May 2, 2024

Bhavana Tv

Its Your Channel

80 ಲಕ್ಷರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೋಡಾಲರಾಯಸ್ವಾಮಿ ದೇವಾಲಯದ ಲೋಕಾರ್ಪಣೆ

ಕೃಷ್ಣರಾಜಪೇಟೆ :-ದೇವಾಲಯಗಳು ಶರಣ ಶ್ರದ್ಧಾ ಕೇಂದ್ರಗಳಾಗಿದ್ದು ನಮ್ಮ ಸಂಸ್ಕೃತಿ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಎಂದು ವರಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು .

ಅವರು ಇಂದು ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿ 80 ಲಕ್ಷರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೋಡಾಲರಾಯಸ್ವಾಮಿ ದೇವಾಲಯದ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಗ್ರಾಮಸ್ಥರು ನೀಡಿದ ಆತ್ಮೀಯ ಅಭಿನಂದನಯನ್ನು ಸ್ವೀಕರಿಸಿ ಮಾತನಾಡಿದರು…

ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದು ಮಾನವರಾದ ನಮಗೆ ಅನಿವಾರ್ಯವಾಗಿದೆಯಲ್ಲದೇ ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯುತ್ತದೆ. ಆದಿಹಳ್ಳಿ ಗ್ರಾಮಸ್ಥರು ಶಿಥಿಲವಾಗಿದ್ದ ಶ್ರೀ ಕೋಡಾಲರಾಯಸ್ವಾಮಿ ದೇವಾಲಯವನ್ನು ಕಲ್ಲಿನಲ್ಲಿ ಪುನರ್ ನಿರ್ಮಾಣ ಮಾಡಿಸಿ ಜೀರ್ಣೋದ್ಧಾರ ಮಾಡಿ ಇಡೀ ನಾಗರಿಕ ಸಮಾಜವೇ ಮೆಚ್ಚಿ ಒಪ್ಪುವಂತಹ ಕೆಲಸ ಮಾಡಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ನಡೆದ ಬೀರೇದೇವರ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದೆ, ಗ್ರಾಮದಲ್ಲಿ ಮತ್ತೊಂದು ದೇವಾಲಯವನ್ನು ನಿರ್ಮಿಸುತ್ತಿರುವ ಬಗ್ಗೆ ವಿಚಾರ ತಿಳಿದು ನನಗೆ ಸಂತೋಷವಾಗಿದೆ. ನಮಗೆ ದೈನಂದಿನ ಬದುಕಿನ ಜೊತೆಗೆ ದೇವರು ಮತ್ತು ಧರ್ಮದ ವಿಚಾರವೂ ಕೂಡ ಅಷ್ಟೇ ಮುಖ್ಯವಾಗಿದೆ. ಈ ದಿಕ್ಕಿನಲ್ಲಿ ಆದಿಹಳ್ಳಿ ಗ್ರಾಮಸ್ಥರ ಶ್ರದ್ಧಾಭಕ್ತಿ ಮತ್ತು ಆಚಾರಗಳು ನಮಗೆಲ್ಲರಿಗೂ ಸ್ಪೂರ್ತಿಧಾಯಕವಾಗಿವೆ ಎಂದು ಯತೀಂದ್ರ ಹೇಳಿದರು..
ಮಾಜಿಶಾಸಕ ಬಿ.ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆದಿಹಳ್ಳಿ ಗ್ರಾಮಸ್ಥರ ದೈವಕಾರ್ಯ ಹಾಗೂ ದೇವಾಲಯಗಳ ಪುನರುಜ್ಜೀವನ ಸಾಹಸವನ್ನು ಶ್ಲಾಘಿಸಿದರು..

ಜಿ.ಪಂ ಮಾಜಿ ಸದಸ್ಯರಾದ ಬಿ.ನಾಗೇಂದ್ರಕುಮಾರ್, ಕೋಡಿಮಾರನಹಳ್ಳಿ ದೇವರಾಜು, ಸಮಾಜಸೇವಕರಾದ ವಿಜಯ್ ರಾಮ್, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಣೆ ಮೀನಾಕ್ಷಿ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಮುಖಂಡರಾದ ರಾಧಶ್ರೀ ನಾಗೇಶ್, ಲಕ್ಷ್ಮಮ್ಮ ಮಹದೇವಣ್ಣ, ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಉಧ್ಯಮಿ ಮುಂಬೈ ರಮೇಶ್, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷ ಗೊರವಿ ಮಂಜೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿಗಳನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ತುಪ್ಪದಮಡು ಗುರುಮಠದ ಮಂಜುನಾಥ್, ಅಪ್ಪನಹಳ್ಳಿಯ ನಂದೀಶಶಾಸ್ತ್ರೀ ಮತ್ತು ಬಿಲ್ಲೇನಹಳ್ಳಿಯ ಸಂಪತ್ತಾಚಾರ್ಯರು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು..

ಆದಿಹಳ್ಳಿ, ಸಾಲುಕೊಪ್ಪಲು, ಗೌಡನಕಟ್ಟೆ, ತಂದ್ರೆಕೊಪ್ಪಲು, ಸಿ.ಹಿಂದಲಹಳ್ಳಿ, ಕಂಚಿನಕೆರೆ, ಬಳ್ಳೂರು, ಲಕ್ಷ್ಮೀಪುರ, ಕೆರೆಕೋಡಿ ಗ್ರಾಮಗಳ ದೇವರ ಒಕ್ಕಲುಗಳ ಕುಟುಂಬ ವರ್ಗದವರು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಸಿ.ಮೀನಾಕ್ಷಿ ರಮೇಶ್ ಮತ್ತು ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಮಹದೇವೇಗೌಡ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: