April 30, 2024

Bhavana Tv

Its Your Channel

ಮೀಸಲಾತಿ ಪಾಲಿಸದ ಕದಬಹಳ್ಳಿ ಗ್ರಾಮ ಪಂಚಾಯತಿ

ನಾಗಮoಗಲ.ಮoಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಕದಬಹಳ್ಳಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಪಂಚಾಯತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡುವಾಗ ಸಂವಿಧಾನಾತ್ಮಕವಾಗಿ ಪಾಲಿಸಬೇಕಾಗಿರುವ ಮೀಸಲಾತಿ ನಿಯಮವನ್ನು ಪಿಡಿಒ ಯೋಗಾನಂದ್ ಗಾಳಿಗೆ ತೂರುವ ಮೂಲಕ ದಲಿತ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ ಎಂದು ಕದಬಹಳ್ಳಿ ಗ್ರಾಮಸ್ಥರು ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಆರೋಪಿಸಿದ್ದಾರೆ.

ದಲಿತ ಸಮುದಾಯದ ಮುಖಂಡ ಮುಳುಕಟ್ಟೆ ಶಿವರಾಮಯ್ಯ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಿಸಲು ನಿಗದಿಪಡಿಸಲಾಗಿದ್ದ ಜಾಗದಲ್ಲೇ ಅಂಗಡಿ ಮಳಿಗೆ ನಿರ್ಮಿಸುವ ಮೂಲಕ ಶೋಷಿತ ಸಮುದಾಯವನ್ನು ಅವಮಾನಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ನಿರ್ದೇಶಕ ಸಿ.ಬಿ.ನಂಜುAಡಯ್ಯ ಮಾತನಾಡಿ, ಗ್ರಾಮ ಪಂಚಾಯತಿಯಿAದ ನಿರ್ಮಿಸಿರುವ ವಾಣಿಜ್ಯ ಮಳಿಗೆಯ ಜಾಗ ಕದಬಹಳ್ಳಿ ಗ್ರಾಮದ ಕಾವೇಟಿ ರಂಗನಾಥಸ್ವಾಮಿ ಮುಜರಾಯಿ ದೇವಾಲಯದ್ದಾಗಿದೆ. ಅಲ್ಲದೆ ಮುಖ್ಯ ರಸ್ತೆಯಿಂದ ಕಟ್ಟಡಕ್ಕಿರಬೇಕಾಗಿರುವ ನಿಗದಿತ ಅಂತರದ ನಿಯಮವನ್ನು ಪಾಲಿಸಿಲ್ಲ. ಇಷ್ಟಲ್ಲದೆ ಹರಾಜು ಮಾಡುವಾಗ ಪಾಲಿಸಬೇಕಿರುವ ಮೀಸಲಾತಿ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯತಿ ಪಿಡಿಒ ಯೋಗಾನಂದ್ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಎಚ್ಚರಿಸಿದರು.

ಈ ಬಗ್ಗೆ ಸ್ಥಳೀಯರಾದ ರುಕ್ಮಿಣಿ, ರಂಗಸ್ವಾಮಿ, ಶಿವಮ್ಮ ಹಾಗೂ ಶಿವಲಿಂಗಯ್ಯ ಗ್ರಾಮ ಪಂಚಾಯತಿ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವರದಿ: ಚಂದ್ರಮೌಳಿ ನಾಗಮಂಗಲ

error: