April 29, 2024

Bhavana Tv

Its Your Channel

ಬಂಡಿಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಪರಿಸರ ದಿನ ಆಚರಣೆ

ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಕೆ.ವೆಂಕಟೇಶ್ ನೇತೃತ್ವದಲ್ಲಿ ವಿಶ್ವಪರಿಸರ ದಿನ ಆಚರಣೆ.. ಸಸಿ ನೆಟ್ಟು ನೀರೆರೆದು ಸಂಭ್ರಮಿಸಿದ ಮಕ್ಕಳು ..

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು. ಗಿಡಮರಗಳಿಂದ ಪರಿಸರ ಸಂರಕ್ಷಣೆ ಸಾಧ್ಯವಾದ್ದರಿಂದ ಗ್ರಾಮೀಣ ಜನರು ಗಿಡಮರಗಳನ್ನು ಮಕ್ಕಳಂತೆ ಪೋಷಿಸಿ ಸಧೃಡವಾಗಿ ಬೆಳೆಸುವ ಮೂಲಕ ಪರಿಸರದ ಉಳಿವಿಗೆ ಕೈಜೋಡಿಸಬೇಕು ಎಂದು ಬಂಡಿಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಕೆ.ವೆಂಕಟೇಶ್ ಮನವಿ ಮಾಡಿದರು..

ಮಾನವನ ದುರಾಸೆ ಹಾಗೂ ಸ್ವಾರ್ಥದಿಂದಾಗಿ ಕಾಡು ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಮರಗಳನ್ನು ಕಡಿದು ಕಾಂಕ್ರೀಟ್ ಕಾಡಿನ ಪ್ರತಿರೂಪವಾಗಿರುವ ನಗರಗಳನ್ನು ನಿರ್ಮಿಸುತ್ತಿರುವುದರಿಂದ ಹವಾಮಾನದಲ್ಲಿ ಏರುಪೇರಾಗಿ ಕಾಲ ಕಾಲಕ್ಕೆ ಮಳೆಯಾಗಿ ಬೆಳೆಯಾಗದೇ ರೈತರು ಸಂಕಷ್ಢಕ್ಕೆ ಸಿಲುಕಿದ್ದಾರೆ. ಜಾಗತಿಕ ತಾಪಮಾನವು ಹೆಚ್ಚಾಹಿ ಬಿಸಿಲಿನ ಜಳದಿಂದ ಬಳಲುತ್ತಿರುವ ನಾವು ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಕಾಡಿದ್ದರೆ ನಾಡಿನ ಸಮೃದ್ಧಿ, ಗಿಡಮರಗಳಿಂದ ಶುದ್ಧಗಾಳಿ, ಪ್ರಾಣವಾಯುವಾದ ಆಮ್ಲಜನಕದಿಂದ ಆರೋಗ್ಯ ಎಂಬ ಸತ್ಯ ಅರಿತು ಕೆಲಸ ಮಾಡಬೇಕು ಎಂದು ವೆಂಕಟೇಶ್ ಕರೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕಿ ರೂಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಹೇಮಲತಾ, ಶಿಕ್ಷಕರಾದ ಡಿ.ರಂಜಿತ, ಶೃತಿ, ಆಶಾ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: