಾಲೇಜುಗಳಲ್ಲಿರುವಂತೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಾಡಿನ
ಪ್ರತಿಷ್ಠಿತ ಕಂಪನಿಗಳು ಸಂದರ್ಶನ ನಡೆಸಿ ತಮ್ಮ ಕಂಪನಿಗಳಿಗೆ ಬೇಕಾದ ಅರ್ಹ ಪ್ರತಿಭೆಗಳನ್ನು ಪ್ಲೇಸ್ಮೆಂಟ್ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿವೆ. ನಮ್ಮ ಕಾಲೇಜು ಫಲಿತಾಂಶದ ವಿಚಾರದಲ್ಲಿಯೂ ಮೊದಲನೇ ಸ್ಥಾನದಲ್ಲಿದ್ದು ಎಲೆಕ್ಟ್ರಾನಿಕ್ಸ್ ಕಮ್ಯನಿಕೇಷನ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಬರುತ್ತಿದೆ. ಶಿಸ್ತು ಮತ್ತು ವಿದ್ಯಾರ್ಥಿಗಳ ವಿನಯವಂತಿಕೆಗೆ ಕಾಲೇಜಿನಲ್ಲಿ ಮೊದಲ ಆಧ್ಯತೆ ನೀಡಲಾಗುತ್ತಿದ್ದು
ವಿದ್ಯಾರ್ಥಿಗಳು ರ‍್ಯಾಗಿಂಗ್ ಭಯವಿಲ್ಲದೇ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂತೋಷದಿAದ ಶಿಕ್ಷಣ ಪಡೆಯಬಹುದಾಗಿದೆ ಎಂದು ವಿವರಿಸಿದರು.

ಕಾಲೇಜಿನ ಸಿವಿಲ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಎನ್.ಎಸ್.ಸತೀಶ್ ಮಾತನಾಡಿ ಕೆ.ಆರ್.ಪೇಟೆ
ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಅತ್ಯುತ್ತಮವಾದ ಸಾಧನೆಯನ್ನು ಮಾಡುವ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜಾಗಿದೆ. ಕಾಲೇಜು ಆರಂಭವಾಗಿ ಅವಧಿ ಕಡಿಮೆಯಾಗಿದ್ದರೂ ಹೆಚ್ಚಿನ ಸಾಧನೆ ಮಾಡಿದೆ. ಪೋಷಕರು ಪೈಪೋಟಿಯ ಮೇರೆಗೆ ನಮ್ಮ ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯಲು ಮುಂದಾಗಿರುವುದು ನಮ್ಮ ಕಾಲೇಜಿನ ಘನತೆಯನ್ನು ಹೆಚ್ಚಿಸಿದೆ ಎಂದು ಅಭಿಮಾನದಿಂದ ತಿಳಿಸಿದ ಸತೀಶ್ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಇಂದಿನ ತಂತ್ರಜ್ಞಾನ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಸಂಶೋಧನೆಯ ಫಲವನ್ನು ಹೆಚ್ಚಿನ ಸಾಧನೆ ಮಾಡಲು ಬಳಕೆ ಮಾಡಿಕೊಂಡು ಭವಿಷ್ಯದ ವಿಜ್ಞಾನಿಗಳಾಗಿ, ಶ್ರೇಷ್ಠ ಎಂಜಿನಿಯರ್‌ಗಳಾಗಿ ರೂಪುಗೊಳ್ಳಬೇಕು. ಮೊಬೈಲ್ ಫೋನಿನಲ್ಲಿರುವ ವಿವಿಧ ಆಫ್‌ಗಳ ಮೂಲಕ ತಾಂತ್ರಿಕ ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸಿಕೊಂಡು ಉತ್ತಮವಾದ ಸಾಧನೆ ಮಾಡಬೇಕು.
ಕಳೆದುಹೋದ ಸಮಯ ಮತ್ತೆ ಸಿಗದು ಎಂಬ ಸತ್ಯವನ್ನು ಅರಿತು ಕಷ್ಟಪಟ್ಟು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ಟಿ.ಲೋಕೇಶ್, ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಹರೀಶ್, ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದಮುಖ್ಯಸ್ಥರಾದ ಪ್ರೊ.ಕೆ.ರವೀಂದ್ರ, ಪ್ರಾಧ್ಯಾಪಕ ರುದ್ರೇಶ್, ಪ್ಲೇಸ್ಮೆಂಟ್ ಅಧಿಕಾರಿ ಡಾ. ನಾಗಭೂಷಣ್ ಮತ್ತು ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: