May 2, 2024

Bhavana Tv

Its Your Channel

ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ಮಂಡಳಿಯ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

ಕೆ.ಆರ್.ಪೇಟೆ ತಾಲ್ಲೂಕಿನ ಬಣ್ಣೇನಹಳ್ಳಿಯಲ್ಲಿ ಆರಂಭವಾಗಿರುವ ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ಮಂಡಳಿಯ ವಿರುದ್ಧ ಕನ್ನಡಪರ ಸಂಘಟನೆಗಳು, ರೈತ ಸಂಘ ಹಾಗೂ ನಿರುದ್ಯೋಗಿ ಕನ್ನಡಿಗರ ಆಕ್ರೋಶ..೧೫ ದಿನಗಳಲ್ಲಿ ಫುಡ್ ಫ್ಯಾಕ್ಟರಿ ಆಡಳಿತ ಮಂಡಳಿಯು ತನ್ನ ಧೋರಣೆಯನ್ನು ಬದಲಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮುಖಂಡರು …

ಕೃಷ್ಣರಾಜಪೇಟೆ ತಾಲ್ಲೂಕಿನ ರೈತರಿಗೆ ಹಾಗೂ ನಿರುದ್ಯೋಗಿ ಕನ್ನಡಿಗರಿಗೆ ಉದ್ಯೋಗ ನೀಡದೇ ವಂಚಿಸಿ ತಮಿಳಿಗರು, ತೆಲುಗರು ಹಾಗೂ ಬಿಹಾರಿಗರಿಗೆ ಮಣೆ ಹಾಕುತ್ತಿರುವ ಬಣ್ಣೇನಹಳ್ಳಿಯ ಬಳಿ ಇರುವ ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ಮಂಡಳಿಯು ೧೫ ದಿನಗಳಲ್ಲಿ ತನ್ನ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಕಾರ್ಖಾನೆಗೆ ರೈತರಿಂದ ಪಡೆದುಕೊಂಡಿರುವ ಭೂಮಿಯನ್ನು ಮರಳಿ ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಬೇಸಾಯ ಮಾಡಲಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರಾದ ಡಾ.ಬಸ್ತಿರಂಗಪ್ಪ, ಮುದುಗೆರೆ ರಾಜೇಗೌಡ, ಲಕ್ಷ್ಮೀಪುರ ಜಗಧೀಶ್, ಮರುವನಹಳ್ಳಿ ಶಂಕರ್ ಜಯಕರ್ನಾಟಕ ಸಂಘಟನೆಯ ಸೋಮಶೇಖರ್ ಮತ್ತು ಕನ್ನಡ ಪರ ಸಂಘಟನೆಯ ತಾಲೂಕು ಅಧ್ಯಕ್ಷ ಮಿಲ್ಟ್ರಿ ಸುಕುಮಾರ್ ಎಚ್ಚರಿಕೆ ನೀಡಿದ್ದಾರೆ…

ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕನ್ನಡ ವಿರೋಧಿಯಾಗಿರುವ ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ಮಂಡಳಿಯನ್ನು ಎಚ್ಚರಿಸಿದರು…

ಕಳೆದ ೯ ವರ್ಷಗಳ ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಲಾನ್ಯಾಸಗೊಂಡ ಫೇವರಿಚ್ ಮೆಗಾ ಫುಡ್ ಕಾರ್ಖಾನೆಯ ಕಾಮಗಾರಿಯು ಕುಂಟುತ್ತಾ ನಡೆಯುತ್ತಿದೆ. ಪ್ರಸ್ತುತ ಪಶು ಆಹಾರ, ಕುರ್ ಕುರೇ, ಜ್ಯೂಸ್ ಮತ್ತು ಫ್ಲೇವುಡ್ ಫ್ಯಾಕ್ಟರಿ ಘಟಕಗಳು ಮಾತ್ರ ಆರಂಭವಾಗಿದ್ದು ಇನ್ನೂ ೨೫ ಕ್ಕೂ ಹೆಚ್ಚು ಘಟಕಗಳು ಕಾರ್ಯಾರಂಭ ಮಾಡಬೇಕಿವೆ. ಪ್ರಸ್ತುತ ಪಶು ಆಹಾರ ಘಟಕದ ನಿರ್ವಹಣೆಯ ಜವಾಬ್ಧಾರಿ ಹೊತ್ತಿರುವ ವೇಲುಮಣಿ ಎಂಬ ವ್ಯಕ್ತಿಯು ಸಚ್ಚಿನ್ ಎಂಬ ಗುತ್ತಿಗೆದಾರನ ಮೂಲಕ ಗೂಂಡಾಗಿರಿ ನಡೆಸುತ್ತಿದ್ದು ಕನ್ನಡಿಗರಿಗೆ ಉದ್ಯೋಗ ನೀಡದೇ ತಮಿಳಿಗರು, ತೆಲುಗರು ಹಾಗೂ ಇತರೆ ಭಾಷಿಕರಿಗೆ ಮಾತ್ರ ಉದ್ಯೋಗ ನೀಡಿ ಕನ್ನಡಿಗರನ್ನು ವಂಚಿಸುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.. ಕನ್ನಡದ ನೆಲ ಜಲವನ್ನು ಬಳಕೆ ಮಾಡಿಕೊಂಡು ಆರಂಭ ಮಾಡಿರುವ ಫೇವರಿಚ್ ಮೆಗಾ ಫುಡ್ ಪಾರ್ಕ್ ನಲ್ಲಿ ಕನ್ನಡಿಗರಿಗೆ ಮೊದಲು ಉದ್ಯೋಗ ನೀಡಿ ಅನ್ಯ ಭಾಷಿಕರು ಹಾಗೂ ಹೊರ ರಾಜ್ಯಗಳ ಜನರನ್ನು ವಾಪಸ್ಸು ಕಳಿಸಿ ಕೆ.ಆರ್.ಪೇಟೆ ತಾಲ್ಲೂಕಿನ ನಿರುದ್ಯೋಗಿ ಯುವಜನರಿಗೆ ಉದ್ಯೋಗದಲ್ಲಿ ನೊದಲ ಆದ್ಯತೆಯನ್ನು ನೀಡಬೇಕು ಎಂದು ದಲಿತ ಮುಖಂಡ ಬಸ್ತಿರಂಗಪ್ಪ, ಜಯಕರ್ನಾಟಕ ಸಂಘಟನೆಯ ಸೋಮಶೇಖರ್, ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಲಕ್ಷ್ಮೀಪುರ ಜಗಧೀಶ್, ಮರುವನಹಳ್ಳಿ ಶಂಕರ್ ಮತ್ತು ಕನ್ನಡ ಸಂಘಟನೆಯ ಮಿಲ್ಟ್ರಿ ಸುಕುಮಾರ್ ಆಗ್ರಹಿಸಿದರು…

ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ಮಂಡಳಿಯು ಕನ್ನಡ ವಿರೋಧಿ ಹಾಗೂ ರೈತ ವಿರೋಧಿ ಧೋರಣೆಯನ್ನು ಕೈಬಿದಿದ್ದರೆ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.. ೧೫ ದಿನಗಳಲ್ಲಿ ಅಧಿಕಾರ ಸೆಕ್ಯುರಿಟಿ ಗಾರ್ಢ್ ಗಳು ಸೇರಿದಂತೆ ಪ್ರಸ್ತುತ ಫುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಬೇರೆ ರಾಜ್ಯಗಳ ಜನರನ್ನು ಕೆಲಸದಿಂದ ಕೈಬಿಟ್ಟು ಕನ್ನಡಿಗರು ಹಾಗೂ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡಿರುವ ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ, ಫ್ಯಾಕ್ಟರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: