May 4, 2024

Bhavana Tv

Its Your Channel

ವಿದ್ಯುತ್ ಸಂಪರ್ಕ ಇಲ್ಲದೆ ಗುಡಿಸಿನಲ್ಲಿ ವಾಸ ಮಾಡುತ್ತಿದ್ದ ಬಡ ಕುಟುಂಬಕ್ಕೆ ವಿದ್ಯುತ್ ಪೂರೈಕೆ

ಕಿಕ್ಕೇರಿ:- ನಲವತ್ತು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಗುಡಿಸಿನಲ್ಲಿ ವಾಸ ಮಾಡುತ್ತಿದ್ದ ಬಡ ಕುಟುಂಬಕ್ಕೆ ವಿದ್ಯುತ್ ಪೂರೈಕೆ ಮಾಡಿದ ಎ.ಇ.ಇ ಕೃಷ್ಣ ಮತ್ತು ಜೆ.ಇ ಶ್ರೀಧರ್ ಇವರ ಕಾರ್ಯಕ್ಕೆ ಜಯಮ್ಮ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.ಕಳೆದ ನಲವತ್ತು ವರ್ಷಗಳಿಂದ ವೃದ್ದೆ ಜಯಮ್ಮ ಲೇಟ್ ಪುಟ್ಟಚಾರಿಯವ ಬಡ ಕುಟುಂಬವೊAದು ಗುಡಿಸಿಲಲ್ಲಿ ನಿರ್ಮಾಣ ಮಾಡಿಕೊಂಡು ಕತ್ತಲೆ ಜೀವನ ನಡೆಸುತ್ತಿದ್ದರು ಕಳೆದ 15 ದಿನ ಹಿಂದೆ ಅಷ್ಟೇ ಇದರ ಬಗ್ಗೆ ವಾಹಿನಿಯಲ್ಲಿ ಸುದ್ದಿ ಪ್ರಸಾರ ಆಗಿತ್ತು ಇದನ್ನು ಗಮನಿಸಿದ ಕೃಷ್ಣರಾಜಪೇಟೆಯ ಎ.ಇ.ಇ ಕೃಷ್ಣ, ಮತ್ತು ಕಿಕ್ಕೇರಿಯ ಜೆ.ಇ ಶ್ರೀಧರ್ ರವರು ಸ್ಥಳ ಪರಿಶೀಲನೆ ನಡೆಸಿ ಎರಡು ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಪೂರೈಕೆ ಮಾಡಿದ್ದು ಇವರ ಈ ಕಾರ್ಯಕ್ಕೆ ಬಡ ಕುಟುಂಬವು ಚಾಮುಂಡೇಶ್ವರಿ ವಿದ್ಯುತ್ ಮಂಡಲಿಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.ಅಲ್ಲದೆ ಈ ಕುಟುಂಬಕ್ಕೆ ವಾಸ ಮಾಡಲು ಮನೆ ಇರಲಿಲ್ಲ ಮನೆ ಕಟ್ಟಡವು ಅರ್ಧಕ್ಕೆ ನಿಂತು ಹೋಗಿತ್ತು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಮೇಲೆ ದಾನಿಗಳ ಸಹಾಯದಿಂದ ಮನೆಯೂ ಸಹ ನಿರ್ಮಾಣ ಕಾರ್ಯವು ನಡೆಯುತ್ತಿದ್ದು ಬಡ ಮಹಿಳೆ ಜಯಮ್ಮ ನವರ ಕುಟುಂಬ ಸುದ್ದಿ ಪ್ರಸಾರ ಮಾಡಿದ ವಾಹಿನಿ ಮತ್ತು ಪತ್ರಿಕೆಗಳಿಗೆ ಹಾಗೂ ಪತ್ರಕರ್ತರಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು

ಅಲ್ಲದೆ ಕಿಕ್ಕೇರಿ ಹೋಬಳಿಯ ದಬ್ಬೇಘಟ್ಟ ಗ್ರಾಮ ಪಂಚಾಯತಿಯ ಪಿ.ಡಿ.ಓ ರವರು ಇವರಿಗೆ ಆಶ್ರಯ ಮನೆ ಯೋಜನೆಯಡಿ ಮುಂಜೂರು ಮಾಡಿ ಮೊದಲನೇ ಹಂತದ ಬಿಲ್ ಅನ್ನು ಪಾವತಿ ಮಾಡಿ. ಉಳಿಕೆ ಬಿಲ್ ಗಳನ್ನು ದಾಖಲೆ ಕೊರತೆ ಎಂದು ತಡೆ ಹಿಡಿದ್ದಿದ್ದು ಕೂಡಲೇ ನಮಗೆ ಮುಂಜೂರಾದ ಆಶ್ರಯ ಮನೆಯ ಸಹಾಯ ಧನವನ್ನು ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: