May 21, 2024

Bhavana Tv

Its Your Channel

ಕೋವಿಡ್ ನಿಯಮಗಳನ್ನು ಪಾಲಿಸಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ -ದಂಡಾಧಿಕಾರಿ ಕುಂಜಿ ಅಹಮ್ಮದ್

ನಾಗಮಂಗಲ. ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ಪರಿಸರ ಸ್ನೇಹಿ ಗಣಪತಿಯನ್ನು ಇಟ್ಟು ಪೂಜಿಸುವುದರ ಮೂಲಕ ಗಣೇಶೋತ್ಸವವನ್ನು ಸರ್ಕಾರಿ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸರಳವಾಗಿ ಹಬ್ಬವನ್ನು ಆಚರಿಸಬೇಕೆಂದು ತಹಶಿಲ್ದಾರ್ ಕುಂಜಿ ಅಹಮದ್ ಸಾರ್ವಜನಿಕರಲ್ಲಿ ಮನವಿ ಮಾಡಿದರು

ಕರೋನವೈರಸ್ ಮಹಾಮಾರಿ ಎಲ್ಲೆಡೆ ಹಬ್ಬುತಿದ್ದು ಸರ್ಕಾರ ಮುಂಜಾಗ್ರತೆ ಕ್ರಮವಾಗಿ ಗಣೇಶೋತ್ಸವ ಆಚರಿಸಲು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ ಭಕ್ತ ಮಹಾಶಯರು ಮತ್ತು ಸಾರ್ವಜನಿಕರು ಕೋವಿಡ್ ನಿಯಮಾವಳಿಯನ್ನು ಪಾಲಿಸಬೇಕಾದ್ದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ

ಬಯಲು ಪ್ರದೇಶದಲ್ಲಿ ಕನಿಷ್ಠ ಜನರೊಂದಿಗೆ ಎರಡು ಅಡಿ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಸ್ಥಳೀಯ ಪುರಸಭೆ. ಪಟ್ಟಣ ಪಂಚಾಯತಿ. ಗ್ರಾಮ ಪಂಚಾಯಿತಿ. ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪತ್ರ ಪಡೆಯಬೇಕು ಗಣೇಶೋತ್ಸವ ವಿಸರ್ಜನೆ ಸಂಬAಧದಲ್ಲಿ ಹೆಚ್ಚಿನ ಜನಸಂಖ್ಯೆ ಸೇರುವಂತಿಲ್ಲ ಮೆರವಣಿಗೆ ಹಾಗೂ ಸಂಗೀತ-ನೃತ್ಯ .ಡಿ.ಜೆ .ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಇರುವುದಿಲ್ಲ

ಸದ್ಭಕ್ತರು ಕರೋನಾ ಮಹಾಮಾರಿ ವೈರಸ್ ಹಬ್ಬಿರುವ ಈ ಸಂದರ್ಭದಲ್ಲಿ ಪಾರಂಪರಿಕ ಗಣೇಶಮೂರ್ತಿ ಆಚರಣೆಯನ್ನು ಸರಳವಾಗಿ ಆಚರಿಸಿಕೊಂಡು ತಾಲೂಕಾಡಳಿತ ಸಹಕರಿಸಬೇಕೆಂದು ತಿಳಿಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: