May 18, 2024

Bhavana Tv

Its Your Channel

ಮನ್ ಮುಲ್ ಡೈರಿ ಭ್ರಷ್ಟಾಚಾರದಿಂದ ತುಂಬಿದೆ ರೈತರ ಸಂಸ್ಥೆ ಕಾಪಾಡುವುದು ನಮ್ಮೆಲ್ಲರ ಹೊಣೆ- ಜವರೇಗೌಡ

ನಾಗಮಂಗಲ: ಕಳೆದ ಮೂರು ದಿನಗಳಿಂದ ಮಂಡ್ಯ ಜಿಲ್ಲೆ ಮನ್ಮುಲ್ ಡೈರಿಯ ಹಾಲಿಗೆ ನೀರು ಬೆರೆಸಿದ ಪ್ರಕರಣವಾಗಿ ಜಿಲ್ಲಾಧ್ಯಂತ ಸುದ್ದಿಯಾಗಿತ್ತು ಪ್ರಮುಖವಾಗಿ ಮಾಜಿ ಸಚಿವ ಚೆಲುವರಾಯಸ್ವಾಮಿ ಹಾಗೂ ಮಾಜಿ ಮನ್ಮುಲ್ ಅಧ್ಯಕ್ಷ ನಾಗಮಂಗಲ ತಾಲೂಕಿನ ತುಬಿನಕೆರೆ ಜವರೇಗೌಡ ಈ ಇಬ್ಬರು ನಾಯಕರು ಮಾತನಾಡಿದ್ದ ಆಡಿಯೋ ಹೊರಬಿದ್ದ ಹಿನ್ನೆಲೆ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿ ಈ ಸಂಬAಧ ರಾಜಕೀಯ ನಾಯಕರ ಪರ-ವಿರೋಧ ಕೆಸರೆರಚಾಟ ಪ್ರಾರಂಭವಾಗಿತ್ತು

ಮನ್ಮುಲ್ ಡೈರಿ ವಿಚಾರವಾಗಿ ಪ್ರಮುಖವಾಗಿ ನಾಗಮಂಗಲ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರು ಮತ್ತು ಜವರೇಗೌಡರು ಆಡಿಯೋ ಸಂಬoಧ ನಾಗಮಂಗಲ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದರು. ಆಡಿಯೋ ಬಹಿರಂಗಗೊoಡಿದೆ ಚೆಲುವರಾಯಸ್ವಾಮಿ ಮತ್ತು ಮುಖಂಡರಿಗೆ ಈಗಾಗಲೇ ಕ್ಷಮೆ ಕೋರಿದ್ದೇನೆ ಮತ್ತೊಮ್ಮೆ ಕೂಡ ನಾನು ಬಹಿರಂಗವಾಗಿ ಕ್ಷಮೆ ಕೋರುತ್ತೇನೆ ವೈಯಕ್ತಿಕವಾಗಿ ಮಾತನಾಡಿದ್ದು ಬಹಿರಂಗಗೊoಡಿದ್ದು ನನಗೂ ಕೂಡ ಬೇಸರ ತರಿಸಿದೆ ಎಂದರು

ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮನ್ಮುಲ್ ಡೈರಿ ಉಳಿಸುವ ಸಂಬAಧ ಪಕ್ಷಾತೀತವಾಗಿ ಸಂಘಟನೆ ಮಾಡಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ೨೦೧೪ರ ನಂತರ ಸಂಘದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು ದೂರುಗಳು ಕೂಡ ಸಲ್ಲಿಕೆಯಾಗಿದ್ದು ಕೇಸು ದಾಖಲಾಗಿದೆ ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಮನ್ಮುಲ್ ಡೈರಿಯಲ್ಲಿ ಹಲವಾರು ಅವ್ಯವಹಾರಗಳು ನಡೆದಿರುವುದು ಕಟು ಸತ್ಯವಾಗಿದೆ

ಹಾಲಿಗೆ ನೀರು ಬೆರೆಸಿದ ಪ್ರಕರಣ ವಲ್ಲದೆ ಇನ್ನು ಹಲವಾರು ಪ್ರಕರಣಗಳು ಬೆಳಕಿಗೆ ಬಂದಿಲ್ಲ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಬಿಐಗೆ ವಹಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕು ಆಗ ಮಾತ್ರ ಈ ರೈತರ ಸಂಘವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು

ನೀವು ಪ್ರಾಮಾಣಿಕವಾಗಿದ್ದರೆ ತನಿಖೆಗೆ ಅವಕಾಶ ನೀಡಿ ನಾವು ಕೂಡ ಅಲ್ಲಿ ಅಧಿಕಾರ ನಡೆಸಿ ಬಂದಿದ್ದೇವೆ ನಮಗೂ ಕೂಡ ಅಲ್ಲಿನ ಅವ್ಯವಹಾರಗಳು ಪ್ರತಿಯೊಂದು ತಿಳಿದಿದೆ ಪಕ್ಷಾತೀತವಾಗಿ ಬರುತ್ತೇವೆ ಸಮಗ್ರವಾಗಿ ತನಿಖೆ ನಡೆಸಿ ಎಂದರು ಎಲ್ಲವೂ ಗೊತ್ತಿದ್ದರೂ ಕೂಡ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ಏಕೆ ಮನ್ ಮುಲ್ ಡೈರಿ ಉಳಿಸಿ ಸಮಿತಿಯಿಂದ ನಾವುಗಳು ಬರುತ್ತೇವೆ ನಾವು ಕೇಳಿದಂಥ ಲೆಕ್ಕಚಾರ ನೀಡಿದರೆ ಇಡೀ ಪ್ರಕರಣವನ್ನು ಹೊರಬರುತ್ತದೆ ಬರುತ್ತದೆ ಇನ್ನಾದರೂ ಪ್ರಾಮಾಣಿಕವಾಗಿ ರೈತರಿಗೆ ಮೋಸವಾಗದಂತೆ ನಡೆದುಕೊಳ್ಳಿ ಎಂದರು

ವರದಿ ಚಂದ್ರಮೌಳಿ ನಾಗಮಂಗಲ

error: