April 26, 2024

Bhavana Tv

Its Your Channel

ಭೈರವೈಕ್ಯ ಚುಂಚಶ್ರೀಗಳ 9ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಾಲೆಯ ಆವರಣದಲ್ಲಿ ಶ್ರಧ್ಧಾಭಕ್ತಿಯಿಂದ ನಡೆದ ಭೈರವೈಕ್ಯ ಚುಂಚಶ್ರೀಗಳ ೯ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ.. ಚುಂಚಶ್ರೀ ಗಳ ಸೇವೆಯನ್ನು ಸ್ಮರಿಸಿ ಗುಣಗಾನ ಮಾಡಿದ ಕೃಷ್ಣರಾಜಪೇಟೆ ತಹಶೀಲ್ದಾರ್ ರೂಪ ಶ್ರೀ ಗಳ ಪುತ್ಥಳಿಗೆ ಹಾಲು, ಮೊಸರು, ಅರಿಶಿನ, ಕುಂಕುಮ, ಶ್ರೀಗಂಧ, ಜೇನುತುಪ್ಪ,ಹಸುವಿನ ತುಪ್ಪ ಸೇರಿದಂತೆ ವಿವಿಧ ಬಗೆಯ ಪುಷ್ಪಗಳಿಂದ ಪುಷ್ಪಾಭಿಷೇಕ..

ಭೈರವೈಕ್ಯ ಪದ್ಮಭೂಷಣ ಚುಂಚಶ್ರೀಗಳ ೯ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹೇಮಗಿರಿ ಶಾಖಾಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಶ್ರಧ್ಧಾಭಕ್ತಿಯಿಂದ ನಡೆಯಿತು..

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಹಶೀಲ್ದಾರ್ ಎಂ.ವಿ.ರೂಪ ಚುಂಚಶ್ರೀಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಹೋಮಹವನ ಹಾಗೂ ಅಭಿಷೇಕ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ
ತ್ರಿವಿಧ ದಾಸೋಹಿಗಳಾದ ಅಕ್ಷರಸಂತ, ಪದ್ಮಭೂಷಣ, ಶ್ರೀ.ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳು ಬರಡಾಗಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಶ್ರೀ ಕ್ಷೇತ್ರವನ್ನು ಸುವರ್ಣ ಗಿರಿಯನ್ನಾಗಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಲಕ್ಷಾಂತರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ನೆರವಾಗಿದ್ದಾರೆ. ಭಾರತ ದೇಶದ ಉದ್ದಗಲಕ್ಕೂ ಆದಿಚುಂಚನಗಿರಿ ಮಠದ ಶಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾಮಾಜಿಕ ಕ್ರಾಂತಿ ಮಾಡಿದ್ದಲ್ಲದೇ ವಿಶ್ವಮಟ್ಟದಲ್ಲಿ ಶ್ರೀ ಮಠದ ಕೀರ್ತಿಯನ್ನು ಬೆಳಗಿದ್ದಾರೆ. ಕೋಟ್ಯಾಂತರ ಭಕ್ತರನ್ನು ಹೊಂದಿರುವ ಶ್ರೀ ಬಾಲಗಂಗಾಧರ ನಾಥ ಶ್ರೀಗಳ ಆಶಯಗಳು ಹಾಗೂ ಜೀವನದ ಸಂದೇಶಗಳನ್ನು ಇಂದಿನ ಯುವಜನರು ಪಾಲಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಹಶೀಲ್ದಾರ್ ರೂಪ ಕರೆ ನೀಡಿದರು.

ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಪುಣ್ಯಸ್ಮರಣೆ ಕಾರ್ಯದಲ್ಲಿ ಭಾಗವಹಿಸಿ ಬಾಲಗಂಗಾಧರನಾಥ ಶ್ರೀಗಳ ಆಶಯಗಳು ಹಾಗೂ ಸಂದೇಶಗಳ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಬಡಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಶ್ರೀ ಮಠದ ಕೊಡುಗೆ ಅಪಾರವಾಗಿದೆ ಎಂದು ಚಂದ್ರಶೇಖರ್ ಗುಣಗಾನ ಮಾಡಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಯ ಕೆ.ಆರ್.ಪೇಟೆ ಶಾಖೆಯ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಿಪಂ ಮಾಜಿಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಸಮಾಜಸೇವಕ ಬಿ.ನಂಜಪ್ಪ, ನೋಟರಿಗಳಾದ ಎಸ್.ಸಿ.ವಿಜಯಕುಮಾರ್, ಎನ್.ಆರ್.ರವಿಶಂಕರ್, ವಕೀಲ ಚಟ್ಟಂಗೆರೆ ಬಿ.ನಾಗೇಶ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ತಾಲೂಕು ಕಸಾಪ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ರಾಜಾಸ್ಥಾನ್ ಸೇವಾಸಮಿತಿಯ ಸಂಚಾಲಕ ರಮೇಶಚೌಧರಿ, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಅಗ್ರಹಾರಬಾಚಹಳ್ಳಿ ಗ್ರಾ.ಪಂ ಸದಸ್ಯ ಆರ್.ಶ್ರೀನಿವಾಸ್, ಯುವಮುಖಂಡ ಟಿ.ವೈ.ಆನಂದ, ಮಂಡ್ಯ ಜಿಲ್ಲಾ ಬಿಜೆಪಿ ನೇಕಾರಪ್ರಕೋಷ್ಠದ ಅಧ್ಯಕ್ಷ ಬಿಗ್ ಬಾಸ್ ಮೋಹನ್, ಉಧ್ಯಮಿ ಬಿ.ರಾಜಶೇಖರ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಆರ್.ಜಗಧೀಶ್, ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್ ಮುಖ್ಯಸ್ಥೆ ಪವಿತ್ರ, ಕೃಷ್ಣರಾಜಪೇಟೆ ಬಿಜಿಎಸ್ ಸ್ಕೂಲ್ ಮುಖ್ಯಸ್ಥೆ ಅರ್ಪಿತಾ, ಪ್ರಾಂಶುಪಾಲರಾದ ಪ್ರಸಾದೇಗೌಡ, ಪತ್ರಕರ್ತ ಸೈಯ್ಯದ್ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು. ವೇದಬ್ರಹ್ಮ ಶ್ರೀ ರಾಘವೇಂದ್ರ ಆಚಾರ್ಯ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ

error: