May 18, 2024

Bhavana Tv

Its Your Channel

ಸಚಿವ ಸುರೇಶ್ ಕುಮಾರ್ ಇರೊವರೆಗೂ ಶಾಲೆಗಳು ಉದ್ದಾರ ಆಗಲ್ಲ – ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ

ನಾಗಮಂಗಲ : ಸುರೇಶ್ ಕುಮಾರ್ ಅವರ ಯಡಬಿಡಂಗಿ ನಿರ್ಧಾರಗಳೇ ಇಂದಿನ ಶಿಕ್ಷಣ ಅವ್ಯವಸ್ಥೆಗೆ ಕಾರಣ. ನಾಗಮಂಗಲದಲ್ಲಿ ಮಾಜಿ ಸಂಸದ ಹಾಗೂ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಲ್ ಆರ್ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ನನ್ನ ಸ್ನೇಹಿತ, ಆದರೆ ಅವರಿಗೆ ಈ ಖಾತೆ ಸರಿಹೊಂದಲ್ಲ.
ಸರ್ಕಾರ ಖಾಸಗಿ ಶಾಲೆಗಳಿಗೆ ಯಾವುದೇ ಸವಲತ್ತು ನೀಡದೆ ಗದಾಪ್ರಹಾರ ಮಾಡುವುದು ಸರಿಯಲ್ಲ. ಟ್ಯಾಕ್ಸ್ ವಿನಾಯಿತಿ, ಇನ್ಸುರೆನ್ಸ್ ವಿನಾಯಿತಿ ನೀಡಿ ನಂತರ ನಮ್ಮ ಮೇಲೆ ಸರ್ಕಾರ ಅಧಿಕಾರ ಪ್ರಯೋಗಿಸಲಿ. ಶಾಲೆಗಳ ವ್ಯವಸ್ಥೆ ಎಂದರೆ ಸೌಹಾರ್ದಯುತವಾಗಿರಬೇಕು, ಆದರೆ ಸರ್ಕಾರ ಆ ನಿಟ್ಟಿನಲ್ಲಿ ನಡೆಸಿಕೊಳ್ಳುತ್ತಿಲ್ಲ. ಸರ್ಕಾರ ಕರೊನಾ ಹಾಗೂ ಶೈಕ್ಷಣಿಕವಾದ ತೀರ್ಮಾನಗಳೆರಡರಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿರೊದ್ರಿಂದ ಈ ರೀತಿ ಆಗ್ತಿದೆ ಅನಿಸುತ್ತದೆ. ಕೆಲವು ಸಚಿವರ ಸರ್ಕಾರದಂತೆ ಕಾಣುತ್ತಿದೆ. ಇನ್ನು ಕೆಲವು ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ.ಕರೊನಾ ಮೊದಲನೆ ಹಾಗೂ ಎರಡನೇ ಅಲೆಯಲ್ಲಿ ಜನರ ಹಿತಕಾಪಾಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಮೂರನೇ ಅಲೆಯಲ್ಲಿಯೂ ನಿಮ್ಮ ಜೀವ ನಿಮ್ಮ ಕೈಯಲ್ಲಿ ಎಂಬAತೆ ಜನರು ಜಾಗೃತರಾಗಬೇಕಿದೆ. ಸರ್ಕಾರವನ್ನು ನಂಬುವAತಿಲ್ಲ ಎಂದು ಹೇಳಿದರು
ವರದಿ ಚಂದ್ರಮೌಳಿ ನಾಗಮಂಗಲ

error: