May 2, 2024

Bhavana Tv

Its Your Channel

೫೦ಲಕ್ಷರೂ ವೆಚ್ಚದ ಶ್ರೀ ಬೀರಪ್ಪ, ಶ್ರೀ ಮಾಸ್ತಮ್ಮ, ಶ್ರೀ ಮಂಚಮ್ಮ ದೇವಾಲಯದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಅಟ್ಟುಪ್ಪೆ ಗ್ರಾಮದಲ್ಲಿ ೫೦ಲಕ್ಷರೂ ವೆಚ್ಚದ ಶ್ರೀ ಬೀರಪ್ಪ, ಶ್ರೀ ಮಾಸ್ತಮ್ಮ, ಶ್ರೀ ಮಂಚಮ್ಮ ದೇವಾಲಯದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಡಾ.ನಾರಾಯಣಗೌಡ. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ.ಮುಗಿಲು ಮುಟ್ಟಿದ ಸಂಭ್ರಮ .

ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಾಲುಮತ ಕುರುಬ ಸಮಾಜಕ್ಕೂ ನನಗೂ ಅವಿನಾಭಾವ ಸಂಬAಧವಿದೆ. ಕುರುಬ ಸಮಾಜದ ಆರಾಧ್ಯ ದೈವವೇ ನನ್ನ ಮನೆ ದೇವರುಗಳಾದ ಚಿಕ್ಕಯ್ಯ ದೊಡ್ಡಯ್ಯ ದೇವರಾಗಿವೆ. ನನಗೆ ಬುದ್ದಿ ಬಂದ ಮೇಲೆ ನಾನು ಹೋದ ಮೊದಲ ಜಾತ್ರೆ ಮರಡಿಲಿಂಗೇಶ್ವರ ಜಾತ್ರೆ, ನಾನು ಕಷ್ಟಪಟ್ಟು ಕೂಲಿ ಮಾಡಿ ಒಂದು ರೂಪಾಯಿ ತಗೊಂಡು ಜಾತ್ರೆಗೆ ಹೋಗಿದ್ದ ನಾನು ಹನ್ನೆರಡಾಣೆ ಖರ್ಚು ಮಾಡಿ ನಾಕಾಣೆ ವಾಪಸ್ ತಂದಿದ್ದೇನೆ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಸಚಿವರು ಸ್ಮರಿಸಿದರು.. ದೇವಾಲಯದ ನಿರ್ಮಾಣಕ್ಕೆ ತಮ್ಮ ಶಾಸಕರ ಅನುದಾನದಿಂದ ೧೦ಲಕ್ಷರೂ ನೀಡುವುದಾಗಿ ಘೋಷಿಸಿದ ಸಚಿವರು ಸಮುದಾಯದ ಮುಖಂಡರು ನೀಡಿದಂತೆ ೮೧ ಸಾವಿರ ರೂ ವರಿ ನೀಡುವುದಾಗಿ ಪ್ರಕಟಿಸಿದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಂಬೈನ ಉದ್ಯಮಿ ರಂಗಪ್ಪ ೩೬ ಸಾವಿರ ರೂಗಳನ್ನು ವರಿ ನೀಡುವುದಾಗಿ ಪ್ರಕಟಿಸಿದರು..

ನಾನು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಶಾಸಕನಾಗಲು ಹಾಲುಮತ ಕುರುಬ ಸಮಾಜದ ಕೊಡುಗೆಯು ಅಪಾರವಾಗಿದೆ. ಕೆ.ಆರ್.ಪೇಟೆ ಪಟ್ಟಣದಲ್ಲಿ ಕನಕದಾಸ ಸಮುದಾಯ ಭವನದ ನಿರ್ಮಾಣಕ್ಕೆ ವಿಶಾಲವಾದ ನಿವೇಶನ ಹಾಗೂ ಎರಡು ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ಕುರುಬ ಸಮಾಜದ ಆರಾಧ್ಯದೈವ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಎಂಟೂವರೆ ಕೋಟಿ ಅನುದಾನ ತಂದಿದ್ದೇನೆ. ಕಾಗಿನೆಲೆ ಗುರು ಪೀಠದ ಜಗದ್ಗುರುಗಳನ್ನು ಸಧ್ಯದಲ್ಲಿಯೇ ಕರೆದು ಭೂಮಿಪೂಜೆ ಮಾಡಿಸುತ್ತೇನೆ. ಈ ಪವಿತ್ರ ಕಾರ್ಯಕ್ಕೆ ಸಮುದಾಯದ ಬಂಧುಗಳು ಕೈ ಜೋಡಿಸಬೇಕು, ನಾನೂ ಕೂಡ ಸಮಾಜದ ಹಿತೈಷಿಯಾಗಿ ಕಲ್ಲುಮಣ್ಣು ಹೊರಲು ಬದ್ಧನಾಗಿದ್ದೇನೆ ಎಂದರು..

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಕುನ್ನೇಗೌಡ, ಉಧ್ಯಮಿ ಬೂಕನಕೆರೆ ರಾಜಶೇಖರ್, ತಾಲೂಕು ಪಂಚಾಯಿತಿ ಮಾಜಿಸದಸ್ಯ ಬಿ.ಆರ್.ಕುಮಾರ್, ಆಲಂಬಾಡಿಕಾವಲು ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಐಪನಹಳ್ಳಿ ಸಿದ್ದೇಗೌಡ, ಜಿಲ್ಲಾ ಹಾಫ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ತಾಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಸುಪುತ್ರ ಡಾ.ಹೆಚ್.ಡಿ.ರಮೇಶ್, ದೇವಾಲಯ ಟ್ರಸ್ಟ್ ಕಾರ್ಯದರ್ಶಿ ದಿವಾಕರ್ ಸೇರಿದಂತೆ ದೇವರ ಒಕ್ಕಲಿನ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ನೂರಾರು ಭಕ್ತರು ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: