May 14, 2024

Bhavana Tv

Its Your Channel

ಲಂಬಾಡಿಕಾವಲು ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ

ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ..ತಹಶೀಲ್ದಾರ್ ರೂಪ ಅವರ ಜನಪರ ಕಾಳಜಿಗೆ ಮನಸಾರೆ ಕೊಂಡಾಡಿದ ಗ್ರಾಮಸ್ಥರು.. ಪೂರ್ಣಕುಂಭ ಸ್ವಾಗತ ನೀಡಿ ಮಂಗಳಾರತಿ ಮಾಡಿ ಗ್ರಾಮಕ್ಕೆ ಸ್ವಾಗತಿಸಿದ ಗ್ರಾ.ಪಂ ಅಧ್ಯಕ್ಷೆ ಸುಮಾ ಹಾಗೂ ಗ್ರಾಮಸ್ಥರು.. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ..

ಕೃಷ್ಣರಾಜಪೇಟೆ ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹಾಗೂ ಗ್ರಾಮವಾಸ್ಥವ್ಯ ಕಾರ್ಯಕ್ರಮವು ತಹಶೀಲ್ದಾರ್ ಎಂ.ವಿ.ರೂಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು..
ಸುರಿಯುವ ಮಳೆಯ ನಡುವೆಯೂ ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗ್ರಾಮದ ಮನೆ ಬಾಗಿಲಿಗೆ ಆಗಮಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡರು..

ಆಲAಬಾಡಿಕಾವಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷ ಮುಜಾಹಿದ್ ಖಾನ್ ನೇತೃತ್ವದಲ್ಲಿ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ತಹಶೀಲ್ದಾರ್ ರೂಪ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಬಿಇಓ ಸೀತಾರಾಮ್, ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ, ಹಾಗೂ ಇತರೆ ಅಧಿಕಾರಿಗಳು ಸರ್ಕಾರದಿಂದ ಗ್ರಾಮದ ಜನರಿಗೆ ಹಾಗೂ ಗ್ರಾಮಾಭಿವೃದ್ಧಿಗೆ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು..

ಅಕ್ಕಿಹೆಬ್ಬಾಳು ಹೋಬಳಿ ರಾಜಶ್ವನಿರೀಕ್ಷಕ ನರೇಂದ್ರ, ಗ್ರಾಮದ ಮುಖಂಡರಾದ ನರೇಂದ್ರನಾಯಕ, ಸಿದ್ಧೀಕ್, ಎ.ಎಂ.ಸAಜೀವಪ್ಪ, ರಾಜು, ದೇವರಾಜು, ಪಿ.ನಂಜುAಡೇಗೌಡ, ನಾಗರಾಜು, ಪಾರ್ವತಿ ಸೋಮಶೇಖರ್, ಪಠಾಣ್ ಬಾಬೂ, ರವಿ, ತುಳಸೀರಾಂ, ರಾಯಪ್ಪ, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು ಸಭೆಯಲ್ಲಿ ಮಾತನಾಡಿದರು..

ಶಾಲೆಗೆ ಹೋಗಲು ಒಪ್ಪಿಸಿದ ತಹಶೀಲ್ದಾರ್ .. ಆಲಂಬಾಡಿಕಾವಲು ಗ್ರಾಮಕ್ಕೆ ಕಬ್ಬು ಕಟಾವು ಮಾಡುವ ಕೂಲಿ ಕೆಲಸಕ್ಕೆ ಬಂದಿರುವ ದಂಪತಿಗಳ ಇಬ್ಬರು ಪುತ್ರರು ಶಾಲೆಗೆ ಹೋಗದೇ ಶಾಲೆಯಿಂದ ಹೊರಗುಳಿದಿರುವ ವಿಷಯವನ್ನು ಗ್ರಾಮಸ್ಥರಿಂದ ತಿಳಿದ ತಹಶೀಲ್ದಾರ್ ರೂಪ ಮತ್ತು ಗ್ರಾ.ಪಂ ಅಧ್ಯಕ್ಷೆ ಸುಮಾ ದಂಪತಿಗಳು ವಾಸವಾಗಿರುವ ಟೆಂಟ್ ಬಳಿ ತೆರಳಿ ಅವರ ಮನವೊಲಿಸಿ ಇಬ್ಬರೂ ಮಕ್ಕಳು ಶಾಲೆಗೆ ತೆರಳಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡುವ ಜೊತೆಗೆ ಸರ್ಕಾರದಿಂದ ದೊರೆಯುವ ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಬುದ್ಧಿವಾದ ಹೇಳಿ ತಿಳುವಳಿಕೆ ನೀಡಿ ಶಾಲೆಗೆ ಹೋಗಲು ಒಪ್ಪಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ. ಮಂಡ್ಯ

error: