May 3, 2024

Bhavana Tv

Its Your Channel

ನಾಗಮಂಗಲ ತಾಲ್ಲೂಕು ವಿಶೇಷ ಲಸಿಕೆ ಅಭಿಯಾನಕ್ಕೇ ಸಾರ್ವಜನಿಕರು ಸಹಕಾರ ನೀಡಿ ಸುರೇಶ ಗೌಡ.

ನಾಗಮಂಗಲ ; ನಾಗಮಂಗಲ ತಾಲ್ಲೂಕನ್ನು ವ್ಯಾಕ್ಸಿನ್ ಮುಕ್ತ ತಾಲ್ಲೂಕನ್ನಾಗಿ ಮಾಡುವ ನಿಟ್ಟಿನಲ್ಲಿತಾಲ್ಲೂಕು ಆಡಳಿತ ಪಣತೊಟ್ಟಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕ ಸುರೇಶ್ ಗೌಡ ತಿಳಿಸಿದರು.
ಅವರಿಂದು ನಾಗಮಂಗಲ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾಗಮಂಗಲ ತಾಲೂಕಿನಲ್ಲಿ ಸೋಮವಾರದಿಂದ ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಮುಖಾಂತರ ನಾಗಮಂಗಲ ತಾಲ್ಲೂಕಿನ ಲಸಿಕೆ ಮುಕ್ತ ತಾಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ ಇಲಾಖೆಗಳ ನೌಕರರನ್ನು ಬಳಸಿಕೊಂಡು ವಿಶೇಷ ಲಸಿಕೆ ಅಭಿಯಾನವನ್ನು ಆರಂಭಿಸಲಾಗುವುದು ಎಂದು ತಿಳಿಸುವ ಜೊತೆಗೆ ಮೂರನೇ ಅಲೆಯನ್ನು ತಡೆಯುವ ಹಾಗೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ನಮ್ಮೊಟ್ಟಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಕುಂಜಿ. ಅಹಮದ್ . ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಕುಮಾರ್ ತಾಲ್ಲೂಕು ಆರೋಗ್ಯ ಅಧಿಕಾರಿಗಳ ರಮೇಶ್ .ಪುರಸಭೆ ಮುಖ್ಯಾಧಿಕಾರಿ ಗಳಾದ ಜಗದೀಶ್ .ಸರ್ಕಲ್ ಇನ್ಸ್ಪೆಕ್ಟರ್ ಸುಧಾಕರ್. ಬೆಳ್ಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಹಾಜರಿದ್ದರು.

ದೇವಲಾಪುರ ಜಗದೀಶ್ ನಾಗಮಂಗಲ

error: