May 19, 2024

Bhavana Tv

Its Your Channel

ಸಿದ್ಧಗಂಗೆಯ ಸಿದ್ಧಪುರುಷ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಗಳ 115 ನೇ ವರ್ಷದ ಜನ್ಮದಿನ ಆಚರಣೆ

ಕೃಷ್ಣರಾಜಪೇಟೆ :- ನಡೆದಾಡುವ ದೇವರು, ಸಿದ್ಧಗಂಗೆಯ ಸಿದ್ಧಪುರುಷ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಗಳ 115 ನೇ ವರ್ಷದ ಜನ್ಮದಿನಾಚರಣೆಯ ಅರ್ಥಪೂರ್ಣ ಆಚರಣೆ..ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ..ಮುಗಿಲು ಮುಟ್ಟಿದ ಸಂಭ್ರಮ ..

ನಡೆದಾಡುವ ದೇವರು, ಸಿದ್ಧಗಂಗೆಯ ಸಿದ್ಧಪುರುಷ ಪದ್ಮಭೂಷಣ ಡಾ.ಶಿವಕುಮಾರಸ್ವಾಮೀಜಿಯವರ 115ನೇ ಜನ್ಮ ದಿನಾಚರಣೆಯ ಅಂಗವಾಗಿ ಕೃಷ್ಣರಾಜಪೇಟೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಶ್ರೀ ಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪಟ್ಟಣದ ಮುಖ್ಯರಸ್ತೆಯಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಿ ಶ್ರೀಗಳಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿ ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ಅವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತದ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು…

ತ್ರಿವಿಧ ದಾಸೋಹಿಗಳಾಗಿ ಶ್ರೀಮಠದ ಪೀಠಾಧಿಪತಿಗಳಾಗಿ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಅಕ್ಷರ, ವಸತಿ ಹಾಗೂ ಜ್ಞಾನವನ್ನು ನೀಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಅಪೂರ್ವವಾದ ಕೊಡುಗೆಯನ್ನು ನೀಡಿರುವ ಶ್ರೀ. ಶಿವಕುಮಾರಸ್ವಾಮೀಜಿಗಳು 88 ವರ್ಷಗಳ ಕಾಲ ಶ್ರೀ ಮಠವನ್ನು ಮುನ್ನಡೆಸಿದ್ದಾರೆ.
ಇಂದಿಗೂ ಜಾತ್ಯಾತೀತವಾಗಿ ಕಾಯಕಯೋಗಿ ಬಸವಣ್ಣನವರ ಆಶಯದಂತೆ ಶ್ರೀ ಮಠವು ಮುನ್ನಡೆಯುತ್ತಿದೆ. ವಾರ್ಷಿಕ 10 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಸತಿಯ ಸಮೇತವಾಗಿ ಶಿಕ್ಷಣ ಪಡೆಯುತ್ತಿರುವುದು ಶ್ರೀ ಮಠದ ಹೆಗ್ಗಳಿಕೆಯಾಗಿದೆ. ನಡೆದಾಡುವ ದೇವರಂತೆ ಕಂಗೊಳಿಸಿ ಸಮಾಜವನ್ನು ಮುನ್ನಡೆಸಿದ ಶ್ರೀಗಳಿಗೆ ಮರಣೋತ್ತರವಾಗಿ ಭಾರತ ಸರ್ಕಾರವು ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಆಗ್ರಹಿಸಿ ಕಾಪನಹಳ್ಳಿ ಗವಿಮಠದ ಶ್ರೀಗಳಾದ ಚನ್ನವೀರಯ್ಯಸ್ವಾಮೀಜಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸರಗಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿ ತಾಲ್ಲೂಕು ಆಡಳಿತಕ್ಕೆ ಉಪತಹಶೀಲ್ದಾರ್ ಹಿರಿಯಣ್ಣ ಅವರ ಮೂಲಕ ಸಲ್ಲಿಸಲಾಯಿತು.

ಕೃಷ್ಣರಾಜಪೇಟೆ ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಕುಮಾರ್, ನಗರ ಘಟಕದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ವೀರಶೈವ ಸಮಾಜದ ಮುಖಂಡರಾದ ತೋಟಪ್ಪಶೆಟ್ಟಿ, ಮಾಧವಪ್ರಸಾದ್, ಸೋಮನಾಥಪುರ ಮಾದೇಶ್, ಗೋವಿಂದನಹಳ್ಳಿ ಪ್ರಕಾಶ್, ವೀರಪ್ಪ, ಜಯನಂದಿನಿ, ರಾಣಿ, ಕುಮಾರಿ, ಡಿಂಕಾ ಮಹೇಶ್, ಶಾಮಿಯಾನ ಪರ್ವತಣ್ಣ, ನಂಜುAಡಪ್ಪ, ನಾಗೇಶಬಾಬು, ಚೋಕನಹಳ್ಳಿ ಪ್ರಕಾಶ್, ಯೋಗಗುರು ಅಲ್ಲಮಪ್ರಭು, ಗಂಜಿಗೆರೆ ಶಿವಣ್ಣ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: