May 15, 2024

Bhavana Tv

Its Your Channel

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 5ಲಕ್ಷರೂ ಮೌಲ್ಯದ 25 ಸಾವಿರ ನೋಟ್ ಬುಕ್ ವಿತರಿಸಿದ ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್ …

ಕೃಷ್ಣರಾಜಪೇಟೆ :– ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಸರ್ವಶ್ರೇಷ್ಠ ಸಾಧನೆ ಮಾಡಿ ಗುರಿ ಮುಟ್ಟಬೇಕು ಎಂದು ಪುರಸಭಾ ಸದಸ್ಯ ಹಾಗೂ ಜೆಡಿಎಸ್ ಯುವನಾಯಕರಾದ ಬಸ್ ಸಂತೋಷ್ ಕುಮಾರ್ ಹೇಳಿದರು..

ಅವರು ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು..

ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ, ಗ್ರಾಮೀಣ ವಿದ್ಯಾರ್ಥಿಗಳು ಅಪ್ರತಿಮ ಪ್ರತಿಭಾವಂತ ರಾಗಿರುವುದು ನಮಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶಗಳ ಮೂಲಕ ತಿಳಿಯುತ್ತಿದೆ. ಆದ್ದರಿಂದ ನಮ್ಮ ತಾತನವರಾದ ಬಸ್ ತಿಮ್ಮೇಗೌಡರ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಸೇರಿದಂತೆ ಸಂಕಷ್ಠದಲ್ಲಿರುವ ಬಡಜನರಿಗೆ ನನ್ನ ಸಹೋದರರಾದ ಕೃಷ್ಣೇಗೌಡರ ನೇತೃತ್ವದಲ್ಲಿ ಕೈಲಾದ ಸಹಾಯ ಮಾಡುತ್ತಿದ್ದೇನೆ. ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ತೋರಿಕೆಗಾಗಿ ಫೋಟೋ ತೆಗೆಸಿಕೊಂಡು ಸಹಾಯ ಮಾಡುವ ಜನರಿದ್ದಾರೆ. ಇಂತಹ ಜನರ ಮಧ್ಯದಲ್ಲಿ ಒಬ್ಬ ಸಾಮಾನ್ಯ ಬಸ್ ಚಾಲಕನ ಮಗನಾದ ನಾನು ಕಷ್ಟಪಟ್ಟು ಸಂಪಾಧನೆ ಮಾಡಿ ನಾನು ಗಳಿಸಿದ ಹಣದಲ್ಲಿ ಅಲ್ಪಭಾಗವನ್ನು ಸಮಾಜ ಸೇವಾ ಚಟುವಟಿಕೆಗಳಿಗೆ ಖರ್ಚು ಮಾಡುತ್ತಿದ್ದೇನೆ. ನನ್ನ ಕೆಲಸದಲ್ಲಿ ನನಗೆ ಸಮಾಧಾನವಿದೆ. ನನ್ನ ಪತ್ನಿ, ತಾಯಿ ಹಾಗೂ ಕುಟುಂಬದ ಸದಸ್ಯರು ನನ್ನೊಡನೆ ನಿಂತು ನನ್ನ ಸಮಾಜಮುಖಿ ಕೆಲಸಗಳನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಂತೋಷ್ ಕುಮಾರ್ ಅಭಿಮಾನದಿಂದ ಹೇಳಿದರು…

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂತೋಷ್ ಕುಮಾರ್ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಿ ಸಂತೋಷ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು..

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಚಂದ್ರಶೇಖರ್, ಲಿಂಗಣ್ಣಸ್ವಾಮಿ, ಉಪನ್ಯಾಸಕರಾದ ಅನುರಾಧ, ರಮೇಶ್, ಹಿರಿಯ ಮುಖಂಡರಾದ ಹೆಮ್ಮನಹಳ್ಳಿಯ ತಮ್ಮಣ್ಣಗೌಡ, ಮಹಿಳಾ ಹೋರಾಟಗಾರ್ತಿ ಜ್ಯೋತಿ ಸಂತೋಷ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: