April 27, 2024

Bhavana Tv

Its Your Channel

ಮೇ.21ರಂದು ಹಿರಿಯ ರಾಜಕಾರಣಿ ಕೃಷ್ಣರಿಗೆ ನುಡಿನಮನ ಕಾರ್ಯಕ್ರಮ

ಕೃಷ್ಣರಾಜಪೇಟೆ :- ನಾಡಿನ ಹಿರಿಯ ರಾಜಕಾರಣಿ, ರಾಜಕೀಯ ರಂಗದ ಬೆಳ್ಳಿಚುಕ್ಕಿ ಮಾಜಿಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರು ನಿಧನರಾಗಿ ವರ್ಷ ಸಮೀಪಿಸುತ್ತಿರುವುದರಿಂದ ಕೃಷ್ಣರ ಅಭಿಮಾನಿಗಳು ಮೇ.21ರಂದು ಕೆ.ಆರ್.ಪೇಟೆ ಪಟ್ಟಣದ ಸಂತೇಬಾಚಹಳ್ಳಿ ರಸ್ತೆಯಲ್ಲಿರುವ ಜಯಮ್ಮರಾಮಸ್ವಾಮಿ ಸಮುದಾಯ ಭವನದಲ್ಲಿ ಕೃಷ್ಣರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ..

ಈ ಬಗ್ಗೆ ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ವಾಣಿಜ್ಯ ಸಮುಚ್ಛಯದಲ್ಲಿರುವ ಕೃಷ್ಣ ಪ್ರತಿಷ್ಠಾನದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ, ಪದಾಧಿಕಾರಿಗಳಾದ ಅಂಚಿ ಸಣ್ಣಸ್ವಾಮಿಗೌಡ, ಬೂಕನಕೆರೆ ಜವರಾಯಿಗೌಡ ಮತ್ತು ಹೊಸಹೊಳಲು ಮಂಜುಳಾಚನ್ನಕೇಶವ ಮಾತನಾಡಿ ಕೃಷ್ಣ ಅವರ ನುಡಿನಮನ ಕಾರ್ಯಕ್ರಮವನ್ನು ನಡೆಸಿ ಕೃಷ್ಣರ ಸರಳತೆ, ರಾಜಕೀಯ ಮೌಲ್ಯಗಳು ಹಾಗೂ ತತ್ವ ಸಿದ್ಧಾಂತಗಳನ್ನು ನಮ್ಮ ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಡುವ ಜೊತೆಗೆ ಕೆ.ಆರ್.ಪೇಟೆಯ ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ಕೃಷ್ಣ ಅವರು ಹಮ್ಮಿಕೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಶ್ರೀಸಾಮಾನ್ಯರಿಗೆ ತಿಳಿಸುವ ಮೂಲಕ ನಮ್ಮನ್ನು ಅಗಲಿರುವ ಹಿರಿಯ ಚೇತನಕ್ಕೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ ಶಿಕ್ಷಣತಜ್ಞ ಡಾ.ಅಂಚಿ ಸಣ್ಣಸ್ವಾಮಿಗೌಡ ಕೃಷ್ಣರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಜವರಾಯಿಗೌಡ ಮನವಿ ಮಾಡಿದರು..

ಕೃಷ್ಣ ಅವರ ನುಡಿನಮನ ಕಾರ್ಯಕ್ರಮದ ನೇತೃತ್ವವನ್ನು ಸಚಿವ ಡಾ.ನಾರಾಯಣಗೌಡ ಅವರು ವಹಿಸಲಿದ್ದು ರಾಜಕೀಯ ಕ್ಷೇತ್ರದಲ್ಲಿ ಕೃಷ್ಣ ಅವರ ಸಹಪಾಟಿಗಳಾಗಿದ್ದ ಮಾಜಿ ಸಚಿವರಾದ ಎನ್.ಚೆಲುವರಾಯಸ್ವಾಮಿ, ಸಿ.ಎಸ್.ಪುಟ್ಟರಾಜು, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ರಮೇಶಬಾಬು ಬಂಡಿಸಿದ್ಧೇಗೌಡ, ಚನ್ನರಾಯಪಟ್ಟಣ ಪುಟ್ಟೇಗೌಡ, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದು ಕೃಷ್ಣರ ಧರ್ಮಪತ್ನಿ ಶ್ರೀಮತಿ ಇಂದ್ರಮ್ಮ, ಮಗಳು, ಅಳಿಯ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ನಾಡಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ನುಡಿನಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಜವರಾಯಿಗೌಡ ಮನವಿ ಮಾಡಿದರು..
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕತ್ತರಘಟ್ಟ ವಾಸು, ನಿರ್ದೇಶಕರಾದ ಚನ್ನಿಂಗೇಗೌಡ, ಹಾದನೂರು ಪರಮೇಶ್, ಕೆ.ಮಂಜುಳಾ ಚನ್ನಕೇಶವ, ಸಿಂದಘಟ್ಟ ರವಿ, ಕೆ.ಆರ್.ಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: