May 18, 2024

Bhavana Tv

Its Your Channel

ಬೇಗಮಂಗಲ ಗ್ರಾಮಸ್ಥರಿಗೆ ಪೊಲೀಸರಿಂದ ದೌರ್ಜನ್ಯ ,ಖಂಡಿಸಿ ಮಹಿಳೆಯರ ಪ್ರತಿಭಟನೆ.

ನಾಗಮಂಗಲ. ಅರ್ಧರಾತ್ರಿಯಲ್ಲಿ ಬಂಧಿಸಲು ಬಂದಿದ್ದ ಪೊಲೀಸರ ದರ್ಪ, ದೌರ್ಜನ್ಯ ಖಂಡಿಸಿ ಊರಿನ ಮಹಿಳೆಯರು ಗ್ರಾಮದಲ್ಲಿ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೇಗಮಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅರ್ಧ ರಾತ್ರಿಯಲ್ಲಿ ಅರ್ಚಕನ ಮೇಲಿನ ಹಲ್ಲೆ ಸಂಬAಧ ಆರೋಪಿಗಳನ್ನು ಬಂಧಿಸಲು ತಮ್ಮೂರಿನ ಗ್ರಾಮಕ್ಕೆ ಅರ್ಧರಾತ್ರಿ ಬಂದು ದೌರ್ಜನ್ಯ ದರ್ಪ ತೋರಿದ ಪೊಲೀಸರ ಕ್ರಮದ ವಿರುದ್ದ ಬೇಗಮಂಗಲ ಗ್ರಾಮದ ಮಹಿಳೆಯರು ತಿರುಗಿ ಬಿದ್ದಿದ್ದಾರೆ.

ಇತ್ತೀಚೆಗೆ ಈ ಗ್ರಾಮದಲ್ಲಿ ಲಿಂಗಾಯಿತ ಸಮುದಾಯ ಅರ್ಚಕನ ಜಮೀನ ವಿಚಾರದಲ್ಲಿ ಅರ್ಚಕ ರವಿಶಾಸ್ತ್ರಿ ಮತ್ತು ಊರ ಗ್ರಾಮಸ್ಥರ ನಡುವೆ ಗಲಾಟೆ ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಇದ್ರಿಂದ ಆಕ್ರೋಶಗೊಂಡ ಊರಿನ ಗ್ರಾಮಸ್ಥರು ಪೊಲೀಸರಿಗೆ ದೂರುಕೊಟ್ಟ ಅರ್ಚಕನ ಮೇಲೆ ಹಲ್ಲೆ ನಡೆಸಿದ್ರು ಎನ್ನಲಾಗಿದೆ. ಈ ಸಂಬAಧ ಅರ್ಚಕನ ಸಂಬAಧಿಕರು ದೂರು ಕೊಟ್ಟಿದ್ರು. ಪ್ರಕರಣಕ್ಕೆ ಸಂಬoಧಪಟ್ಟoತೆ ಆರೋಪಿಗಳನ್ನು ಬಂಧಿಸಲು ಪೊಲೀಸರು ರಾತ್ರಿ ಊರಿಗೆ ತೆರಳಿದ್ರು. ಈ ವೇಳೆ ಊರಿನ ಜನರು ಮನೆ ಬಾಗಿಲು ಹಾಕಿಕೊಂಡು ಬೆಳಿಗ್ಗೆ ಬರುವಂತೆ ತಿಳಿಸಿದ್ರು. ಬಾಗಿಲು ತೆರೆಯದ ಕಾರಣ ಪೊಲೀಸರು ಮನೆ ಬಾಗಿಲು ಮುರಿದು ಒಳ ಪ್ರವೇಶ ಮಾಡಿ ಎಳೆದೊಯ್ಯುವುದಾಗಿ ತಿಳಿಸಿದ್ದರು. ಕೊನೆಗೆ ವಾಪಸ್ಸು ತೆರಳಿದ್ರು.
ಇಂದು ಪೊಲೀಸರ ದೌರ್ಜನ್ಯ ಖಂಡಿಸಿ ಊರಿನಲ್ಲಿ ೫೦ ಕ್ಕೂ ಹೆಚ್ಚು ಮಹಿಳೆಯರು ಪೊಲೀಸರ ಕ್ರಮದ ವಿರುದ್ದ ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ರು.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬೇಬಿ ಮಠದ ಸ್ವಾಮೀಜಿ ಕಡೆಯಿಂದ ಒತ್ತಡ ಇದೆ ಎಂದು ಅರ್ಧರಾತ್ರಿಯಲ್ಲಿ ಬಂಧಿಸಲು ಬಂದ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ.ಕೂಡಲೇ ತಾಲೂಕು ಆಡಳಿತ ಮದ್ಯ ಪ್ರವೇಶ ಮಾಡಿ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಇಲ್ಲದಿದ್ದರೆ ಸಾಮೂಹಿಕವಾಗಿ ಗ್ರಾಮಸ್ಥರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ವರದಿ: ಚಂದ್ರಮೌಳಿ ನಾಗಮಂಗಲ

error: