June 30, 2022

Bhavana Tv

Its Your Channel

ಬೈಕ್ ಗೆ ಟ್ರ‍್ಯಾಕ್ಟರ್ ಡಿಕ್ಕಿ ಬೈಕ್ ಸವಾರ ಮೋಹನ್ ಸಾವು .

ಕೆ.ಆರ್.ಪೇಟೆ ತಾಲೂಕಿನ ವಡಕೆ ಶೆಟ್ಟಹಳ್ಳಿ ಗ್ರಾಮದ ಸಮೀಪ ಟ್ರ‍್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ತೀವ್ರ ಗಾಯಗೊಂಡಿದ್ದು ಸ್ಥಳೀಯರು ಚಿಕಿತ್ಸೆಗಾಗಿ ಬೂಕನಕೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.

ಮೃತ ವ್ಯಕ್ತಿ ಮೂಲತಃ ಪಾಂಡವಪುರ ತಾಲೂಕಿನ ಚಿನುಕುರುಳಿ ಹೋಬಳಿಯ ಹುಣಸೇಕಟ್ಟೆ ಕೊಪ್ಪಲು ಗ್ರಾಮದ ಮಂಜಾಚಾರಿ ಅವರ ದ್ವಿತೀಯ ಪುತ್ರ ಮೋಹನ್(೨೫) ಮೃತಪಟ್ಟವರು. ಖಾಸಗಿ ವಾಹನ ಚಾಲಕರಾಗಿದ್ದ ಮೋಹನ್ ಮಂಗಳವಾರ ಮಧ್ಯಾಹ್ನ ೩:೪೫ ವೇಳೆ ಬೂಕನಕೆರೆಯ ಕಡೆಗೆ ಬರುತ್ತಿದ್ದರು. ಇದೇ ವೇಳೆ ವಡಕೆ ಶೆಟ್ಟಹಳ್ಳಿಯ ಬಳಿ ಎದುರಿನಿಂದ ವೇಗವಾಗಿ ಬಂದ ಟ್ಯಾಕ್ಟರ್ ಬೈಕ್ ಡಿಕ್ಕಿಯಾಗಿ ಮೋಹನ್ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಮಯದಲ್ಲಿ ಟ್ರ‍್ಯಾಕ್ಟರ್ ಮತ್ತು ಚಾಲಕ ಪರಾರಿಯಾಗಿದ್ದಾನೆ. ಈ ಸಂಬAಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವರದಿ:– ಡಾ.ಕೆ.ಆರ್.ನೀಲಕಂಠ. ಕೆ.ಆರ್.ಪೇಟೆ.

error: