May 18, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ ಮಲೇರಿಯಾ ವಿರೋಧಿ ಮಾಸಾಚರಣೆ

ನಾಗಮಂಗಲ : ನಾವಿರುವ ಸುತ್ತಮುತ್ತಲಿನ ಪರಿಸರ ಹಾಗೂ ನೀರಿನ ಶುಚಿತ್ವ ಕಾಪಾಡಿಕೊಳ್ಳುವ ಮುಖಾಂತರ ಮಲೇರಿಯಾ ರೋಗದ ಪಿಡುಗನ್ನು ತೊಲಗಿಸಲು ಮುಂಜಾಗೃತ ಕ್ರಮ ವಹಿಸುವಂತೆ ಮಲೇರಿಯಾ ಜಿಲ್ಲಾ ನಿರ್ಮೂಲನಾ ಅಧಿಕಾರಿಗಳಾದ ಭವಾನಿಶಂಕರ್ ಕರೆ ನೀಡಿದರು.

ಅವರಿಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ನಾಗಮಂಗಲದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಿದ್ದ ಮಂಡ್ಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ಶ್ರೀ ಕ್ಷೇತ್ರದಿಂದ ಸಂಘಗಳ ಲಾಭಾಂಶ ವಿತರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು
;
ನಮ್ಮ ಮನೆಗಳ ಹಾಗೂ ನಾವಿರುವ ವಾಸಸ್ಥಳದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ಕೈಗೊಂಡು ಮುಂಗಾರಿನ ಸಂದರ್ಭದಲ್ಲಿ ಆಗುವ ತೊಂದರೆಗಳನ್ನು ಪದೇ ಪದೇ ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತೊಮ್ಮೆ ತಾವುಗಳು ಶುಚಿತ್ವವನ್ನು ಕಾಪಾಡಿಕೊಂಡು ಸೊಳ್ಳೆಗಳ ನಿರ್ಮೂಲನೆ ಮಾಡಿ ಮುಂಬರುವ ರೋಗಗಳನ್ನು ತಡೆಯಲು ಸಾಧ್ಯವೆಂದು ತಿಳಿಸಿದರು .

ಶ್ರೀಕ್ಷೇತ್ರವು ಕುಟುಂಬ ಸಮುದಾಯದ ಆರ್ಥಿಕ ಸಬಲತೆಯನ್ನು ಹೆಚ್ಚಿಸುವ ಗುರಿ ಶ್ರೀಕ್ಷೇತ್ರ ಮಾಡುತ್ತಿದ್ದು ಇದರೊಟ್ಟಿಗೆ ಸಂಘಗಳಿAದ ಉಳಿತಾಯದ ಲಾಭಾಂಶದ ಹಣವನ್ನುವಿತರಣೆ ಮಾಡುವುದರೊಂದಿಗೆ ನಮ್ಮಗಳ ಮುಂದಿನ ತಲೆಮಾರಿಗೆ ಪರಿಸರ ಜಾಗೃತಿಯನ್ನು ಸಂರಕ್ಷಿಸಿ ಸಸಿಗಳನ್ನು ಬೆಳೆಸುವುದರೊಂದಿಗೆ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನಾವುಗಳೆಲ್ಲರೂ ಮುಂದಾಗಬೇಕೆAದು ಶ್ರೀ ಕ್ಷೇತ್ರ ತಾಲ್ಲೂಕು ಕ್ಷೇತ್ರ ಅಧಿಕಾರಿ ಹೇಮಲತಾ ಹೆಗ್ಗಡೆಯವರು ಮಾತನಾಡಿದರು .

ವೇದಿಕೆಯಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಕುಂಜಿ. ಅಹಮದ್ ಕಾರ್ಯಕ್ರಮದ ಉದ್ಘಾಟನೆ ಮಾಡಿ ಆರೋಗ್ಯ ಸಿಬ್ಬಂದಿಗಳಿಗೆ ಬ್ಯಾಗ್ ವಿತರಣೆ ವಿತರಣೆಮಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಗಳಾದ ರಮೇಶ್ ಪುರಸಭಾ ಅಧ್ಯಕ್ಷರಾದ ಆಶಾ ಅವರು ವೇಣುಗೋಪಾಲ್ ರವರು ಅನೇಕ ಗಣ್ಯರು ಉಪಸ್ಥಿತರಿದ್ದರು .

ವರದಿ ; ದೇವಲಾಪುರ ಜಗದೀಶ್ ನಾಗಮಂಗಲ

error: