May 18, 2024

Bhavana Tv

Its Your Channel

ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಗಾರ

ನಾಗಮಂಗಲ: ಪಟ್ಟಣದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಜಿಲ್ಲಾ ಪಂಚಾಯಿತಿ ಮಂಡ್ಯ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖಾ ವತಿಯಿಂದ ೨೦೨೧ನೇ ಸಾಲಿನ ಮಲೇರಿಯಾ ವಿರೋಧಿ ಜಾಗೃತಿ ಮೂಡಿಸಲು ಸಹಕಾರ ಕೋರಿ ತಾಲೂಕು ಮಟ್ಟದ ಮಾಸಾಚರಣೆಯ ಅಂಗವಾಗಿ. ಜನ ಜಾಗೃತಿ ಮೂಡಿಸಲು ಮಾಧ್ಯಮ ಮಿತ್ರರ ಸಹಕಾರ ಕೋರಿ ತಾಲ್ಲೂಕು ಮಟ್ಟದ ಅಡ್ವೊಕೇಸಿ ಕಾರ್ಯಗಾರವನ್ನು ಕೀಟ ಶಾಸ್ತ್ರಜ್ಞರಂದ ಜಾನೆಟ್ ಮೆನಿಂಜೈಟಿಸ್, ರವರು ನಡೆಸಿಕೊಟ್ಟರು.

ಇದೇ ವೇಳೆ ಮಾತನಾಡಿದರವರು ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ತೆಗೆದುಕೊಂಡಿದ್ದು ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರ ಸಭೆಗಳನ್ನು ನಡೆಸಿ, ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಿದ್ದು, ಆಯಾ ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಜ್ವರ ಪ್ರಕರಣಗಳು ವರದಿಯಾದ ತಕ್ಷಣ ಅಲ್ಲಿಗೆ ತಂಡದವರು ಭೇಟಿ ನೀಡಿ ಜ್ವರ ಹಾಗೂ ಲಾರ್ವಾ ಸಮೀಕ್ಷೆ ನಡೆಸಿ ತುರ್ತು ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುವಂತೆ ಕ್ರಮ ವಹಿಸಲಾಗಿದೆ.
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ/ಕಿರಿಯ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ದಿನನಿತ್ಯದ ಕರ್ತವ್ಯದಲ್ಲಿ ಮನೆಮನೆ ಭೇಟಿ ನೀಡಿ ಜ್ವರ ಸಮೀಕ್ಷೆ ಹಾಗೂ ಈಡೀಸ್ ಲಾರ್ವಾ ಸಮೀಕ್ಷೆ ನಿರ್ವಹಿಸಿ, ಲಾರ್ವಾ ಕಂಡುಬAದ ತಾಣಗಳನ್ನು ಖಾಲಿ ಮಾಡಿಸುವುದರ ಮುಖಾಂತರ ಮಲೇರಿಯಾ, ಡೆಂಗ್ಯೂ/ಚಿಕುನ್‌ಗುನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಮತ್ತು ಗ್ರಾಮ – ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿ ರೋಗ ನಿಯಂತ್ರಣಕ್ಕೆ ಸಹಕಾರ ನೀಡುವಂತೆ ಕೋರಲಾಗಿದ್ದು ಈಗಾಗಲೇ ಎಲ್ಲಾ ತಾಲ್ಲೂಕುಗಳಲ್ಲೂ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳೂ ಸಹಾ ಸಮೀಕ್ಷಾ ಕಾರ್ಯದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕಾರಬೇಕೆಂದು ಮನವಿ ಮಾಡಿದರು.
ಮಲೇರಿಯಾ ಡೆಂಗ್ಯೂ ಚಿಕನ್ ಗುನ್ಯಾ ಮುಂತಾದ ಕಾಯಿಲೆಗಳು ಕೂಡ ನಮ್ಮೊಡನೆ ಇವೆ. ಇವುಗಳ ಕುರಿತು ನಾವು ಎಚ್ಚರಿಕೆಯಿಂದ ಇರಬೇಕು ಇವುಗಳನ್ನು ನಾವು ನಿರ್ಲಕ್ಷಿಸದೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಮೂಲಕ ಸೊಳ್ಳೆಗಳ ಹುಟ್ಟು ಮತ್ತು ಪ್ರಸರಣವನ್ನು ತಡೆಯಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬAದರೆ ತಕ್ಷಣ ಪ್ರಾಥಮಿಕ ಆರೊ?ಗ್ಯ ಕೇಂದ್ರದ ಸಹಾಯಕರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ: ರಮೇಶ್, ಆರೋಗ್ಯ ನಿರೀಕ್ಷಕ ಸಿದ್ದಲಿಂಗಪ್ಪ, ಕಚೇರಿಯ ಸಿಬ್ಬಂದಿ ಗಳು ಹಾಗೂ ತಾಲ್ಲೂಕು ಮಟ್ಟದ ಪತ್ರಿಕಾ ಮಾಧ್ಯಮದವರು ಭಾಗವಹಿಸಿದ್ದರು.

ವರದಿ ಚಂದ್ರಮೌಳಿ ಮಳವಳ್ಳಿ

error: