May 1, 2024

Bhavana Tv

Its Your Channel

ಕರ್ನಾಟಕ ಸರಕಾರ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ DYFI ನಿಂದ ಕ್ಯಾoಡಲ್ ಹಿಡಿದು ಪ್ರತಿಭಟನೆ

ಮಳವಳ್ಳಿ : ಕರ್ನಾಟಕ ಸರಕಾರ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು, ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಆಗ್ರಹಿಸಿ DYFI ನಿಂದ ಕ್ಯಾಂಡಲ್ ಹಿಡಿದು ಮಳವಳ್ಳಿ ಆಂಚೆ ಕಛೇರಿ ಮಂದೆ ಪ್ರತಿಭಟನೆ ನಡೆಸಲಾಯಿತು.
ನಿನ್ನೆ ರಾತ್ರಿ ನಡೆದ ಈ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನೆಯನ್ನ ಉದ್ದೇಶಿಸಿ DYFI ಮಾಜಿ ರಾಜ್ಯ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡುತ್ತ.
ರಾಜ್ಯ ಸರಕಾರ ವಿದ್ಯುತ್ ದರವನ್ನು ಸತತವಾಗಿ ಏರಿಸುತ್ತಿದೆ. ವಿದ್ಯುತ್ ಬಳಕೆಯ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ಇಂದು ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕರೋನ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿAತಲೂ ಹೆಚ್ಚು ಬಾರಿ ವಿದ್ಯುತ್ ದರ ಏರಿಸಿರುವುದು ಸರಕಾರದ ಜನ ವಿರೋಧಿ ಧೋರಣೆಗೆ ಸ್ಪಷ್ಟ ಉದಾಹರಣೆಎಂದರು
ಕೊರೋನ ಎರಡನೇ ಅಲೆಯ ನಿರ್ವಹಣೆಯ ಭಾಗವಾಗಿ ರಾಜ್ಯ ಸರಕಾರ ಯಾವುದೇ ಪ್ರಾಯೋಗಿಕ ಸಿದ್ದತೆಯನ್ನ ಮಾಡಿಕೊಳ್ಳದೆ ಮೂರು ತಿಂಗಳಿಗೂ ಹೆಚ್ಚು ಕಾಲ ಲಾಕ್ ಡೌನ್ ವಿಧಿಸಿ ಜನರನ್ನು ಮನೆಯೊಳಗಡೆ ಇರುವಂತೆ ಬಲವಂತವಾಗಿ ನಿರ್ಬಂಧಿಸಿದೆ. ಇದರಿಂದಾಗಿ ಜನತೆಯ ದುಡಿಮೆಯ ಅವಕಾಶಗಳು ಪೂರ್ಣವಾಗಿ ಕಸಿಯಲ್ಪಟ್ಟಿದ್ದು, ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ. ಲಾಕ್ ಡೌನ್ ಸರಕಾರವೆ ವಿಧಿಸಿದ ನಿರ್ಬಂಧವಾಗಿರುವ ಕಾರಣ ಜನತೆಯ ಜೀವನ ನಿರ್ವಹಣೆಯ ಕನಿಷ್ಟ ಬೇಡಿಕೆಗಳ ಪೂರೈಕೆ ಸರಕಾರದ ಕರ್ತವ್ಯ. ಆದರೆ ಯಾವುದೆ ಪ್ರಾಯೋಗಿಕ ಪರಿಹಾರ ಪ್ಯಾಕೇಜ್ ಒದಗಿಸದ ಸರಕಾರ ಜನ ಸಾಮಾನ್ಯರ ಬದುಕನ್ನು ಅತಂತ್ರಗೊಳಿಸಿದೆ.
ಸರಕಾರದ ಅಧೀನದಲ್ಲಿರುವ ವಿದ್ಯುತ್, ಕುಡಿಯುವ ನೀರುಗಳ ಬಿಲ್ ಗಳನ್ನು ಸರಕಾರ ಸ್ವಯಂ ಪ್ರೇರಣೆಯಿಂದ ಮನ್ನಾ ಮಾಡಬೇಕಿತ್ತು. ಆದರೆ ಲಾಕ್ ಡೌನ್ ಅವಧಿಯಲ್ಲಿಯೂ ದುಬಾರಿ ವಿದ್ಯುತ್ ಬಿಲ್ ಪ್ರತಿ ಮನೆಗೂ ನೀಡಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಬಿಲ್ ಪಾವತಿಗೆ ಬಲವಂತ ಇಲ್ಲ ಎಂದು ಹೇಳುತ್ತಲೇ ಲಾಕ್ ಡೌನ್ ತೆರವಿನ ನಂತರ ಬಾಕಿ ಬಿಲ್ ಗಳನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿಯನ್ನು ಸರಕಾರ ನಿರ್ಮಿಸುತ್ತಿದೆ. ಇದು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಭರಿಸಲಾಗದ ಬಹುದೊಡ್ಡ ಹೊರೆಯಾಗಲಿದೆ ಎಂದು ದೂರಿದರು.
ಆದುದರಿಂದ ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಗಳನ್ನು ಸರಕಾರ ಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಭರತ್ ರಾಜ್ ಆಗ್ರಹಿಸಿದರು.
DYFI ಮುಖಂಡರಾದ ಹೊಸಹಳ್ಳಿ ಚಂದ್ರು. ಗುರುಸ್ವಾಮಿ. ಚಂದ್ರುಕಾಗೇಪುರ. ರಾಜೇಂದ್ರಪ್ರಸಾದ್ ಶಿವಕುಮಾರ್. Citu ತಿಮ್ಮೇಗೌಡ. ಗಿರೀಶ್. ಪ್ರದೀಪ್ KPRS.. ಲಿಂಗರಾಜ್. ಆನಂದಸ್ವಾಮಿ. ಕುಮಾರ್ ಚಿಕ್ಕಮೊಗಣ್ಣ ಕರಿಯಪ್ಪ. ಎಮ್ .ಡಿ.ಶಂಕರ್ . ಮುಂತಾದವರಿದ್ದರು..

ವರದಿ : ಮಲ್ಲಿಕಾರ್ಜುನಸ್ವಾಮಿ. ಮಳವಳ್ಳಿ

error: