May 12, 2024

Bhavana Tv

Its Your Channel

ಕೃಷ್ಣರಾಜಪೇಟೆ ಜಯಕರ್ನಾಟಕ ಸಂಘಟನೆಯಿOದ 66ನೇ ಕನ್ನಡ ರಾಜ್ಯೋತ್ಸವ

ಕೃಷ್ಣರಾಜಪೇಟೆ: ರಾಜ್ಯದಲ್ಲಿನ ನೊಂದಜನರು ಹಾಗೂ ತುಳಿತಕ್ಕೊಳಗಾದ ಅಶಕ್ತ ಜನರಿಗೆ ಸೇವೆ ಸಲ್ಲಿಸುವುದೇ ಜಯ ಕರ್ನಾಟಕದ ಸಂಘಟನೆಯ ಮುಖ್ಯ ಕಾಯಕವಾಗಿದೆ ಎಂದು ರಾಜ್ಯ ಜಯಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ. ರಾಮಚಂದ್ರಯ್ಯ ಅಭಿಮಾನದಿಂದ ಹೇಳಿದರು…

ಕೃಷ್ಣರಾಜಪೇಟೆ ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆ.ಆರ್.ಪೇಟೆ ಪುರಸಭೆಯ ಕಾರ್ಯಾಲಯದ ಪಕ್ಕದ ಆವರಣದಲ್ಲಿ ಆಯೋಜಿಸಿ ತಾಲೂಕಿನ ಹೆಸರಾಂತ ಸೈ ಡ್ಯಾನ್ಸ್ ಸ್ಕೂಲ್ ಮಕ್ಕಳು. ಸಾನ್ವಿ ಡ್ಯಾನ್ಸ್ ಸ್ಕೂಲ್ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯಕಾರ್ಯಕ್ರಮದ ಮುಖಾಂತರ ಚಾಲನೆ ನೀಡಿ. ಕೊರೋನಾ ವಾರಿಯರ್ಸ್ ಹಾಗೂ ಗಣ್ಯರಿಂದ ಮತ್ತು ರಾಜ್ಯ ಹಾಗೂ ತಾಲೂಕು ಮಟ್ಟದ ಜಯಕರ್ನಾಟಕ ಕುಟುಂಬದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಸುಂದರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಇತ್ತೀಚೆಗೆ ಅಗಲಿದ ದೇಶದ ಸೇನಾ ಮುಖ್ಯಸ್ಥ ಬಿಪಿನ್ ರಾವತ್. ಕನ್ನಡ ಚಲನಚಿತ್ರ ಯುವ ನಟ ಪುನೀತ್ ರಾಜಕುಮಾರ್. ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ರವರಿಗೆ ಮೌನಾಚರಣೆ ಆಚರಿಸುವ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು

ಜಯಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ ಹಲವಾರು ಸಂಘಟನೆ ಹೋರಾಟ ಮೂಲಕ ಹೊರಹೊಮ್ಮಿದರೆ ನಮ್ಮ ಜಯಕರ್ನಾಟಕ ಸಂಘಟನೆ ಹೋರಾಟವನ್ನು ಮೈಗೂಡಿಸಿಕೊಂಡು ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಆಶಯದಂತೆ ಸೇವಾ ಮನೋಭಾವದಿಂದ ಅಶಕ್ತ ಜನರಿಗೆ ಸೇವೆಸಲ್ಲಿಸುತ್ತಾ ನೊಂದ ಜನರಿಗೆ ಧ್ವನಿಯಾಗುತ್ತ ಬಡಜನರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ನಿಂದು ಯೋಜನೆಗಳನ್ನು ಸಮರ್ಪಕವಾಗಿ ಸಿಗುವಂತೆ ಕಾರ್ಯನಿರ್ವಹಿಸುತ್ತ ಬೆಳೆಯುವ ಸಿರಿ ಮೊಳಕೆ ಎಂಬAತೆ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಜಯಕರ್ನಾಟಕ ಕುಟುಂಬ ಸದೃಢವಾಗುತ್ತದೆ ನಾಡು-ನುಡಿ ಜಲಕ್ಕಾಗಿ ಹೋರಾಟದ ಹಾದಿಗಳು ಹಲವು ಅದರಂತೆ ಕೆ ಆರ್ ಪೇಟೆ ನನ್ನ ಕುಟುಂಬ ಇಂಥ ಸುಂದರ ಕಾರ್ಯಕ್ರಮ ರೂಪಿಸುವ ಮುಖಾಂತರ ನಾಡ ದೇವತೆಗೆ ಅರ್ಪಿಸಿರುವುದು ಸಂತೋಷದ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.

ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಡಾ.ಯೋಗಣ್ಣ ಮಾತನಾಡಿ ಕೊಡಗು ಜಿಲ್ಲೆ ಪ್ರವಾಹದಿಂದ ಮುಳುಗಿರುವ ಸಮಯದಲ್ಲಿ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಕ್ಕಾಗಿ ಸಂಘಟನೆಯು ರಾಜ್ಯಾದ್ಯಂತ ಸಹಾಯ ಹಸ್ತ ಆರಂಭಿಸಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಹಾಯ ಹಸ್ತ ನೀಡಿದ್ದು ಕೃಷ್ಣರಾಜಪೇಟೆ ತಾಲೂಕು, ನನ್ನ ಜಯಕರ್ನಾಟಕ ಕುಟುಂಬ ಎಂದರೆ ತಪ್ಪಾಗಲಾರದು ಅದರಂತೆ ದಿನದಿಂದ ದಿನಕ್ಕೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ ಬಲ ವಾಗುತ್ತಿರುವ ನಡುವೆ ಇಂತಹ ಸುಂದರ ಕಾರ್ಯಕ್ರಮವನ್ನು ರೂಪಿಸುವ ಮುಖಾಂತರ ನಾಡ ದೇವತೆಗೆ ಗೌರವಿಸಿ ಕೊರೋನಾ ವಾರಿಯರ್ಸ್ ಗಳಿಗೆ ಪೌರಕಾರ್ಮಿಕರಿಗೆ ಗೌರವಿಸಿರುವುದು ಇರುವುದು ಶ್ಲಾಘನೀಯ ಎಂದು ತಿಳಿಸಿದರು.

ಕೊರೊನಾ ವಾರಿಯರ್ಸ್ ಗಳಾಗಿ ಜೀವಹಂಗು ತೊರೆದು ಕರ್ತವ್ಯ ನಿರ್ವಹಿಸಿದ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ರವಿ, ಡಾ: ಶ್ರೀಕಾಂತ್ ಕೆ ಆರ್ ಪೇಟೆ. ಡಾ ದಿವಾಕರ್, ಡಾ: ಹರ್ಷ ಸರ್ಕಾರಿ ಆಸ್ಪತ್ರೆ ಸಿಂದಘಟ್ಟ, ಡಾ: ಅರವಿಂದ್. ಪೌರಕಾರ್ಮಿಕರಿಗೆ. ಕೋವಿಡ್ ನಲ್ಲಿ ಉಚಿತ ಶವ ಸಂಸ್ಕಾರ ನೆರವೇರಿಸಿದವರಿಗೆ. ದೇಶ ಕಾಯುವ ಯೋಧರಿಗೆ.ನರ್ಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಸಾಧಿಸಿರುವ ಗಣ್ಯರಿಗೆ ಗೌರವಿಸುವ ಮೂಲಕ ಕಾರ್ಯಕ್ರಮದ ಅರ್ಥಪೂರ್ಣ ಮೆರಗು ತುಂಬಲಾಯಿತು..

ಈ ಸಂದರ್ಭದಲ್ಲಿ ರಾಜ್ಯ ಕರ್ನಾಟಕ ಸಂಘಟನೆ ಉಪಾಧ್ಯಕ್ಷ ಮುನಿಸ್ವಾಮಿ. ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ಬಿ ನಾಗೇಂದ್ರ ಕುಮಾರ್. ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕೆಬಿಸಿ ಮಂಜುನಾಥ್. ಪುರಸಭಾ ಸದಸ್ಯ ಸಭಾ ಸದಸ್ಯ ಪ್ರೇಮ್ ಕುಮಾರ್.ವಕೀಲ ಶಂಕರ್.ಹಿರಿಯ ಪತ್ರಕರ್ತರಾದ ಕೆ.ಆರ್.ನೀಲಕಂಠ. ಬಳ್ಳೇಕೆರೆ ಮಂಜುನಾಥ್. ಶ್ರೀನಿವಾಸ್ ಸಜ್ಜನ್. ಹರಿಚರಣ ತಿಲಕ್. ಸಂಘಟನೆಯ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ವಿ ಲೋಕೇಶ್ . ತಾಲೂಕು ಕಾರ್ಯಾಧ್ಯಕ್ಷ ಎಸ್ ರವಿ.ತಾಲೂಕು ಯೂತ್ ಅಧ್ಯಕ್ಷ ಕೆ ಎಲ್ ಮಹೇಶ್. ಪ್ರಭುಸ್ವಾಮಿ ಪ್ರಧಾನ ಕಾರ್ಯದರ್ಶಿ. ಯುವರಾಜ್ ಉಪಾಧ್ಯಕ್ಷರು. ಕುಪ್ಪಳ್ಳಿ ಮನು ಉಪಾಧ್ಯಕ್ಷರು. ಯೋಗೇಶ್ ನಗರ ಅಧ್ಯಕ್ಷ. ಅನಂತ್ ಕುಮಾರ್ ಉಪಾಧ್ಯಕ್ಷ. ಪದಾಧಿಕಾರಿಗಳಾದ ನವೀನ್. ಸೋಮಶೇಖರ್. ನಯಜ್. ವಸಂತ. ಚಂದ್ರಣ್ಣ. ಮೀನಾಕ್ಷಿ. ರಮೇಶ್. ಮಧು. ಸರಸ್ವತಿ. ಜಯಲಕ್ಷ್ಮಮ್ಮ. ಭಾಗ್ಯ. ನಾಗಲಕ್ಷ್ಮಿ .ವಿಜಯ್ . ಸೇರಿದಂತೆ ಹೋಬಳಿ ಘಟಕ ಪದಾಧಿಕಾರಿಗಳು. ಗ್ರಾಮ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು…
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: