April 28, 2024

Bhavana Tv

Its Your Channel

ಶ್ರೀ ಕೋಟೆ ಬೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ೮ನೇ ವರ್ಷದ ವಾರ್ಷಿಕ ಮಹಾಸಭೆ

ಕೆ.ಆರ್.ಪೇಟೆ: ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಬ್ಯಾಂಕ್ ಗಳಿಗೆ ಗ್ರಾಹಕರೇ ದೇವರುಗಳು. ಬ್ಯಾಂಕ್ ನಿಂದ ಪಡೆದ ಸಾಲದ ಹಣವನ್ನು ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಹಿಂದಿರುಗಿಸಲು ಹಿರಿಯ ಸಹಕಾರಿ ಬಂಧುಗಳಿಗೆ ಕೆ.ಮಂಜುಳಾ ಚನ್ನಕೇಶವ ಕರೆ ನೀಡಿದರು ..

ಶ್ರೀ ಕೋಟೆ ಬೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ೮ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಕೆ.ಮಂಜುಳಾ ಚನ್ನಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು..
ಗ್ರಾಹಕರು ಸಂಘದಿAದ ಪಡೆದ ಸಾಲಸೌಲಭ್ಯದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಮಂಜುಳಾ ಸಂಘವು ಆರ್ಥಿಕವಾಗಿ ಲಾಭಗಳಿಸುತ್ತಿದ್ದು ಪ್ರಗತಿಯ ದಿಕ್ಕಿನತ್ತ ದಾಪುಗಾಲು ಹಾಕುತ್ತಿದೆ. ಸಂಘದ ಬ್ಯಾಂಕಿAಗ್ ಶಾಖೆಯ ಮೂಲಕ ಪಿಗ್ಮಿ ಹಣವನ್ನು ಸಂಗ್ರಹಿಸಿ ಷೇರುದಾರರಿಗೆ ಹಾಗೂ ವ್ಯಾಪಾರಸ್ಥರಿಗೆ ಸಾಲಸೌಲಭ್ಯವನ್ನು ನೀಡಲಾಗುತ್ತಿದೆಯಲ್ಲದೇ ಚಿನ್ನದ ಒಡವೆಗಳ ಮೇಲಿನ ಸಾಲವನ್ನು ಸಂಸ್ಥೆಯ ವತಿಯಿಂದ ನೀಡುತ್ತಿರುವುದರಿಂದ ಬ್ಯಾಂಕಿAಗ್ ಶಾಖೆಯು ಲಾಭವನ್ನುಗಳಿಸಿ ಮುನ್ನಡೆಯುತ್ತಿದೆ. ಈ ಸ್ಟಾಂಪಿAಗ್ ವಿಭಾಗ, ರೈತರಿಗೆ ಭೂಮಿಯ ಪಹಣಿ ನೀಡುವ ಕೆಲಸವೂ ಉತ್ತಮವಾಗಿ ನಡೆಯುತ್ತಿದೆ. ಸಂಘದ ಶೇರುದಾರರು ತಮ್ಮ ದೈನಂದಿನ ಹಣಕಾಸು ವ್ಯವಹಾರ ಸೇರಿದಂತೆ ನಿಶ್ಚಿತ ಠೇವಣಿಯ ರೂಪದಲ್ಲಿ ಬ್ಯಾಂಕಿoಗ್ ಶಾಖೆಯಲ್ಲಿ ಫಿಕ್ಸಡ್ ಡೇಪೋಸಿಟ್ ಇಡುವ ಮೂಲಕ ಸಂಸ್ಥೆಯು ಮುನ್ನಡೆಯಲು ಸಹಕಾರ ನೀಡಬೇಕು ಎಂದು ಮಂಜುಳಾ ಚನ್ನಕೇಶವ ಕೈಮುಗಿದು ಮನವಿ ಮಾಡಿದರು..
ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೆ.ಎಸ್.ರಾಮೇಗೌಡ, ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಹೊಸಹೊಳಲು ಕೃಪಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೇಗೌಡ, ನಿರ್ದೇಶಕಿ ಮಮತಾ, ಶಶಿಕಲಾ, ಉಪಾಧ್ಯಕ್ಷ ಡಿ.ಬೋರೇಗೌಡ ಸಭೆಯಲ್ಲಿ ಮಾತನಾಡಿದರು. ತಾಂತ್ರಿಕ ಸಲಹೆಗಾರ ತಿಮ್ಮಯ್ಯ, ಕಾನೂನು ಸಲಹೆಗಾರ ಎನ್.ಆರ್.ರವಿಶಂಕರ್, ನೋಟರಿಗಳಾದ ಎಸ್.ಸಿ.ವಿಜಯಕುಮಾರ್, ಅನುವಿನಕಟ್ಟೆ ಶಶಿಧರ್, ಹರಳಹಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಹರೀಶ್, ಸಹಕಾರ ಅಭಿವೃದ್ಧಿ ಅಧಿಕಾರಿ ನಾಗಭೂಷಣ್, ಗ್ರಾಮಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ಸಜ್ಜನ್ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಶ್ರೀ ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ಸಿಇಓ ಎಂ.ಎನ್.ಅಶ್ವಿನಿ ಸ್ವಾಗತಿಸಿದರು, ಕ್ಯಾಶಿಯರ್ ಎಂ.ಆರ್.ಪವಿತ್ರ ವಂದಿಸಿದರು.

ವರದಿ.ಡಾ.ಕೆ.ಆರ್.ನೀಲಕoಠ .
ಕೃಷ್ಣರಾಜಪೇಟೆ . ಮಂಡ್ಯ

error: